Download Our App

Follow us

Home » ಮೆಟ್ರೋ » ಮಹಾಮಳೆಗೆ ತತ್ತರಿಸಿದ ಬೆಂಗಳೂರು – ರಸ್ತೆಗಳೆಲ್ಲ ಜಲಾವೃತ, ಅಪಾರ್ಟ್​ಮೆಂಟ್​ಗಳಿಗೆ ನೀರು ನುಗ್ಗಿ ಅವಾಂತರ..!

ಮಹಾಮಳೆಗೆ ತತ್ತರಿಸಿದ ಬೆಂಗಳೂರು – ರಸ್ತೆಗಳೆಲ್ಲ ಜಲಾವೃತ, ಅಪಾರ್ಟ್​ಮೆಂಟ್​ಗಳಿಗೆ ನೀರು ನುಗ್ಗಿ ಅವಾಂತರ..!

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಮಳೆರಾಯನ ಆರ್ಭಟ ಜೋರಾಗಿದೆ. ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದ್ದು, ಸಂಜೆಯಿಂದಲೇ ಹಲವು ಕಡೆ ವರುಣ ಅಬ್ಬರಿಸಿ ಅವಾಂತರ ಸೃಷ್ಟಿಸಿದ್ದಾನೆ. ವರುಣನ ಆರ್ಭಟಕ್ಕೆ ನಗರದೆಲ್ಲೆಡೆ ಟ್ರಾಫಿಕ್​​​ ಜಾಮ್​​​ ಉಂಟಾಗಿ ವಾಹನ ಸವಾರರು ಪರದಾಡಿದ್ದಾರೆ.

ಕೆ.ಆರ್ ಮಾರುಕಟ್ಟೆ, ರಾಜಾಜಿನಗರ, ವಿಜಯನಗರ, ಬನಶಂಕರಿ, ಮೆಜೆಸ್ಟಿಕ್, ಮಲ್ಲೇಶ್ವರಂ, ವೈಟ್ ಫೀಲ್ಡ್‌, ಮಾರತ್ ಹಳ್ಳಿ, ಹೆಬ್ಬಾಳ, ಕಾರ್ಪೊರೇಷನ್, ಶಾಂತಿನಗರ, ವಿಲ್ಸನ್ ಗಾರ್ಡನ್, ಕೋರಮಂಗಲ, ಜೆಪಿ ನಗರ, ಲಾಲ್​ ಬಾಗ್​ ಬಸವನಗುಡಿ ಸೇರಿದಂತೆ ಹಲವೆಡೆ ಧಾರಾಕಾರವಾಗಿ ಮಳೆಯಾಗಿದೆ.

ಕೆ.ಆರ್​​.ಮಾರ್ಕೆಟ್​ ಕೆರೆಯಂತೆ ಬದಲಾಗಿದ್ದು, ಮಳೆ ನೀರಿನಲ್ಲಿ ತರಕಾರಿ, ಹೂಗಳು ಕೊಚ್ಚಿ ಹೋಗಿವೆ. ಪ್ರತಿ ಬಾರಿ ಮಳೆ ಬಂದರೆ ಇದೇ ಪ್ರಾಬ್ಲಮ್ ಆಗ್ತಿದ್ದು, ಬಿಬಿಎಂಪಿ ವಿರುದ್ಧ ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದ್ದಾರೆ.  ಇನ್ನು, ಯಲಹಂಕದಲ್ಲಿ ಮಳೆ ನೀರು ಅಪಾರ್ಟ್​ಮೆಂಟ್​ಗೆ ನುಗ್ಗಿದೆ. ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್​ಗೆ ನೀರು ನುಗ್ಗಿದ್ದು, ನೆಲ ಮಹಡಿಯಲ್ಲಿದ್ದ ಬೈಕ್​​​, ಕಾರುಗಳು ಭಾಗಶಃ ಮುಳುಗಡೆಯಾಗಿದೆ. ನೀರು ತುಂಬಿದ್ದರಿಂದ ಅಪಾರ್ಟ್ಮೆಂಟ್ ನಿವಾಸಿಗಳು ಕಂಗಾಲಾಗಿದ್ದರು.

ಇಂದು ತಡರಾತ್ರಿಯೂ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಯ ಹಲವೆಡೆ ಅಕ್ಟೋಬರ್ 10ರವರೆಗೂ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ : ಸಿದ್ದರಾಮಯ್ಯ ಅರೆಸ್ಟ್​ಗೆ ಸ್ನೇಹಮಯಿ ಕೃಷ್ಣ ಒತ್ತಾಯ – ಲೋಕಾ ಎಸ್​ಪಿಗೆ ಸಿಎಂ ವಿರುದ್ಧ ಮತ್ತೊಂದು ದೂರು..!

Leave a Comment

DG Ad

RELATED LATEST NEWS

Top Headlines

ಅರಣ್ಯ ಇಲಾಖೆಯಲ್ಲಿ ಲಂಚದ ರೇಟ್ ​ಕಾರ್ಡ್.. ಅಪ್ರೈಸಲ್ ಕಮಿಟಿಯಲ್ಲಿ ಲಕ್ಷ ಲಕ್ಷ ಲೂಟಿ..!

ಬೆಂಗಳೂರು : ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಸ್ಟೇಟ್ ಲೆವೆಲ್ ಎಕ್ಸ್​ಫರ್ಟ್​ ಅಪ್ರೈಸಲ್ ಕಮಿಟಿ ವಿರುದ್ದ ಇದೀಗ ಲಕ್ಷ ಲಕ್ಷ ಹಣ ಸುಲಿಗೆ ಮಾಡುತ್ತಿರುವ ಗಂಭೀರ ಆರೋಪ

Live Cricket

Add Your Heading Text Here