ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಸೂಕ್ತ ಚಿಕಿತ್ಸೆಯ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಗಿದಿದ್ದು, ಆದೇಶವನ್ನು ಹೈಕೋರ್ಟ್ ನ್ಯಾಯಾಧೀಶರಾದ ವಿಶ್ವಜೀತ್ ಶೆಟ್ಟಿ ಅವರ ಪೀಠ ಇಂದಿಗೆ ಕಾಯ್ದಿರಿಸಿದೆ.
ನಿನ್ನೆ ಹೈಕೋರ್ಟ್‌ನಲ್ಲಿ ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ಅವರು ವಾದ ಮಂಡಿಸಿದ್ದು, ವೈದ್ಯರು MRI ಮತ್ತು ಸ್ಕ್ಯಾನ್ ಮಾಡಿದ್ದಾರೆ. ರೋಗಿಗೆ ಬೆನ್ನಿನ ನರದ L5 – S1 ಡಿಸ್ಕ್ ಸಮಸ್ಯೆ ಇದೆ. ಆರೋಪಿ ತನಗೆ ಬೇಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಪ್ರಾಸಿಕ್ಯೂಷನ್ ಇಂತಹ ಆಸ್ಪತ್ರೆಯಲ್ಲಿ ತಗೋಬೇಕು ಅಂತ ಹೇಳಲು ಸಾಧ್ಯವಿಲ್ಲ. ಆರೋಪಿಗೆ ನಂಬಿಕೆ ಇರುವ ಕಡೆ ಸೂಕ್ತ ಚಿಕಿತ್ಸೆ ತಗೋಬಹುದು. ಕಾನೂನಿನಲ್ಲಿ ಆರೋಪಿಗೆ ಅವನ ಇಷ್ಟದ ಕಡೆ ಚಿಕಿತ್ಸೆ ಪಡೆಯಬಹುದು. ದರ್ಶನ್ ತನ್ನ ವೆಚ್ಚದಲ್ಲಿ ತನಗೆ ಬೇಕಾದ ಕಡೆ ತಗೋಬಹುದು. ವೈದ್ಯಕೀಯ ವರದಿಯ ಬಗ್ಗೆ ಯಾರು ಅನುಮಾನ ಪಡುವಂತಿಲ್ಲ. ಹೀಗಾಗಿ ನಮಗೆ ಮಧ್ಯಂತರ ಜಾಮೀನು ನೀಡಲು ಕೋರುತ್ತೇನೆ ಎಂದು ವಾದಿಸಿದ್ದರು.
ಹೀಗೆ ಅನೇಕ ವೈದ್ಯಕೀಯ ವರದಿಯ ಅಂಶಗಳನ್ನು ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ಹಾಗೂ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ವಾದಿಸಿದರು. ಎರಡು ಕಡೆ ವಕೀಲರ ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು, ದರ್ಶನ್‌ಗೆ ವೈದ್ಯರು ಏನು ಶಿಫಾರಸ್ಸು ಮಾಡಿದ್ದಾರೆ. ಅದಕ್ಕೆ ಅಪರೇಷನ್ ಅವಶ್ಯಕತೆ ಇದೆಯಾ? ಅದರಲ್ಲೂ ಕೈದಿಯಾಗಿ ಸರ್ಕಾರದ ಕಡೆಯಿಂದ ಚಿಕಿತ್ಸೆ ಅವಕಾಶ ಇದೆಯಾ? ಮಧ್ಯಂತರ ಜಾಮೀನು ಪಡೆದು ಹೊರಗೆ ಚಿಕಿತ್ಸೆ ಬೇಕಾ? ಅನ್ನೋದರ ಬಗ್ಗೆ ಆದೇಶವನ್ನು ಇಂದು ಪ್ರಕಟಿಸಲಿದ್ದಾರೆ. ಹಾಗಾಗಿ ಇವತ್ತೇ ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಗುತ್ತಾ ಅನ್ನೋದು ಕುತೂಹಲ ಕೆರಳಿಸಿದೆ.
ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕರೆ ಬೆಂಗಳೂರು ಅಥವಾ ಮೈಸೂರಿಯಲ್ಲಿ ಅವರಿಗೆ ಸರ್ಜರಿ ಅಥವಾ ಹೆಚ್ಚುವರಿ ಚಿಕಿತ್ಸೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಜಾಮೀನು ಸಿಗದಿದ್ದರೆ ಬಳ್ಳಾರಿಯಲ್ಲೇ ಅವರಿಗೆ ಚಿಕಿತ್ಸೆ ಕೊಡಿಸುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ. ಒಟ್ಟಿನಲ್ಲಿ ಇಂದು ದರ್ಶನ್ ಅವರ ಬೇಲ್ ಭವಿಷ್ಯ ಏನು ಎಂಬುದು ಗೊತ್ತಾಗಲಿದೆ.
ಇದನ್ನೂ ಓದಿ : ಕುಡಿದ ಮತ್ತಿನಲ್ಲಿ ರಸ್ತೆ ಮಧ್ಯೆ ವಿಚಿತ್ರವಾಗಿ ಡಾನ್ಸ್ ಮಾಡಿದ ವ್ಯಕ್ತಿ – ಇದೆಂಥಾ ಅವಸ್ಥೆ ಎಂದ ನೆಟ್ಟಿಗರು..!