ಮಹಾ ಕುಂಭಮೇಳದಲ್ಲಿ ಪ್ರಧಾನಿ ಮೋದಿ ಅಮೃತಸ್ನಾನ – ರುದ್ರಾಕ್ಷಿ ಮಾಲೆ ಹಿಡಿದು ತ್ರಿವೇಣಿ ಸಂಗಮಕ್ಕೆ ನಮನ!

ಪ್ರಯಾಗ್​ರಾ​ಜ್ : ಪ್ರಧಾನಿ ಮೋದಿ ಅವರು ಇಂದು ಉತ್ತರ ಪ್ರದೇಶದ ಪ್ರಯಾಗ್​ರಾಜ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ್ದು, ತ್ರಿವೇಣಿ ಸಂಗಮದಲ್ಲಿ ಅಮೃತಸ್ನಾನ ಮಾಡಿದ್ದಾರೆ. ಗಂಗೆಯಲ್ಲಿ ಮಿಂದೆದ್ದ ಪ್ರಧಾನಿ ಮೋದಿ, ಮಂತ್ರ ಪಠಿಸಿ ದೇವರಿಗೆ ನಮಸ್ಕರಿಸಿದ್ದಾರೆ.

ಕೇಸರಿ ವಸ್ತ್ರದಲ್ಲಿ ಕಾಣಿಸಿದ ಪ್ರಧಾನಿ ಮೋದಿಯವರು, ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ಮಾಡಿದ್ದಾರೆ. ತ್ರಿವೇಣಿ ಸಂಗಮದ ನೀರಿನಲ್ಲಿ ಮುಳುಗು ಹಾಕಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಅವರು, ರುದ್ರಾಕ್ಷಿ ಮಾಲೆಯನ್ನು ಹಿಡಿದು ಸೂರ್ಯದೇವ ಹಾಗೂ ಗಂಗಾ ಮಾತೆಯನ್ನು ನಮಿಸಿ, ದೇಶದ ಒಳಿತಿಗಾಗಿ ಪ್ರಾರ್ಥಿಸಿದ್ದಾರೆ. ಇದಾದ ಬಳಿಕ ಮಲಗಿರುವ ಭಂಗಿಯಲ್ಲಿರುವ ಭಗವಾನ್ ಹನುಮಂತನ ದೇವಾಲಯ ಹಾಗೂ ಅಕ್ಷಯವತ್​ಗೆ ಮೋದಿ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

ಇನ್ನು ಮಹಾ ಕುಂಭಮೇಳಕ್ಕೆ ಪ್ರಧಾನಿ ಮೋದಿಯವರು ಆಗಮಿಸುತ್ತಿದ್ದಂತೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಭವ್ಯವಾಗಿ ಸ್ವಾಗತಿಸಿದ್ದು, ಬಳಿಕ ಸಂಗಮದ ಕಡೆಗೆ ಮೋದಿ ಹಾಗೂ ಸಿಎಂ ಆದಿತ್ಯನಾಥ್ ಅವರು ಒಂದೇ ಧೋಣಿಯಲ್ಲಿ ವಿಹಾರ ನಡೆಸಿದರು. ಈ ವೇಳೆ ಮೋದಿಯವರು ಜನರತ್ತ ಕೈ ಬೀಸಿದ್ದಾರೆ.

ಇದನ್ನೂ ಓದಿ : https://btvkannada.com/2025/02/05/traffic-police-bng-psi-money/

Btv Kannada
Author: Btv Kannada

Read More