ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ ನೆನಪು ಕನ್ನಡಿಗರಲ್ಲಿ ಹಾಗೂ ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದೆ ಉಳಿದಿದೆ. ಅಪ್ಪು ಅವರ ಸಮಾಜ ಸೇವೆ ಮತ್ತು ಮಾನವೀಯತೆಯನ್ನು ಸ್ಮರಿಸಲಾಗುತ್ತಿದೆ.
ಬೆಟ್ಟದ ಹೂವು ಸಿನಿಮಾದಿಂದ ಹಿಡಿದು ಗಂಧದ ಗುಡಿ ತನಕ ಪವರ್ ಸ್ಟಾರ್ ಸಾಧನೆಗೆ ಈ ಭೂಮಿ ಮೇಲೆ ಯಾರೂ ಸಾಟಿ ಇಲ್ಲ. ಹೀಗಿದ್ದಾಗಲೇ ಅಪ್ಪು ಅವರ ಕೋಟಿ ಕೋಟಿ ಅಭಿಮಾನಿಗಳನ್ನು ಅಗಲಿ 3 ವರ್ಷ ಕಳೆದಿದೆ. ಇಂತಹ ಸಮಯದಲ್ಲೇ, ಸರಿಯಾಗಿ 3 ವರ್ಷಗಳ ಹಿಂದೆ ಅಂದ್ರೆ ಪುನೀತ್ ರಾಜ್‌ಕುಮಾರ್ ಅವರು ಸಾಯುವ ಹಿಂದಿನ ದಿನದ ವಿಡಿಯೋ ವೈರಲ್ ಆಗುತ್ತಿದೆ.
ಅಪ್ಪು ಸರ್ ಮೃತಪಟ್ಟ ದಿನ ಇಡೀ ಕನ್ನಡ ನಾಡು ನೋವಿನಲ್ಲಿ ನರಳಿತ್ತು. ಮಹಾತ್ಮ ಗಾಂಧಿಜೀ ಬಳಿಕ ಪವರ್ ಸ್ಟಾರ್ ಪುನೀತ್ ಅವರ ಅಂತಿಮ ದರ್ಶನಕ್ಕೆ ಅತಿ ಹೆಚ್ಚು ಜನ ಬಂದಿದ್ದರು ಎನ್ನುವ ದಾಖಲೆ ಕೂಡ ಸಂಚಲನ ಸೃಷ್ಟಿಸಿತ್ತು. ಹೀಗಿದ್ದಾಗ ಅಪ್ಪು ಅವರ ಕೊನೆಯ ವಿಡಿಯೋ ವೈರಲ್ ಆಗುತ್ತಿದೆ. ಅಲ್ಲದೆ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ವಿಡಿಯೋ ನೋಡಿದ ಅಭಿಮಾನಿಗಳು, ಮತ್ತೆ ವಾಪಸ್ ಬಂದು ಬಿಡಿ ಬಾಸ್.. ಅಂತಾ ಕಣ್ಣೀರು ಹಾಕುತ್ತಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಡಾನ್ಸ್ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದು, ಪುನೀತ್ ರಾಜ್‌ಕುಮಾರ್ ಅವರು ಸಾಯುವ 12 ಗಂಟೆಗಳ ಹಿಂದೆ ಈ ವಿಡಿಯೋನ ರೆಕಾರ್ಡ್ ಮಾಡಲಾಗಿತ್ತು. ಹೀಗಾಗಿ ಫ್ಯಾನ್ಸ್ ಈ ವಿಡಿಯೋ ನೋಡಿ ಕಣ್ಣೀರು ಹಾಕುತ್ತಿದ್ದಾರೆ.
ಪುನೀತ್ ರಾಜ್‌ಕುಮಾರ್ ನಿಧನವಾಗುವ ಹಿಂದಿನ ರಾತ್ರಿಯಷ್ಟೇ ಗುರುಕಿರಣ್ ಅವರ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಅಲ್ಲಿ ಪುನೀತ್ ಇರುವ ವಿಡಿಯೋ ವೈರಲ್ ಆಗುತ್ತಿದೆ. ಈ ಸಂದರ್ಭದಲ್ಲಿಯೂ ಪುನೀತ್ ಎಲ್ಲರ ಮೊಗದಲ್ಲಿ ನಗು ಅರಳಿಸಿದ್ದರು. ಪುನೀತ್ ರಾಜ್‌ಕುಮಾರ್ ಕೊನೆಯ ವಿಡಿಯೋದಲ್ಲಿ ಹಾಡೊಂದನ್ನು ಹಾಡಿ ರಂಜಿಸಿದ್ದರು.
ಇದನ್ನೂ ಓದಿ : ತ್ರಿವಿಕ್ರಮ್ ವಿರುದ್ಧ ತಿರುಗಿ ಬಿದ್ದ ದೊಡ್ಮನೆ ಮಂದಿ – ಕೆಂಡದ ಹೊಂಡವಾಯ್ತಾ ಕ್ಯಾಪ್ಟನ್ಸಿಯ ಹಾದಿ?