ಜಮ್ಮು : ಜಮ್ಮು ಮತ್ತು ಕಾಶ್ಮೀರದ ಅಖ್ನೂರ್‌ನ ಸುಂದರ್‌ಬನಿ ಸೆಕ್ಟರ್‌ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಸೇನೆಯ ಹೆಮ್ಮೆಯ ಶ್ವಾನ ಫ್ಯಾಂಟಮ್ ಪ್ರಾಣ ಕಳೆದುಕೊಂಡಿದೆ. ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ನಡೆದ ಗುಂಡಿನ ದಾಳಿಯಲ್ಲಿ ಫ್ಯಾಂಟಮ್ (4) ಮೃತಪಟ್ಟಿದೆ.
ಫ್ಯಾಂಟಮ್ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಶ್ವಾನ. ಅದು 25 ಮೇ 2020 ರಂದು ಜನಿಸಿತ್ತು. “ಸೇನಾ ಶ್ವಾನ ಆಗಿರುವ ಫ್ಯಾಂಟಮ್ ರಾಷ್ಟ್ರಕ್ಕೆ ಸೇವೆ ಸಲ್ಲಿಸುವಾಗ ಪ್ರಾಣ ತ್ಯಾಗ ಮಾಡಿದೆ. ಸಿಕ್ಕಿಬಿದ್ದ ಭಯೋತ್ಪಾದಕರ ಮೇಲೆ ಪಡೆಗಳು ಗುಂಡಿನ ದಾಳಿ ನಡೆಸುತ್ತಿರುವಾಗ ಫ್ಯಾಂಟಮ್ ಶತ್ರುಗಳ ಗುಂಡಿಗೆ ಗಾಯಗೊಂಡಿತ್ತು.
ಗಾಯದಿಂದ ಬಳಲುತ್ತಿದ್ದ ಫ್ಯಾಂಟಮ್ಗೆ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಫ್ಯಾಂಟಮ್ ವೀರ ಮರಣವನ್ನಪ್ಪಿದೆ. ಧೈರ್ಯಶಾಲಿ ಸೇನಾ ಶ್ವಾನವಾದ ಫ್ಯಾಂಟಮ್ ನಿಜವಾದ ಹೀರೋ, ಈ ನಾಯಿಯ ಬಲಿದಾನಕ್ಕೆ ನಮ್ಮ ಸಲ್ಯೂಟ್. ಫ್ಯಾಂಟಂನ ಧೈರ್ಯ, ವಿಧೇಯತೆ ಮತ್ತು ಬದ್ಧತೆಯನ್ನು ಯಾವತ್ತೂ ಮರೆಯಲು ಆಗಲ್ಲ” ಎಂದು ಜಮ್ಮುವಿನ ವೈಟ್ ನೈಟ್ ಕಾರ್ಪ್ಸ್ ವಿಭಾಗವು ತನ್ನ ಎಕ್ಸ್ ಪೋಸ್ಟ್ನಲ್ಲಿ ಬರೆದಿದೆ. ಭಾರತೀಯ ಸೇನೆಯು ಹುತಾತ್ಮ ಶ್ವಾನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದು, ಅದರ ಅಸಾಧಾರಣ ಶೌರ್ಯ ಮತ್ತು ಸಮರ್ಪಣೆಯನ್ನು ಗುರುತಿಸಿದೆ.
ಇದನ್ನೂ ಓದಿ : ನಾಡಿನ ಮನೆಮಗ, ಅಪರೂಪದ ಜೀವ ಅಪ್ಪು – ಪುನೀತ್ ರಾಜಕುಮಾರ್ ನೆನೆದು ಸಿಎಂ ಸಿದ್ದರಾಮಯ್ಯ ಪೋಸ್ಟ್..!