ಬಿಗ್ ಬಾಸ್ ಭಾರತದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಹಲವು ಭಾಷೆಗಳಲ್ಲಿ ಪ್ರಸಾರವಾಗ್ತಿರುವ ಬಿಗ್ ಬಾಸ್’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳು ಎಷ್ಟು ಇಂಪಾರ್ಟೆಂಟೋ, ಅಷ್ಟೇ ಇಂಪಾರ್ಟೆಂಟ್ ನಿರೂಪಕರು ಕೂಡ. 15-20 ಸ್ಪರ್ಧಿಗಳನ್ನು ಹ್ಯಾಂಡಲ್ ಮಾಡುತ್ತಾ, ವಾರಾಂತ್ಯದಲ್ಲಿ ಪಂಚಾಯಿತಿ ಮಾಡುತ್ತಾ ಖಡಕ್ ಆಗಿ ನಡೆಸಿಕೊಂಡು ಹೋಗುವ ನಿರೂಪಕನ ಹೊಣೆಗಾರಿಕೆ ಜಾಸ್ತಿಯೇ ಇರುತ್ತದೆ. ಅಂತಹ ನಿರೂಪಕರಿಗೆ ಸಿಗುವ ಸಂಭಾವನೆ ಕೂಡ ದುಬಾರಿಯಾಗಿಯೇ ಇರುತ್ತದೆ.
ಬಿಗ್ ಬಾಸ್ ಕಾರ್ಯಕ್ರಮ ಏಳು ಭಾರತೀಯ ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಇದು ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಬೆಂಗಾಲಿ ಭಾಷೆಗಳಲ್ಲಿ ಪ್ರಸಾರ ಕಾಣುತ್ತದೆ. ಬಾಲಿವುಡ್ ಸ್ಟಾರ್ ಕಿಂಗ್ ಸಲ್ಮಾನ್ ಖಾನ್ ಶೋ ಹೋಸ್ಟ್ ಮಾಡಲು ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕರಾಗಿದ್ದಾರೆ.
ಕಲರ್ಸ್ ಟಿವಿಯಲ್ಲಿ ಪ್ರಸಾರವಾಗ್ತಿರುವ ಬಿಗ್ ಬಾಸ್ ಹಿಂದಿ ಸೀರಿಸ್ 18 ಅಪಾರ ಪ್ರೇಕ್ಷಕ ಬಳಗವನ್ನು ಹೊಂದಿದೆ. ಅಷ್ಟೆ ಅಲ್ಲ ಅದಕ್ಕಿಂತಲೂ ಹೆಚ್ಚು ಸದ್ದು ಮಾಡುತ್ತಿರುವ ವಿಷಯ ಏನು ಅಂದರೆ ಅದು ಬಿಗ್ ಬಾಸ್ ನಿರೂಪನೆಗೆ ಸಲ್ಮಾನ್ ಖಾನ್ ಅವರು ಪಡೆಯುತ್ತಿರುವ ಸಂಭಾವನೆ.
ಬಿಗ್ ಬಾಸ್ ಹೋಸ್ಟ್ ಮಾಡಲು ನಟ ಸಲ್ಮಾನ್ ಖಾನ್ ಸಂಭಾವನೆ ತಿಂಗಳಿಗೆ ಸುಮಾರು 60 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಬಿಗ್‌ಬಾಸ್ ಸೀಶನ್ 18 15 ವಾರಗಳು ನಡೆಯಲಿದೆ, ಅಂದ್ರೆ ಹೀಗೆ ನಟ ಸಲ್ಮಾನ್ ಖಾನ್ ಒಂದು ತಿಂಗಳಿಗೆ 60 ಕೋಟಿ ಸಂಭಾವನೆ ಪಡೆದರೆ. ಪೂರ್ತಿ ಸೀಸನ್‌ಗೆ ಬರೋಬ್ಬರಿ 250 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಬಿಗ್ ಬಾಸ್ ಹಿಂದಿ ಸೀರಿಸ್ 17ನೇ ಸೀಸನ್ ಸುಮಾರು 17 ವಾರಗಳ ಕಾಲ ನಡೆಯಿತು. ಈ ಬಾರಿಯೂ ಇದೇ ಸ್ಥಿತಿ ಮುಂದುವರಿದ್ರೆ. ಭಾರತೀಯ ಕಿರುತೆರೆ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಹೋಸ್ಟ್ ಎಂಬ ದಾಖಲೆಯನ್ನು ಈ ನಟ ಬರೆಯಲಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಹಲವು ಬಿಗ್ ಬಜೆಟ್ ಚಿತ್ರಗಳಿಗಿಂತ ಸಲ್ಮಾನ್ ಸಂಭಾವನೆ ಹೆಚ್ಚು ಎಂಬುದು ಅತ್ಯಂತ ಕುತೂಹಲಕಾರಿ ಸಂಗತಿ.
ಇದನ್ನೂ ಓದಿ : ಅವಧಿ ಮುಗಿಯೋವರೆಗೂ ಸಿದ್ದರಾಮಯ್ಯನವ್ರೇ ಸಿಎಂ – ಡಿ.ಕೆ ಸುರೇಶ್..!