Download Our App

Follow us

Home » ಮೆಟ್ರೋ » BMTC ಬಸ್ ಡ್ರೈವರ್, ಕಂಡಕ್ಟರ್​ಗಳಿಗೆ ರಕ್ಷಣೆನೇ ಇಲ್ವಾ? – ಮೊನ್ನೆ ಚಾಕು ಇರಿತ..ನಿನ್ನೆ ಸ್ಕ್ರೂ ಡ್ರೈವರ್​​ನಿಂದ ಕೊಲೆ ಯತ್ನ..!

BMTC ಬಸ್ ಡ್ರೈವರ್, ಕಂಡಕ್ಟರ್​ಗಳಿಗೆ ರಕ್ಷಣೆನೇ ಇಲ್ವಾ? – ಮೊನ್ನೆ ಚಾಕು ಇರಿತ..ನಿನ್ನೆ ಸ್ಕ್ರೂ ಡ್ರೈವರ್​​ನಿಂದ ಕೊಲೆ ಯತ್ನ..!

ಬೆಂಗಳೂರು : ವೈಟ್​ಫಿಲ್ಡ್​ನ ಐಟಿಪಿಎಲ್​ ಬಸ್​ ಸ್ಟಾಪ್ ಬಳಿ ಕರ್ತವ್ಯ ನಿರತ ಬಿಎಂಟಿಸಿ ಕಂಡಕ್ಟರ್​​ ಮೇಲೆ ಪ್ರಯಾಣಿಕನೊಬ್ಬ ಚಾಕು ಇರಿದ ಘಟನೆ ಮಂಗಳವಾರದಂದು ನಡೆದಿತ್ತು. ಆದರೀಗ ಅಂತಹದ್ದೇ ಬೆದರಿಕೆಯ ಘಟನೆಯೊಂದು ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ವ್ಯಕ್ತಿಯೋರ್ವ ಕರ್ತವ್ಯ ನಿರತ ವೋಲ್ವೋ ಬಸ್​​ ಕಂಡಕ್ಟರ್​ಗೆ​ ಸ್ಕ್ರೂಡ್ರೈವರ್​​ನಿಂದ ಬೆದರಿಕೆ ಹಾಕಿದ್ದಾನೆ. ಪದೇ ಪದೇ ಫಾಸ್ಟ್ ಆಗಿ ಹೋಗುವಂತೆ ಒತ್ತಾಯಿಸುತ್ತಿದ್ದ, ಬಸ್ ಜೋರಾಗಿ ಓಡಿಸಲಿಲ್ಲ ಅಂತಾ ಕೋಪಗೊಂಡ ಪ್ರಯಾಣಿಕ ಏಕಾಏಕಿ ಬ್ಯಾಗ್​​ನಿಂದ ಸ್ಕ್ರೂ ಡ್ರೈವರ್ ಹೊರತೆಗೆದು ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಆತನನ್ನು ಪ್ರಯಾಣಿಕರು ತಡೆದು ಬಸ್​​ನಿಂದ ಕೆಳಗಿಳಿಸಿದ್ದಾರೆ.

ನಿನ್ನೆ 4-15ಕ್ಕೆ ರೂಟ್ ನಂಬರ್ 360/5 KA-57 F 9002 ಬಸ್​ನಲ್ಲಿ ನಡೆದಿರುವ ಘಟನೆ ಇದಾಗಿದ್ದು, ​ಬೊಮ್ಮನಹಳ್ಳಿಯ ಹೊಸೂರು ಮುಖ್ಯ ರಸ್ತೆಯಲ್ಲಿ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಬ್ಯಾಕ್​ ಟು ಬ್ಯಾಕ್​​ ಘಟನೆಗಳಿಂದ BMTC ಸಿಬ್ಬಂದಿಗಳು ಆತಂಕಗೊಂಡಿದ್ದಾರೆ.

ಇದನ್ನೂ ಓದಿ : ಆಹಾರ ಅರಸಿ ನಾಡಿಗೆ ಬಂದ ಆನೆ ಕಂದಕಕ್ಕೆ ಬಿದ್ದು ಸಾವು..!

Leave a Comment

DG Ad

RELATED LATEST NEWS

Top Headlines

ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಇನ್ಸ್​ಪೆಕ್ಟರ್​ ಅಯ್ಯಣ್ಣ ರೆಡ್ಡಿ ಅರೆಸ್ಟ್..!

ಬೆಂಗಳೂರು : ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಇನ್ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಶಾಸಕ ಮುನಿರತ್ನ ಮಾಡಿರೋ ಹನಿಟ್ರ್ಯಾಪ್​​ಗೆ ಇನ್ಸ್ಪೆಕ್ಟರ್

Live Cricket

Add Your Heading Text Here