ಕುಡಿದ ಮತ್ತಿನಲ್ಲಿ ಕುಡುಕರಿಗೆ ತಾವು ಏನು ಮಾಡ್ತಿದ್ದೇವೆ ಎಂಬ ಪರಿಜ್ಞಾನವೇ ಇರುವುದಿಲ್ಲ. ನಶೆಯಲ್ಲಿ ಕುಡುಕ ಮಹಾಶಯರು ಇತರರಿಗೆ ಬೈಯುತ್ತಾ, ಜಗಳವಾಡುತ್ತಾ ಏನಾದ್ರೂ ಒಂದು ಅವಾಂತರಗಳನ್ನು ಮಾಡಿಕೊಂಡಂತಹ ಸಾಕಷ್ಟು ಘಟನೆಗಳು ನೋಡಿರುತ್ತೇವೆ.
ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಇಲ್ಲೊಬ್ಬ ಕುಡುಕ ಫುಲ್ ಟೈಟ್ ಆಗಿ ರಸ್ತೆ ಮಧ್ಯೆ ಚಿತ್ರ ವಿಚಿತ್ರವಾಗಿ ಡಾನ್ಸ್ ಮಾಡಿದ್ದಾನೆ. ಅಷ್ಟೇ ಅಲ್ಲದೆ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇದೆಂಥಾ ಅವಸ್ಥೆ ಎಂದು ನೆಟ್ಟಿಗರು ತಲೆ ಚಚ್ಚಿಕೊಂಡಿದ್ದಾರೆ.
ಇನ್ನೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗೆ “ಮದ್ಯದ ಅಮಲಿನಲ್ಲಿ ಕುಡುಕನೊಬ್ಬ ರಸ್ತೆಯಲ್ಲಿ ವಿಚಿತ್ರವಾಗಿ ವರ್ತಿಸಿ ವಾಹನ ಸವಾರರಿಗೆ ಅಡ್ಡಿಯುಂಟು ಮಾಡಿದ್ದಾನೆ” ಎಂಬ ಶೀರ್ಷಿಕೆಯನ್ನು ಬರೆಯಾಗಿದೆ. ಈ ವಿಡಿಯೋ ಕೆಲವರು ಸೂಪರ್ ಡ್ಯಾನ್ಸ್ ಎಂದು ಕಾವೆಂಟ್ ಮಾಡಿದರೇ, ಇನ್ನೂ ಕೆಲವರು ಇದೆಂಥಾ ಅವಸ್ಥೆ ಎಂದು ಕಮೆಂಟ್ ಹಾಕಿದ್ದಾರೆ.
ಇದನ್ನೂ ಓದಿ : ಮುಡಾ ಕೇಸ್ : ಮುಡಾ ಮಾಜಿ ಆಯುಕ್ತ ನಟೇಶ್ ED ವಶಕ್ಕೆ..!
Post Views: 71