Download Our App

Follow us

Home » ಮೆಟ್ರೋ » ಲೈಂಗಿಕ ದೌರ್ಜನ್ಯ ಆರೋಪ – ಎಸಿಪಿ ಚಂದನ್ ವಿರುದ್ದ ತನಿಖೆ ಆದೇಶಿಸಿದ ಮಾನವ ಹಕ್ಕುಗಳ ಆಯೋಗ..!

ಲೈಂಗಿಕ ದೌರ್ಜನ್ಯ ಆರೋಪ – ಎಸಿಪಿ ಚಂದನ್ ವಿರುದ್ದ ತನಿಖೆ ಆದೇಶಿಸಿದ ಮಾನವ ಹಕ್ಕುಗಳ ಆಯೋಗ..!

ಬೆಂಗಳೂರು : ವಿಜಯನಗರ ಎಸಿಪಿ ಚಂದನ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಾನವ ಹಕ್ಕುಗಳ ಆಯೋಗಕ್ಕೆ ಪುನೀತ್ ಕೆರೆಹಳ್ಳಿ ದೂರು ನೀಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಪಿ ಚಂದನ್ ವಿರುದ್ದ ತನಿಖೆಗೆ ಮಾನವ ಹಕ್ಕುಗಳ ಆಯೋಗ ಆದೇಶಿಸಿದೆ.

ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದ ಪುನೀತ್ ಕೆರೆಹಳ್ಳಿ, ಜುಲೈ 26ರಂದು ರಾತ್ರಿ 9 ಗಂಟೆಗೆ ನನ್ನನ್ನು ಪೊಲೀಸರು ಕಾಟನ್ ಪೇಟೆ ಪೊಲೀಸ್ ಪ್ರಕರಣಯೊಂದರಲ್ಲಿ ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ಠಾಣೆಗೆ ಆಗಮಿಸಿದ ಎಸಿಪಿ ಚಂದನ್ ಅವಮಾನವೀಯವಾಗಿ ನೆಡೆಸಿಕೊಂಡ್ರು.

ಠಾಣೆಯಲ್ಲಿ ನನ್ನ ಬಟ್ಟೆ ಬಿಚ್ಚಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ಬಟ್ಟೆ ಬಿಚ್ಚಿಸಿ ನಗ್ನಗೊಳಿಸಿ ಲೈಂಗಿಕ ಕಿರುಕುಳ ನೀಡಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದೂ ಪುನೀತ್ ಕೆರೆಹಳ್ಳಿ ದೂರಿನಲ್ಲಿ ಉಲ್ಲೇಖಿಸಿದ್ದರು.

ACP ಚಂದನ್ ಕುಮಾರ್ ಮತ್ತಿತರ ವಿರುದ್ಧ ದೂರು ನೀಡಿದ್ದ ಪುನೀತ್, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು. ಇದೀಗ 4 ವಾರಗಳಲ್ಲಿ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಪಶ್ಚಿಮ ವಿಭಾಗದ ಡಿಸಿಪಿಗೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : ಚನ್ನಪಟ್ಟಣ ರಣರಂಗದಲ್ಲಿ ಸೈನಿಕನ ವಿರುದ್ಧ ತೊಡೆ ತಟ್ಟಲು ಕಣಕ್ಕಿಳಿದ ನಿಖಿಲ್​ ಕುಮಾರಸ್ವಾಮಿ ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here