ಬೆಂಗಳೂರು : ಬೆಂಗಳೂರಿನ ಹುಣಸಮಾರನಹಳ್ಳಿ ಬಳಿ ಚಿರತೆ ಪ್ರತ್ಯಕ್ಷವಾಗಿದೆ. ಯಲಹಂಕ ಏರ್ಫೋಸ್ನ ಹಿಂಭಾಗದ ಕೆರೆ ಪ್ರದೇಶದಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಕಟ್ಟಡ ಕಾರ್ಮಿಕರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಇದೀಗ ಈ ವೀಡಿಯೋ ವೈರಲ್ ಆಗಿದೆ. ಇದರಿಂದ ಜನರು ಆತಂಕಗೊಂಡಿದ್ದಾರೆ.
ನೆಲ್ಲಕುಂಡೆ, ಗಂಡಿಗೆಹಳ್ಳಿ ನಡುವೆ ಸುಳಿದಾಡುತಿದೆ ಎಂದು ತಿಳಿದುಬಂದಿದ್ದು, ಕೂಡಲೇ ಸ್ಥಳೀಯರು ಯಲಹಂಕ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕಳೆದ ಭಾನುವಾರವು ಸಹ ಚಿರತೆ ಪ್ರತ್ಯಕ್ಷವಾಗಿತ್ತು. ಇದೀಗ ಮತ್ತೊಮ್ಮೆ ಚಿರತೆ ಕಾಣಿಸಿಕೊಂಡಿದ್ದು, ಜನ ಭಯಭೀತರಾಗಿದ್ದಾರೆ.
ಪದೇಪದೆ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಭಯವಾಗ್ತಿದೆ. ಮಕ್ಕಳು ಹಾಗೂ ಮಹಿಳೆಯರು ಹೆಚ್ಚಾಗಿ ಇಲ್ಲಿ ಓಡಾಡುತ್ತಾರೆ. ಹುಣಸಮಾರನಹಳ್ಳಿಯಲ್ಲಿ ಬೆಳಗ್ಗೆ ಜನರು ವಾಕಿಂಗ್ ಬರ್ತಾರೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಇಂದು ನಟ ದರ್ಶನ್ ಪಾಲಿಗೆ ಬಿಗ್ ಡೇ.. ಮಧ್ಯಂತರ ಜಾಮೀನು ಸಿಗುತ್ತಾ?
Post Views: 102