Download Our App

Follow us

Home » ಮೆಟ್ರೋ » ಬಿಎಂಟಿಸಿ ಬಸ್‌ನಲ್ಲಿ ಕುಳಿತ್ತಿದ್ದ ಕಂಡಕ್ಟರ್‌ ತಲೆಗೆ ಕಲ್ಲಿಂದ ಹೊಡೆದ ಪ್ರಯಾಣಿಕ..!

ಬಿಎಂಟಿಸಿ ಬಸ್‌ನಲ್ಲಿ ಕುಳಿತ್ತಿದ್ದ ಕಂಡಕ್ಟರ್‌ ತಲೆಗೆ ಕಲ್ಲಿಂದ ಹೊಡೆದ ಪ್ರಯಾಣಿಕ..!

ಬೆಂಗಳೂರು : ಬಿಎಂಟಿಸಿ ಕಂಡಕ್ಟರ್, ಡ್ರೈವರ್​​ಗಳ ಮೇಲೆ ಪದೇ-ಪದೇ ಹಲ್ಲೆ ಆಗ್ತಲೇ ಇವೆ. ಕಳೆದ ತಿಂಗಳು ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಬಿಎಂಟಿಸಿ ವೋಲ್ವೋ ಬಸ್ ಪ್ರಯಾಣಿಕನೊಬ್ಬ ಕಂಡಕ್ಟರ್​​ಗೆ ಚಾಕುವಿನಿಂದ ಇರಿದ ಘಟನೆ ಭಾರೀ ಸಂಚಲನ ಸೃಷ್ಟಿಸಿತ್ತು. ಅದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಕಳೆದ ಶುಕ್ರವಾರ ಟಿನ್ ಫ್ಯಾಕ್ಟರಿ ಬಳಿ KA-14, F1107 ನಂಬರಿನ ಬಿಎಂಟಿಸಿ ಬಸ್​ನಲ್ಲಿ ಹಲ್ಲೆ ನಡೆದಿದೆ. ಮೂರು ದಿನದ ಹಿಂದೆ ಪಾಸ್ ತೋರಿಸುವ ವಿಚಾರಕ್ಕೆ ಕಂಡಕ್ಟರ್ ಮತ್ತು ಪ್ರಯಾಣಿಕನ ನಡುವೆ ಕಿರಿಕ್ ಆಗಿತ್ತು. ಆ ವೇಳೆ ಕಂಡಕ್ಟರ್ ಸಂಗಪ್ಪನ ಹೊಟ್ಟೆಗೆ ಗುದ್ದಿ ಹೇಮಂತ್ ಎಂಬಾತ ಎಸ್ಕೇಪ್​ ಆಗಿದ್ದ.

ಮೂರು ದಿನಗಳಿಂದ ಸ್ಕೆಚ್​ ಹಾಕಿ ಶುಕ್ರವಾರ ಮಧ್ಯಾಹ್ನ ಟಿನ್ ಫ್ಯಾಕ್ಟರಿ ಬಸ್ ಸ್ಟ್ಯಾಂಡ್ ನಲ್ಲಿ ಊಟ ಮಾಡುತ್ತಿದ್ದ ವೇಳೆ ಹಿಂದಿನಿಂದ ಬಂದು ಕಲ್ಲಿನಿಂದ ಹೇಮಂತ್​​​​​ ಹಲ್ಲೆ ಮಾಡಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪ್ರಯಾಣಿಕರು ಆತನನ್ನು ಹಿಡಿದು ಪೋಲಿಸರ ವಶಕ್ಕೆ ನೀಡಿದ್ದಾರೆ.

ಕಳೆದ ಎರಡು ತಿಂಗಳಲ್ಲಿ ಬೆಂಗಳೂರಿನ ಬಸ್ ಕಂಡಕ್ಟರ್​ ಮೇಲೆ ಹಲ್ಲೆ ನಡೆದಿರುವ 3 ಘಟನೆ ನಡೆದಿದೆ. ಸೆಪ್ಟೆಂಬರ್ 8ರಂದು ಅತ್ತಿಬೆಲೆಯಿಂದ ಮೆಜೆಸ್ಟಿಕ್ ಬರುತ್ತಿದ್ದ ವೋಲ್ವೋ ಬಸ್​ನಲ್ಲಿ ಹೊಸ ರೋಡ್ ಬಸ್ ಸ್ಟಾಪ್​ನಲ್ಲಿ ಕಂಡಕ್ಟರ್​ಗೆ ಸ್ಕ್ರೂ ಡ್ರೈವರ್ ನಿಂದ ಚುಚ್ಚಲು ಮುಂದಾಗಿದ್ದ. ಅಕ್ಟೋಬರ್ 1ರಂದು ವೈಟ್ ಫೀಲ್ಡ್ ಬಳಿಯ ಐಟಿಪಿಎಲ್ ಬಸ್ ಸ್ಟಾಪ್​ನಲ್ಲಿ ಬಿಎಂಟಿಸಿ ವೋಲ್ವೋ ಬಸ್ ಕಂಡಕ್ಟರ್ ಯೋಗೇಶ್​ಗೆ ಹರ್ಷ ಸಿನ್ಹಾ ಅನ್ನೋ ಯುವಕ 2-3 ಬಾರಿ ಚಾಕುವಿನಿಂದ ಚುಚ್ಚಿ ಕೊಲ್ಲಲು ಯತ್ನಿಸಿದ್ದ.

ಇದನ್ನೂ ಓದಿ : ಮುಡಾ ಕೇಸ್ : ಲೋಕಾ ಪೊಲೀಸ್ ತನಿಖೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರು : ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಯುವತಿ‌..!

ಬೆಂಗಳೂರು : ಯುವತಿಯೋರ್ವಳು ಟ್ರಾಫಿಕ್ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿರುವ ಘಟನೆ ಇಂದಿರಾನಗರ ಠಾಣಾ ವ್ಯಾಪ್ತಿಯ ESI ಆಸ್ಪತ್ರೆಯ ಜಂಕ್ಷನ್​​​​ನಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ಬಾಡಿ ಕ್ಯಾಮೆರಾ

Live Cricket

Add Your Heading Text Here