Download Our App

Follow us

Home » ರಾಜಕೀಯ » ವಕ್ಫ್​ ಆಸ್ತಿ ಅಂತಾರಲ್ಲ.. ಅಕ್ಬರ್, ಔರಂಗಜೇಬ್ ಈ ಭೂಮಿಯನ್ನು ತಂದು ಕೊಟ್ಟಿದ್ರಾ? – ಪ್ರತಾಪ್ ಸಿಂಹ ಪ್ರಶ್ನೆ..!

ವಕ್ಫ್​ ಆಸ್ತಿ ಅಂತಾರಲ್ಲ.. ಅಕ್ಬರ್, ಔರಂಗಜೇಬ್ ಈ ಭೂಮಿಯನ್ನು ತಂದು ಕೊಟ್ಟಿದ್ರಾ? – ಪ್ರತಾಪ್ ಸಿಂಹ ಪ್ರಶ್ನೆ..!

ಮೈಸೂರು : ಕೆಲವು ದಿನಗಳಿಂದ ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಸಾವಿರಾರು ರೈತರ ಭೂಮಿಯ ಪಹಣಿಯಲ್ಲಿ ವಕ್ಫ್‌ ಬೋರ್ಡ್ ಹೆಸರು ನೋಂದಣಿಯಾಗಿದೆ. ಇದು ರೈತರಲ್ಲಿ ಸಾಕಷ್ಟು ಆತಂಕ ಸೃಷ್ಟಿಸಿದೆ, ಮತ್ತೊಂದೆಡೆ ಈ ವಿಚಾರ ರಾಜಕೀಯ ಸ್ವರೂಪವನ್ನೂ ಪಡೆಯುತ್ತಿದೆ. ವಕ್ಫ್​ ಆಸ್ತಿ ಅಂತಾರಲ್ಲ.. ಆ ಭೂಮಿ ಎಲ್ಲಿಂದ ಬಂತು..? ಅಕ್ಬರ್, ಔರಂಗಜೇಬ್ ಈ ಭೂಮಿಯನ್ನು ತಂದು ಕೊಟ್ಟಿದ್ರಾ..? ದೇಶ ಭಾಗ ಮಾಡುವಾಗ ಜಿನ್ನಾ ಭಾಗ ಮಾಡಿ ಹೋಗಿದ್ರಾ..? ಸೌದಿಯ ಮುಲ್ಲಾಗಳು ಕೊಟ್ಟ ಆಸ್ತಿನಾ ಇದು? ಪ್ರತ್ಯೇಕ ಆಸ್ತಿ ಮುಸ್ಲಿಮರಿಗೆ ಎಲ್ಲಿಂದ ಬಂತು…? ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಹುಣಸೂರಿನ ಗಣೇಶ ದೇಗುಲದದ 17 ಎಕರೆ ನಮ್ಮದು ಅಂತಿದ್ದಾರೆ. ಚಿಕ್ಕಮಗಳೂರಲ್ಲಿ ಖಾಸಗಿ ಜಮೀನು ನಮ್ಮದು ಎನ್ನುತ್ತಿದ್ದಾರೆ, ಕಂಡವರ ಜಮೀನಿಗೆಲ್ಲಾ ಮುಲ್ಲಾಗಳು ನೋಟಿಸ್ ಕೊಡ್ತಿದ್ದಾರೆ. 1.25 ಲಕ್ಷ ಎಕರೆ ಭೂಮಿ ನಮಗೆ ಸೇರಿದ್ದು ಎನ್ನುತ್ತಿದ್ದಾರೆ, ನಮ್ಮ ದೇಗುಲ, ಮಠದಂತೆ ಮಸೀದಿ, ಚರ್ಚ್​ಗಳಲ್ಲಿ ಹಿಡಿ ಅನ್ನ ಹಾಕ್ತಾರಾ..? ಮೂಡಾ ಕಷ್ಟ ಬಂದಾಗ ಸಿಎಂಗೆ ಚಾಮುಂಡಿ, ಹಾಸನಾಂಬೆ ನೆನಪಾಗಿದ್ದಾರೆ ಎಂದಿದ್ದಾರೆ.

ಸಿಎಂಗೆ ಕಷ್ಟ ಬಂದಾಗ ಸಹಾಯಕ್ಕೆ ಬರೋದು ಹಿಂದೂ ದೇವರುಗಳು, ಹಿಂದೂಗಳ ವಿರುದ್ದ ಸಿದ್ದು ನಿಲುವು ತೆಗೆದುಕೊಳ್ಳಲ್ಲ ಅಂತಾ ಭಾವಿಸಿದ್ದೇನೆ. ಪ್ರಧಾನಿ ಮೋದಿಯವರು ವಕ್ಫ್​​​ ಕಾಯ್ದೆ, ಬೋರ್ಡ್ ರದ್ದು ಮಾಡ್ಬೇಕು ಎಂದು ಪ್ರತಾಪ ಸಿಂಹ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ನಾಡಿನ ಮನೆಮಗ, ಅಪರೂಪದ ಜೀವ ಅಪ್ಪು – ಪುನೀತ್ ರಾಜಕುಮಾರ್ ನೆನೆದು ಸಿಎಂ ಸಿದ್ದರಾಮಯ್ಯ ಪೋಸ್ಟ್​​..!

Leave a Comment

DG Ad

RELATED LATEST NEWS

Top Headlines

ದರ್ಶನ್​ಗೆ ದೀಪಾವಳಿ ಸಿಹಿ.. ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್..!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್​ಗೆ ಬಿಗ್​ ರಿಲೀಫ್ ಸಿಕ್ಕಿದೆ. ದರ್ಶನ್​ರ ಆರೋಗ್ಯ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಆರು ವಾರಗಳ ಅವಧಿಯ ಮಧ್ಯಂತರ

Live Cricket

Add Your Heading Text Here