ಸೆಲೆಬ್ರೆಟಿಗಳ ಲವ್, ರಿಲೇಷನ್‌ಶಿಪ್, ಬ್ರೇಕಪ್ ಸರ್ವೇ ಸಾಧಾರಣ ಎನ್ನುವಂತಾಗಿದೆ. ಕೆಲವು ತಿಂಗಳ ಹಿಂದೆಯಷ್ಟೇ ಚಂದನವನದಲ್ಲಿ ಸ್ಟಾರ್ ಜೋಡಿ ಎಂದೇ ಖ್ಯಾತಿ ಪಡೆದಿದ್ದ ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್ ಪಡೆದು ದೂರಾಗಿದ್ದರು. ಇದೀಗ ಈ ಬೆನ್ನಲ್ಲೇ ರಾಜಾ-ರಾಣಿ ಖ್ಯಾತಿಯ ಮತ್ತೊಂದು ಜೋಡಿ ದೂರ ಆಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.
ಹೌದು, ಬಿಗ್ ಬಾಸ್ ಮೂಲಕ ಖ್ಯಾತಿ ಗಳಿಸಿದ ನಟಿ ಜಯಶ್ರೀ ಆರಾಧ್ಯ ಲೈಫ್ನಲ್ಲಿ ಬಿರುಗಾಳಿ ಎದ್ದಿದೆ. ಬಿಗ್‌ಬಾಸ್ ಓಟಿಟಿ ಶೋ ಬಳಿಕ ಸ್ಟೀವನ್ ಜೊತೆ ಜಯಶ್ರೀ ‘ರಾಜಾ-ರಾಣಿ’ ಶೋನಲ್ಲಿ ಒಟ್ಟಿಗೆ ಭಾಗವಹಿಸಿದ್ದರು. ದಂಪತಿ ಶೋನಲ್ಲಿ ಮದುವೆಯಾಗದ ಜೋಡಿಯೊಂದು ಹೀಗೆ ಒಟ್ಟಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಜೋಡಿ ರಾಜಾ ರಾಣಿ ಶೋಗೆ ಕಾಲಿಟ್ಟಾಗಿದ್ದಗಿನಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿತ್ತು. ಇದಕ್ಕೆ ಕಾರಣ ಅವರ ಮದುವೆ ವಿಚಾರ.
ನಟಿ ಜಯಶ್ರೀ ಅವರು ರಾಜಾ-ರಾಣಿ’ ಶೋನಲ್ಲಿ ಲಿವ್ ಇನ್ ರಿಲೇಷನ್ ಬಗ್ಗೆ ತಿಳಿಸಿದ್ದರು. ಶಾಸ್ತ್ರೋಕ್ತವಾಗಿ ನಾವು ಮದುವೆ ಆಗಿಲ್ಲ. ಆದರೆ ಪತಿ ಪತ್ನಿ ಹೇಗೆ ಇರುತ್ತಾರೋ ನಾವು ಹಾಗೇ ಇದ್ದೀವಿ. ನಮಗೆ ಮದುವೆ ಆಗಬಾರದು ಅಂತೇನಿಲ್ಲ. ಯಾಕೋ ಮದುವೆಗೆ ಟೈಮ್ ಕೂಡಿ ಬಂದಿಲ್ಲ ಅಂತ ಹೇಳಿಕೊಂಡಿದ್ರು. ಇದಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ರಾಜಾರಾಣಿ ಶೋನಲ್ಲಿ ಫ್ಯಾಮಿಲಿ ರೌಂಡ್ ಅಂತ ಬಂದಾಗ ನಿಶ್ಚಿತಾರ್ಥದ ಕಾರ್ಯಕ್ರಮಗಳು ಜರುಗಿದ್ವು. ಹ್ಯಾಪಿ ಜೋಡಿ, ಕ್ಯೂಟ್ ಕಪಲ್ ಅಂತ ಕರಿಸಿಕೊಂಡಿದ್ರು ಜಯಶ್ರೀ-ಸ್ಟಿವ್. ಶೀಘ್ರದಲ್ಲೇ ಮದುವೆ ಆಗುತ್ತೇವೆ ಅಂತ ಕೂಡ ಅನೌನ್ಸ್ ಮಾಡಿದ್ದರು.
ಸದ್ಯ ಈ ಜೋಡಿಯ ಬ್ರೇಕಪ್ ಆಗಿರೋ ಸುದ್ದಿ ಎಲ್ಲೇಡೆ ಹರಿದಾಡ್ತಿದೆ. ಇನ್ನೂ ಇದಕ್ಕೆ ಸಾಕ್ಷಿ ಎಂಬಂತೆ ಜಯಶ್ರೀ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪರಸ್ಪರ ಅನ್ ಫಾಲೋ ಮಾಡಿಕೊಂಡಿದ್ದಾರೆ. ಅಷ್ಟೇಯಲ್ಲ, ಜೊತೆಗಿರುವ ಫೋಟೋಗಳನ್ನ ಡಿಲೀಟ್ ಮಾಡಿದ್ದಾರೆ. ಆದರೆ ಇವರೆಗೆ ಜಯಶ್ರೀ- ಸ್ಟೀವನ್ ಇಬ್ಬರೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಭಾರೀ ಸದ್ದು ಮಾಡ್ತಿದೆ.
ಇದನ್ನೂ ಓದಿ : ಉಗ್ರರ ಗುಂಡಿಗೆ ಸೇನೆಯ ಸೂಪರ್ ಹೀರೋ ‘ಫ್ಯಾಂಟಮ್’ ಬಲಿ.. ವೀರ ಮರಣವನ್ನಪ್ಪಿದ ಶ್ವಾನಕ್ಕೆ ಕಣ್ಣೀರ ವಿದಾಯ..!