Download Our App

Follow us

Home » ರಾಜಕೀಯ » ಬಿಜೆಪಿ ಅವಧಿಯಲ್ಲೇ ರೈತರಿಗೆ ನೋಟಿಸ್ – ದಾಖಲೆ ಬಿಡುಗಡೆ ಮಾಡಿ ಕಾಂಗ್ರೆಸ್​​ ಟಾಂಗ್​..!

ಬಿಜೆಪಿ ಅವಧಿಯಲ್ಲೇ ರೈತರಿಗೆ ನೋಟಿಸ್ – ದಾಖಲೆ ಬಿಡುಗಡೆ ಮಾಡಿ ಕಾಂಗ್ರೆಸ್​​ ಟಾಂಗ್​..!

ವಿಜಯಪುರ : ವಿಜಯಪುರ ಜಿಲ್ಲೆಯ ರೈತರಿಗೆ ವಕ್ಫ್‌ ಬೋರ್ಡ್​ನಿಂದ  ನೋಟಿಸ್ ವಿಚಾರ ಸದ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್​ ನಾಯಕರ ಮಧ್ಯೆ ವಾಕ್​ ಸಮರಕ್ಕೂ ಕಾರಣವಾಗಿದೆ. ವಕ್ಫ್​​ ನೋಟಿಸ್ ವಿಚಾರಕ್ಕೆ ಬಿಜೆಪಿ ಅಧ್ಯಯನ ಟೀಂ ಎಂಟ್ರಿ ಹೊತ್ತಲ್ಲೇ ಇದೀಗ ವಿಜಯನಗರ ಕಾಂಗ್ರೆಸ್​ ಟಾಂಗ್ ಕೊಟ್ಟಿದೆ.

ಸುದ್ದಿಗೋಷ್ಠಿಯಲ್ಲಿ ನೋಟಿಸ್​ ರಿಲೀಸ್ ಮಾಡಿದ ಕಾಂಗ್ರೆಸ್ ನಾಯಕರು, ಬಿಜೆಪಿ ಅವಧಿಯಲ್ಲೇ ವಕ್ಫ್​​ ನೋಟಿಸ್ ನೀಡಲಾಗಿದೆ. 2022ರಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ರೈತರಿಗೆ ನೋಟಿಸ್ ಎಂದು ತಿಳಿಸಿದ್ದಾರೆ.

ಮಾಜಿ ಶಾಸಕ ರಾಜು ಆಲಗೂರ್ ನೇತೃತ್ವದಲ್ಲಿ ದಾಖಲೆ ಬಿಡುಗಡೆ ಮಾಡಿದ ವೇಳೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಇತರರು ಸಾಥ್ ನೀಡಿದ್ದಾರೆ. 10 ಮಂದಿ ರೈತರಿಗೆ ನೀಡಿದ್ದ ನೋಟಿಸ್ ಬಿಡುಗಡೆ ಮಾಡಿ ಟಾಂಗ್​ ನೀಡಿದ ಕಾಂಗ್ರೆಸ್​ ನಾಯಕರು, ವಿಜಯಪುರ ನಗರದ ಮಹಲ್ ಬಾಗಾಯತ್ ರೈತರಿಗೆ ನೀಡಿದ್ದ ನೋಟಿಸ್‌ ಬಿಡುಗಡೆ ಮಾಡಿದೆ.

ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ರೈತರಿಗೆ ನೋಟಿಸ್ ನೀಡಿದ್ರು. ಆನಂದ ಹಡಪದ್, ಅಶೋಕ ಬಣ್ಣದ, ಬಡೈಲ್ ಲಾಹೋರಿ, ಗೋವಿಂದ ಲಿಂಗಸಾ, ಗಿರಮಲ್ಲ ಚನ್ನಾಳ, ಸಂಜಯಕುಮಾರ್ ಜೈನ್, ಮಹಾವೀರ ಶಂಕರಲಾಲ್, ರವಿ ಮಾದರ್, ಬಸಪ್ಪ ಬಣಾರಿ, ಮಾಲಿಂಗಯ್ಯ ಹಿರೇಮಠ್​ಗೆ ನೋಟಿಸ್​ ನೀಡಿದ್ದರು ಎಂದು ಗಂಭೀರ ಆರೋಪ ಮಾಡುವ ಮೂಲಕ   ಕಾಂಗ್ರೆಸ್ ತಿರುಗೇಟು ನೀಡಿದೆ.

ಇದನ್ನೂ ಓದಿ : ಡೈನಾಮಿಕ್ ಸ್ಟಾರ್ ದೇವರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘U 235’ ಚಿತ್ರದ ಟ್ರೇಲರ್ ರಿಲೀಸ್​​​..!

Leave a Comment

DG Ad

RELATED LATEST NEWS

Top Headlines

ದರ್ಶನ್​ಗೆ ದೀಪಾವಳಿ ಸಿಹಿ.. ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್..!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್​ಗೆ ಬಿಗ್​ ರಿಲೀಫ್ ಸಿಕ್ಕಿದೆ. ದರ್ಶನ್​ರ ಆರೋಗ್ಯ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಆರು ವಾರಗಳ ಅವಧಿಯ ಮಧ್ಯಂತರ

Live Cricket

Add Your Heading Text Here