Download Our App

Follow us

Home » ರಾಜಕೀಯ » ಸಿದ್ದರಾಮಯ್ಯ ಅರೆಸ್ಟ್​ಗೆ ಸ್ನೇಹಮಯಿ ಕೃಷ್ಣ ಒತ್ತಾಯ – ಲೋಕಾ ಎಸ್​ಪಿಗೆ ಸಿಎಂ ವಿರುದ್ಧ ಮತ್ತೊಂದು ದೂರು..!

ಸಿದ್ದರಾಮಯ್ಯ ಅರೆಸ್ಟ್​ಗೆ ಸ್ನೇಹಮಯಿ ಕೃಷ್ಣ ಒತ್ತಾಯ – ಲೋಕಾ ಎಸ್​ಪಿಗೆ ಸಿಎಂ ವಿರುದ್ಧ ಮತ್ತೊಂದು ದೂರು..!

ಬೆಂಗಳೂರು : ಮುಡಾ ಹಗರಣಕ್ಕೆ ದಿನಕ್ಕೊಂದು ತಿರುವು ಪಡೆದುಕೊಳುತ್ತಿದೆ. ದಸರಾ ಉದ್ಘಾಟನೆ ವೇದಿಕೆಯಲ್ಲಿ ಮುಡಾ ರಾಜಕೀಯ ಮಾತನಾಡಿದ್ದನ್ನ ವಿಪಕ್ಷಗಳು ಖಂಡಿಸಿವೆ. ಈ ಮಧ್ಯೆ ದೂರುದಾರ ಸ್ನಹಮಯಿ ಕೃಷ್ಣ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಎಸ್​ಪಿಗೆ ವಾಟ್ಸಾಪ್ ಮೂಲಕ ಮತ್ತೊಂದು ದೂರು ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅರೆಸ್ಟ್​ಗೆ ಸ್ನೇಹಮಯಿ ಕೃಷ್ಣ ಒತ್ತಾಯಿಸಿದ್ದಾರೆ. ಲೋಕಾಯುಕ್ತ ಎಸ್​ಪಿ ಉದೇಶ್ ಅವರಿಗೆ ಸ್ನೇಹಮಯಿ ಕೃಷ್ಣ ವಾಟ್ಸಾಪ್ ಸಂದೇಶ ರವಾನಿಸಿ ಮನವಿ ಸಲ್ಲಿಸಿದ್ದಾರೆ.

ಸಿಎಂ ರಾಜ್ಯದ ಜನತೆಗೆ ಬಹಿರಂಗ ಪ್ರಚೋದನೆ ಮಾಡುತ್ತಿದ್ದಾರೆ. ಸುಳ್ಳು, ಕಪಟ ಷಡ್ಯಂತ್ರಕ್ಕೆ ತಕ್ಕ ಪಾಠ ಕಲಿಸಿ ಅಂತ ಪ್ರಚೋದನೆ ಮಾಡಿದ್ದಾರೆ. ಇವರ ಇಂತಹ ಪ್ರಚೋದನೆಯಿಂದ ದೂರುದಾರನಾದ ನನ್ನ ಮತ್ತು ನನ್ನ ಕುಟುಂಬಕ್ಕೆ ತೊಂದರೆ ಆಗುವ ಮತ್ತು ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಆದ್ದರಿಂದ ಈ ಕೂಡಲೇ ಸಿಎಂ ಸಿದ್ದರಾಮಯ್ಯರನ್ನು ಬಂಧಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಮಹಿಳಾ ಟಿ20 ವಿಶ್ವಕಪ್​ನಲ್ಲಿಂದು ಭಾರತ-ಪಾಕ್ ಕದನ.. ಪಂದ್ಯದ ಸಮಯ, ಲೈವ್​ ಸ್ಟ್ರೀಮ್​ ಡಿಟೇಲ್ಸ್ ಇಲ್ಲಿದೆ..!

Leave a Comment

DG Ad

RELATED LATEST NEWS

Top Headlines

ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಇನ್ಸ್​ಪೆಕ್ಟರ್​ ಅಯ್ಯಣ್ಣ ರೆಡ್ಡಿ ಅರೆಸ್ಟ್..!

ಬೆಂಗಳೂರು : ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಇನ್ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಶಾಸಕ ಮುನಿರತ್ನ ಮಾಡಿರೋ ಹನಿಟ್ರ್ಯಾಪ್​​ಗೆ ಇನ್ಸ್ಪೆಕ್ಟರ್

Live Cricket

Add Your Heading Text Here