Download Our App

Follow us

Home » ಜಿಲ್ಲೆ » ಬೆಂಗಳೂರು ನಗರ ನಿರ್ಗಮಿತ ಜಿಲ್ಲಾಧಿಕಾರಿ ಕೆ.ಎ ದಯಾನಂದ್ ಭಾವುಕ ಮಾತು..!

ಬೆಂಗಳೂರು ನಗರ ನಿರ್ಗಮಿತ ಜಿಲ್ಲಾಧಿಕಾರಿ ಕೆ.ಎ ದಯಾನಂದ್ ಭಾವುಕ ಮಾತು..!

ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಯಿಂದ ಐಎಎಸ್ ಅಧಿಕಾರಿ ಕೆ.ಎ ದಯಾನಂದ್​ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ (ಅ.8 ಮಂಗಳವಾರ) ಆದೇಶ ಹೊರಡಿಸಿತ್ತು. ಸದ್ಯ ನೂತನ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ಜಗದೀಶ್ ಜಿ. ಅವರನ್ನು ನೇಮಕ ಮಾಡಲಾಗಿದೆ.

ಇದೀಗ ಬೆಂಗಳೂರು ನಗರ ನಿರ್ಗಮಿತ ಜಿಲ್ಲಾಧಿಕಾರಿ ಕೆ.ಎ ದಯಾನಂದ್ ಅವರು ಭಾವುಕ ಮಾತುಗಳನ್ನಡಿದ್ದು, ಎಲ್ಲರಿಗೂ ನಮಸ್ಕಾರ.. ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆಯಾಗಿದೆ. ಪ್ರತಿ ಇಲಾಖೆಯಿಂದ ವರ್ಗಾವಣೆಯಾದಾಗ ಸಹಜವಾಗಿ ನಾನಿದ್ದ ಅವಧಿಯಲ್ಲಿ ಸರ್ಕಾರಿ ಅಧಿಕಾರಿಯಾಗಿ ಸಾರ್ವಜನಿಕ ಕೆಲಸಗಳ ವರದಿಯೊಂದನ್ನು ಒಪ್ಪಿಸುವುದು ನನ್ನ ಕರ್ತವ್ಯವೆಂದೆ ಭಾವಿಸಿ ಸಲ್ಲಿಸುತ್ತಾ ಬಂದಿದ್ದೇನೆ. ಅದರಂತೆಯೇ ಇದೊಂದು ಸಂಧರ್ಭ. ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂದರೆ ನೂರ ನಲವತ್ತು ಲಕ್ಷ ಜನರನ್ನೊಳಗೊಂಡ ಜಿಲ್ಲೆಯ ಜಿಲ್ಲಾಧಿಕಾರಿಯಾಗುವುದು ಎಷ್ಟು ಹೆಮ್ಮೆ ಮತ್ತು ಪ್ರತಿಷ್ಟೆಯೋ ಅದಕ್ಕಿಂತ ಹೆಚ್ಚು “ಅತ್ತ ದರಿ ಇತ್ತ ಪುಲಿ” ಎಂಬಂತೆ ಯಾವಾಗಲು ಅತ್ಯಂತ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಸೂಕ್ಷ್ಮ ಹುದ್ದೆ.

2018 ಫೆಬ್ರುವರಿಯಲ್ಲಿ ಅದಾಗ ತಾನೆ ಐಎಎಸ್ ಬಡ್ತಿ ಪಡೆಯುತ್ತಿದ್ದಂತೆ 2018ರ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದುದರಿಂದ ಬೆಂಗಳೂರು ಜಿಲ್ಲಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದೆ. ಚುನಾವಣೆ ಯಶಸ್ವಿಯಾಗಿ ಮುಗಿಸುತ್ತಿದ್ದಂತೆ ಮೂರು ತಿಂಗಳು ಹದಿನೆಂಟು ದಿನಗಳಲ್ಲೆ ವರ್ಗಾವಣೆಗೊಂಡಿದ್ದೆ. ಹಳ್ಳಿಯಲ್ಲಿ ಹುಡುಗನಿದ್ದಾಗ ಹಳ್ಳಿಯ ಜನರು ಯಾರಾದರು ಸ್ವಲ್ಪ ಅಹಂನಿಂದ ವರ್ತಿಸಿದರೆ “ನೀನೇನು ದುಪ್ಟಿ ಕಮೀಷನರ್ರ” ಎಂದು ಬಯ್ಯುತ್ತಿದ್ದರು. ಅದನ್ನು ನೆನೆಯುತ್ತಲೆ ನಾನು ಒಬ್ಬ ಡೆಪ್ಯುಟಿ ಕಮೀಷನರ್ ಆದೆನೆಂಬ ಹೆಮ್ಮೆ ಎಂದಿಗೂ ಮರೆಯಲಾಗದು.

ಬೆಂಗಳೂರು ಜಿಲ್ಲೆಯಲ್ಲಿ ಚುನಾವಣೆ ಎಂಬುದು ಒಂದು ಕಗ್ಗಂಟಿದ್ದಂತೆ ನಿಭಾಯಿಸುವುದು ಅಷ್ಟು ಸುಲಭದ ಮಾತಲ್ಲ. ಬೆಂಗಳೂರು ಚುನಾವಣೆ ಮುಗಿಸಿ ಶಿವಮೊಗ್ಗ ಜಿಲ್ಲಾಧಿಕಾರಿಯಾಗುತ್ತಿದ್ದಂತೆ ಎದುರುಗೊಂಡಿದ್ದು ಒಂದೆ ವರುಷದಲ್ಲಿ ಮಹಾನಗರ ಪಾಲಿಕೆ ಚುನಾವಣೆ, ಎಂಪಿ ಉಪ ಚುನಾವಣೆ ನಂತರ ಎಂಪಿ ಮುಖ್ಯ ಚುನಾವಣೆ ಕಾರ್ಯನಿರ್ವಹಿಸಿ ಯಶಸ್ವಿಯಾಗಿ ಮುಗಿಯುತ್ತಿದ್ದಂತೆ ವರ್ಗಾವಣೆಯಾಗಿದ್ದೆ. ಏನು ಬರಿ ಚುನಾವಣೆ ಕಾರ್ಯಕ್ಕೆ ಮಾತ್ರವೆ ನಿಮ್ಮ ಕೆಲಸ ಸೀಮಿತವೆ ಎಂಬ ಪತ್ನಿಯ ಮಾತು ಆಗಿತ್ತು. ಚುನಾವಣ ಕೆಲಸದ ಜೊತೆಗೆ ಸಾರ್ವಜನಿಕರ ಯಾವ ಕೆಲಸವನ್ನು ನಾನು ನಿರ್ಲಕ್ಷಿಸಿಲ್ಲ ಎಂಬುದು ಶಿವಮೊಗ್ಗದ ಜನತೆ “ಕಾಯಕ ಶ್ರೇಷ್ಟ” ಪ್ರಶಸ್ತಿ ನೀಡಿ ಬೀಳ್ಕೊಟ್ಟಾಗ ಆದ ಆತ್ಮತೃಪ್ತಿ ಮರೆಯುವಂತಿಲ್ಲ.

ನಂತರ ಬೆಂಗಳೂರು ಜಿಲ್ಲೆಗೆ ಬಂದ ಜಿಲ್ಲಾಧಿಕಾರಿಗಳು ನಿರಂತರವಾಗಿ ಸಮಸ್ಯೆಗಳನ್ನು ಎದುರಿಸಬೇಕಾದ್ದಲ್ಲದೆ ಚುನಾವಣ ಅಕ್ರಮವೆಂದು ಬಿಂಬಿತವಾದ “ಚಿಲುಮೆ ಹಗರಣ” ಮತ್ತೆ ನನ್ನನ್ನು ಜಿಲ್ಲಾಧಿಕಾರಿಯಾಗಿ ನಿಯುಕ್ತಿಗೊಳಿಸಿತ್ತು. ಕೇಂದ್ರ ಚುನಾವಣಾ ಆಯೋಗ ಹಲವು ಐಎಎಸ್ ಅಧಿಕಾರಿಗಳ ಪಟ್ಟಿಯನ್ನು ತರಿಸಿ ನನ್ನನ್ನು ಜಿಲ್ಲಾಧಿಕಾರಿಯಾಗಿ ನಿಯೋಜಿಸಲು ಸರ್ಕಾರಕ್ಕೆ ಸೂಚಿಸಿದ್ದು ನನಗೂ ಅನಿರೀಕ್ಷಿತವೆನಿಸಿತ್ತು.

ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯಿಂದ ಬೆಂಗಳೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾದರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಭಾರ ಮುಂದುವರೆದಿತ್ತು. ಆಗಿನ ಮಾನ್ಯ ಕಾರ್ಯದರ್ಶಿಗಳಾದ ವಂದಿತ ಶರ್ಮ ಮೇಡಂ ” ಇದು ಹೇಗೆ ಸಾದ್ಯ ದಯಾನಂದ್, ಪ್ರಭಾರ ತೆಗೆಯಲು ಮಾನ್ಯ ಮುಖ್ಯಮಂತ್ರಿಗಳಿಗೆ ಮಾತನಾಡುತ್ತೇನೆ” ಎಂದು ಹೇಳಿ ಮಾತನಾಡಿದ ನಂತರ ” ಇಲ್ಲ ದಯಾನಂದ್ ಪಂಚಮಶಾಲಿ ಹೋರಾಟ ನಡೆಯುತ್ತಿದೆ. ಅಲ್ಲಿಯೂ ಮುಂದುವರೆಯಲು ಮುಖ್ಯಮಂತ್ರಿಗಳು ತಿಳಿಸಿದ್ದಾರೆಂದು” ತಿಳಿಸಿ ಪ್ರಭಾರವನ್ನು ಕನ್ಕರೆಂಟ್ ಚಾರ್ಜ್ ಆಗಿ ಹಾಕಿ ಆದೇಶಿಸಿದ್ದರು. ಮತ್ತೆ ಚುನಾವಣೆ ಮುಗಿದು ಹೊಸ ಸರ್ಕಾರ ಬಂದಾಗಲು ಮತ್ತೆ ಮಾನ್ಯ ಮುಖ್ಯ ಕಾರ್ಯದರ್ಶಿಗಳು ಮತ್ತೊಮ್ಮೆ ಮಾತನಾಡಿ. ” ಇಲ್ಲ ದಯಾನಂದ್ ಕಾಂತರಾಜ್ ಆಯೋಗದ ವರದಿ ಕೊಡಬೇಕಿದೆ ಮುಂದುವರೆಯಲಿ ಎಂದು ಈಗಿನ ಮುಖ್ಯಮಂತ್ರಿಗಳು ತಿಳಿಸಿದ್ದಾರೆ” ಎಂದು ತಿಳಿಸಿ ಎರಡು ಹುದ್ದೆಗಳ ಜವಬ್ದಾರಿಯನ್ನು ನಿಭಾಯಿಸುವಂತೆ ತಿಳಿಸಿದರು. ಮತ್ತೆ ಮೂರು ತಿಂಗಳ ಹಿಂದೆ ಐಜಿಆರ್ ನಿವೃತ್ತರಾದಾಗ ಅದರ ಪ್ರಭಾರವು ಬಂತು.

ಮೂರು ಇಲಾಖೆ ಜವಬ್ದಾರಿ ಇದ್ದಾಗಲು ನನ್ನ ಸಹಾಯಕ್ಕೆ ಬಂದದ್ದು ನಾನೇ ಕರ್ನಾಟಕದಲ್ಲಿ ಹತ್ತು ವರ್ಷದ ಹಿಂದೆ ಪ್ರಾರಂಬಿಸಿದ್ದ ಇ-ಕಚೇರಿ. ಈ ಅವಧಿಯಲ್ಲಿ ನಿರ್ವಹಿಸಿದ ಕೆಲವು ಕಾರ್ಯಗಳು

  • ಚುನಾವಣಾ ಆಯೋಗಕ್ಕೆ ನಾನು ಯಾವಾಗಲು ಋಣಿ. ಅವರು ನೀಡಿದ ಜವಬ್ದಾರಿಯಂತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕೈಗೊಂಡು ವಿಧಾನ ಸಭಾ ಚುನಾವಣೆ ಮತ್ತು ಲೋಕ
  • ಸಭಾ ಚುನಾವಣೆ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಳ್ಳಲಾಯಿತು.
  • ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇ-ಕಚೇರಿಯನ್ನು ಪ್ರಾರಂಭಿಸಿ ನಂತರ ತಾಲ್ಲೋಕು ಕಚೇರಿಯವರೆಗೆ ವಿಸ್ತರಿಸಿ ಕಚೇರಿಯ ಆಡಳಿತದಲ್ಲಿ ಪಾರ್ದರ್ಶಕ ತರುವಲ್ಲಿ ಕ್ರಮವಹಿಸಲು ಸಾದ್ಯವಾಗಿದೆ.
  • ವಿಪಿಎನ್ ಮೂಲಕ ಮೂರು ಇಲಾಖೆಯ ಕಡತವನ್ನು ಪ್ರತಿ ದಿನವು ಸಂಜೆ ಕಚೇರಿ ಬಿಟ್ಟ ಕ್ಷಣದಿಂದ ಬೆಳಿಗ್ಗೆ ಕಚೇರಿ ಸೇರುವ ಒಳಗಾಗಿ ಅಂದಿನ ಕಡತಗಳನ್ನು ಅಂದೆ ಕ್ಲಿಯರ್ ಮಾಡಿರುವ ತೃಪ್ತಿ ನನ್ನದು.
  • ನೂರಾರು ಎಕರೆ ಸರ್ಕಾರಿ ಜಮೀನಿನ ಒತ್ತುವರಿ ಬಿಡಿಸಲಾಗಿದೆ. ಎಲ್ಲಾ ಸರ್ಕಾರಿ ವಿವರಗಳನ್ನು ಲ್ಯಾಂಡ್ ಬೀಟ್ ಆಪ್ ನಲ್ಲಿ ಸೇರ್ಪಡೆ ಮಾಡಲಾಗಿದೆ.
  • ಹತ್ತಾರು ವರ್ಷಗಳಿಂದ ಆದೇಶಗಳಾಗದೆ, ವಿಚಾರಣೆಯಾಗದೆ ಉಳಿದಿದ್ದ 2250 ಕ್ಕೂ ಹೆಚ್ಚು ಪ್ರಕರಣಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಆದೇಶ ಹೊರಡಿಸಿದ್ದೇನೆ. ಕಚೇರಿಯಲ್ಲಿ
  • ಕೇಸುಗಳ ಬಗ್ಗೆ ಸರಿಯಾದ ಮಾಹಿತಿ ಮತ್ತು ಕಡತಗಳೆ ಸಿಗದಂತಹ ಸ್ಥಿತಿಯಿಂದ RCCMS ಮೂಲಕ ಎಲ್ಲವನ್ನು ಕ್ರಮಬದ್ದಗೊಳಿಸಲಾಗಿದೆ.
  • ಮಾನ್ಯ ಉಚ್ಚನ್ಯಾಯಾಲಯದಲ್ಲಿ ಸರ್ಕಾರಿ ಜಮೀನಿನ ರಕ್ಷಣೆಗೆ ಸಂಬಂದಿಸಿದಂತೆ ನನ್ನ ಮೇಲೆ ಕಂಟೆಪ್ಟ್ ಅಡಿ ಕ್ರಮ ವಹಿಸುತ್ತೇವೆ ಎಂದಾಗಲು ಸರ್ಕಾರಿ ಜಮೀನಿನ ರಕ್ಷಣೆ ಮಾಡುವುದರ ಪರವಾಗಿ ನಿಂತಿದ್ದೇನೆ ಎಂಬ ತೃಪ್ತಿ ಇದೆ.
  • ಬೆಂಗಳೂರಿನಲ್ಲಿ ಜಿಲ್ಲಾಧಿಕಾರಿಗಳು ಸಾಮಾನ್ಯ ಜನರಿಗೆ ಸಿಗುವುದಿಲ್ಲ ಎಂಬ ಆರೋಪ ಸರ್ವೆ ಸಾಮಾನ್ಯ ಆದ್ದರಿಂದ ಮೊದಲ ದಿನದಿಂದ ಬೆಳಿಗ್ಗೆ 9.15 ಗಂಟೆಯಿಂದ ಸಂಜೆಯವರೆಗೆ ಸಾಮಾನ್ಯ ಜನರಿಗೆ ಸಿಗಲು ಪ್ರಯತ್ನಿಸಿದ್ದೇನೆ.
  • ರಾಜ್ಯಮಟ್ಟದ ಸ್ವಾತಂತ್ರ ದಿನಾಚರಣೆ, ಗಣರಾಜ್ಯೋತ್ಸವ ಮಾನ್ಯ ಮುಖ್ಯ ಮಂತ್ರಿಗಳ ಜನಸ್ಪಂದನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ.
  • ಸ್ಲಂ ಗಳ ಜನರು ಇಂದಿಗೂ ಪ್ರಾಣಿಗಳಂತೆ ಬದುಕಬೇಕಾದ ಪರಸ್ಥಿತಿ ಬೆಂಗಳೂರಿನಲ್ಲಿದೆ. ಅವರ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದ್ದೇನೆ. ಹಲವು ಪ್ರಕರಣಗಳಲ್ಲಿ ಕಲಂ 3 ಮತ್ತು 11 ರಲ್ಲಿ
  • ಘೋಷಣೆ ಹೊರಡಿಸಿದ್ದೇನೆ. ಸುಮಾರು 120 ಎಕರೆ ಜಮೀನನ್ನು Slum rehabilitation ಗಾಗಿ ಕೊಳಚೆ ನಿರ್ಮೂಲನ ಮಂಡಳಿಗೆ ನೀಡಿದ್ದೇನೆ.
  • ಹಲವು ವರ್ಷಗಳಿಂದ ವಿಶೇಷ ಆಶ್ರಯ ಯೋಜನೆ ಅಡಿ ಅಂಧರ, ಪೌರ ಕಾರ್ಮಿಕರ, ಪ.ಜಾ ಮತ್ತು ಪಂಗಡದವರ, ಅಂಗವಿಕಲರ, ನಿವೃತ್ತ ಸೈನಿಕರುಗಳ ವಿಶೇಷ ಪ್ರಕರಣಗಳಲ್ಲಿ ಸಾವಿರಾರು ನಿವೇಶನದ ಹಕ್ಕು ಪತ್ರಗಳನ್ನು ಕೊಡಲು ಪ್ರಕ್ರಿಯೆ ನಡೆಸಲಾಗಿದೆ ಕೆಲವನ್ನು ನೀಡಲಾಗಿದೆ ಕೆಲವು ಅಂತಿಮ ಹಂತದಲ್ಲಿವೆ ಎಂಬುದೆ ತೃಪ್ತಿ. ಹೀಗೆ ಮುಂತಾದ ಕೆಲವು ಕಾರ್ಯನಿರ್ವಹಿಸಲು ಕಾರಣರಾದ ಮತ್ತು ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ನಮಸ್ಕಾರಗಳು

ಇದನ್ನೂ ಓದಿ : ಸರ್ಕಾರಿ ಗೌರವಗಳೊಂದಿಗೆ ರತನ್ ಟಾಟಾ ಅಂತ್ಯಸಂಸ್ಕಾರ : ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ..!

 

 

Leave a Comment

DG Ad

RELATED LATEST NEWS

Top Headlines

ಅರಣ್ಯ ಇಲಾಖೆಯಲ್ಲಿ ಲಂಚದ ರೇಟ್ ​ಕಾರ್ಡ್.. ಅಪ್ರೈಸಲ್ ಕಮಿಟಿಯಲ್ಲಿ ಲಕ್ಷ ಲಕ್ಷ ಲೂಟಿ..!

ಬೆಂಗಳೂರು : ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಸ್ಟೇಟ್ ಲೆವೆಲ್ ಎಕ್ಸ್​ಫರ್ಟ್​ ಅಪ್ರೈಸಲ್ ಕಮಿಟಿ ವಿರುದ್ದ ಇದೀಗ ಲಕ್ಷ ಲಕ್ಷ ಹಣ ಸುಲಿಗೆ ಮಾಡುತ್ತಿರುವ ಗಂಭೀರ ಆರೋಪ

Live Cricket

Add Your Heading Text Here