Download Our App

Follow us

Home » ರಾಜ್ಯ » ಗುಟ್ಕಾ ಪ್ರಿಯರೇ ಎಚ್ಚರ ಎಚ್ಚರ.. ಕಣಕಣದಲ್ಲೂ ಕೇಸರಿ ಅನ್ನೋ ಗುಟ್ಕಾದಲ್ಲಿ ಕಪ್ಪೆ ಪ್ರತ್ಯಕ್ಷ..!

ಗುಟ್ಕಾ ಪ್ರಿಯರೇ ಎಚ್ಚರ ಎಚ್ಚರ.. ಕಣಕಣದಲ್ಲೂ ಕೇಸರಿ ಅನ್ನೋ ಗುಟ್ಕಾದಲ್ಲಿ ಕಪ್ಪೆ ಪ್ರತ್ಯಕ್ಷ..!

ಬೆಂಗಳೂರು : ಈಗೀಗ ಅಂಗಡಿಗಳಲ್ಲಿ ಖರೀದಿಸೋ ವಸ್ತುಗಳಲ್ಲಿ ಹುಳು, ಹುಪ್ಪಟೆ ಸಿಗೋದು ಸಾಮಾನ್ಯವಾಗಿ ಬಿಟ್ಟಿದೆ. ಅದರಂತೆ ಇದೀಗ ಗುಟ್ಕಾ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಒಂದು ಹೊರ ಬಿದ್ದಿದೆ. ನೀವು ದಿನನಿತ್ಯ ತಿನ್ನೋ ಗುಟ್ಕಾ ದೇಹಕ್ಕೆ ಎಷ್ಟು ಸೇಫ್ ಎಂದು ಯೋಚಿಸದೆ ಜಗಿಯೋ ಮುನ್ನ ಒಮ್ಮೆ ಚೆಕ್ ಮಾಡ್ಕೊಳಿ. ಯಾಕಂದ್ರೆ ಅದೇ ಗುಟ್ಕಾ ಪಾಕ್ಯೇಟ್​ನಲ್ಲಿ ಇದೀಗ ಸತ್ತ ಕಪ್ಪೆ ಮರಿ ಪತ್ತೆಯಾಗಿದೆ.

ಹೌದು.. ಬೆಂಗಳೂರಿನ ಯಶವಂತಪುರದ ಜೆಪಿ ಪಾರ್ಕ್ ವಾರ್ಡ್​ನಲ್ಲಿರುವ ಮಂಜುನಾಥ್​ ಕಾಂಡಿಮೆಂಟ್ಸ್​​ನಲ್ಲಿ ಗ್ರಾಹಕರೊಬ್ಬರು ಖರೀದಿಸಿದ ವಿಮಲ್ ಗುಟ್ಕಾ ಪಾಕ್ಯೇಟ್​ನಲ್ಲಿ ಸತ್ತ ಕಪ್ಪೆ ಮರಿ ಪತ್ತೆಯಾಗಿದೆ. ತಾನು ಖರೀದಿಸಿದ್ದ ಗುಟ್ಕಾ ಪ್ಯಾಕೇಟ್‌ನಲ್ಲಿ ಕೇಸರಿ ಇರುತ್ತದೆ ಎಂದು ಭಾವಿಸಿದ್ದ ಗ್ರಾಹಕನಿಗೆ ಸತ್ತ ಕಪ್ಪೆ ಸಿಕ್ಕಿದ್ದು ನಿಜಕ್ಕೂ ಆಘಾತ ತಂದಿದೆ.

ಇನ್ನು, ಗುಟ್ಕಾ ಪ್ಯಾಕೇಟ್‌ನಲ್ಲಿದ್ದ ಸಿಕ್ಕ ಸತ್ತ ಕಪ್ಪೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಗುಟ್ಕಾ ತಿನ್ನುವ ಮುನ್ನ ಇರಲಿ ಎಚ್ಚರ ಎಂಬ ಸಂದೇಶ ಎಲ್ಲೆಡೇ ಹರಿದಾಡುತ್ತಿದೆ. ಈ ವೀಡಿಯೋ ನೋಡಿದ ಗುಟ್ಕಾ ಪ್ರಿಯರು ಒಂದು ಕ್ಷಣ ದಂಗಾಗಿ ಹೋಗಿದ್ದಾರೆ.

ಇದನ್ನೂ ಓದಿ : ದೊಡ್ಮನೆಯಲ್ಲಿ ಜಗದೀಶ್-ಹಂಸಾ ಡುಯೇಟ್.. ಹೇಗಿರುತ್ತೆ ಇಂದು ಕಿಚ್ಚನ ಪಂಚಾಯ್ತಿ?

Leave a Comment

DG Ad

RELATED LATEST NEWS

Top Headlines

ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಇನ್ಸ್​ಪೆಕ್ಟರ್​ ಅಯ್ಯಣ್ಣ ರೆಡ್ಡಿ ಅರೆಸ್ಟ್..!

ಬೆಂಗಳೂರು : ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಇನ್ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಶಾಸಕ ಮುನಿರತ್ನ ಮಾಡಿರೋ ಹನಿಟ್ರ್ಯಾಪ್​​ಗೆ ಇನ್ಸ್ಪೆಕ್ಟರ್

Live Cricket

Add Your Heading Text Here