Download Our App

Follow us

Home » ಸಿನಿಮಾ » ಬಿಗ್​​ಬಾಸ್​ ಇತಿಹಾಸದಲ್ಲೇ ಇದೇ ಮೊದಲು – ದೊಡ್ಮನೆಯೊಳಗೆ ಬಂದ ಜನಸಾಮಾನ್ಯರು..!

ಬಿಗ್​​ಬಾಸ್​ ಇತಿಹಾಸದಲ್ಲೇ ಇದೇ ಮೊದಲು – ದೊಡ್ಮನೆಯೊಳಗೆ ಬಂದ ಜನಸಾಮಾನ್ಯರು..!

ಬಿಗ್​ ಬಾಸ್​​ ಕನ್ನಡ ಸೀಸನ್​ 11 ಭಾರೀ ಕುತೂಹಲದಿಂದ ಸಾಗುತ್ತಿದ್ದು, ಸದ್ಯ ಮನೆಯಲ್ಲಿ ರಾಜಕೀಯ ಟಾಸ್ಕ್​ ನಡೆಯುತ್ತಿದೆ. ಸ್ಪರ್ಧಿಗಳು ಈಗಾಗಲೇ ಎರಡು ಪಕ್ಷವನ್ನು ರಚಿಸಿದ್ದಾರೆ. ತೋಳ ಮತ್ತು ಹದ್ದು ಎಂಬ ಎರಡು ಪಕ್ಷ ರಚಿಸಿ ಪ್ರಚಾರ ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ರಾಧಾ ಹಿರೇಗೌಡರ್ ಅವರು ಎಂಟ್ರಿ ಕೊಟ್ಟು ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದರು. ರಾಧಕ್ಕನ ಎಂಟ್ರಿಗೆ ಬಿಗ್ ಬಾಸ್ ಸ್ಪರ್ಧಿಗಳು ಶಾಕ್ ಆಗಿದ್ದರು. ಈಗ ಸಾಮಾನ್ಯ ಜನರು ಈ ಮನೆಗೆ ಕಾಲಿಟ್ಟಿದ್ದಾರೆ.

ಹೌದು.. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಸಾಮಾನ್ಯ ಜನರು ಆಗಮಿಸಿದ್ದಾರೆ. ದೊಡ್ಮನೆಗೆ ಬಂದ ಸಾಮಾನ್ಯ ಜನರು ಸ್ಪರ್ಧಿಗಳಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಇನ್ನು ಮಾನಸಾ ಕಣ್ಣು ನೋಡಿ ಹೆದರಿದ್ದೇವೆ ಅಂತಲೂ ಜನರು ಹೇಳಿದ್ದಾರೆ. ಇನ್ನು ಸ್ಪರ್ಧಿಗಳು ಜನರ ಜೊತೆ ಮಾತುಕತೆ ನಡೆಸಿ, ಒಂದಷ್ಟು ಮನರಂಜನೆ ನೀಡಿದ್ದಾರೆ.

ತೋಳ ಪಕ್ಷವು ಧರ್ಮ ಪರ ಸೇನಾ ಪಕ್ಷ ಎಂಬ ಧ್ಯೇಯದೊಂದಿಗೆ ಪ್ರಚಾರ ಮಾಡಿದರೆ, ಇತ್ತ ಹದ್ದು ಪಕ್ಷವು ಪ್ರಮಾಣಿಕ ಸಮರ್ಥ ನ್ಯಾಯವಾದಿ ಪಕ್ಷ ಹೆಸರಿನಲ್ಲಿ ಪ್ರಚಾರ ಮಾಡುತ್ತಿದೆ. ಒಟ್ಟಿನಲ್ಲಿ ಮನೆಯೊಳಕ್ಕೆ ಕಾಲಿಟ್ಟ ಜನರ ಮನಗೆಲ್ಲುವುದೇ ರಾಜಕಾರಣಿಗಳ ಪ್ರಮುಖ ಗುರಿಯಾಗಿದೆ. ಜೊತೆಗೆ ಸ್ಪರ್ಧಿಗಳಿಗೆ ಜನಸಾಮಾನ್ಯರು ನಾನಾ ರೀತಿಯ ಪ್ರಶ್ನೆಯನ್ನು ಕೇಳುವ ಅವಕಾಶವನ್ನು ಕೊಡಲಾಗಿದೆ. ಇಂದಿನ ಎಪಿಸೋಡ್​ ಭಾರೀ ಕುತೂಹಲತೆಯಿಂದ ಕೂಡಿದೆ.

ಇದನ್ನೂ ಓದಿ : ಬೆಳಗಾವಿ : ಮಕ್ಕಳ ಕಳ್ಳರ ಮೇಲೆ ಅಥಣಿ ಪೋಲಿಸರ ಫೈರಿಂಗ್..!

Leave a Comment

DG Ad

RELATED LATEST NEWS

Top Headlines

ಕನ್ನಡ ಚಿತ್ರ ನಿರ್ಮಾಪಕರಿಗೆ ವರದಾನ – ಸಿನಿ ಪ್ರಿಯರಿಗಾಗಿ ಬರ್ತಿದೆ ಹೊಸ ಒಟಿಟಿ ಪ್ಲಾಟ್‌ಫಾರ್ಮ್‌..!

ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಚಿತ್ರಪ್ರೇಮಿಗಳ ಬೇಡಿಕೆಗನುಗುಣವಾಗಿ, ಅವರನ್ನು ರಂಜಿಸಲು ಓಟಿಟಿ ಪ್ಲಾಟ್

Live Cricket

Add Your Heading Text Here