ಮೈಸೂರು : ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಂದ 14 ನಿವೇಶನ ಮುಡಾಗೆ ವಾಪಾಸ್ ನೀಡುವ ಪ್ರಕ್ರಿಯೆ ಇಂದು ಪೂರ್ಣವಾಗಿದೆ. ಪಾರ್ವತಿಯವರಿಂದ ಪ್ರತಿ ಸೈಟ್ಗೆ 1,000 ರೂ. ಅಂದರೆ 14 ನಿವೇಶನಕ್ಕೆ ಒಟ್ಟು 14 ಸಾವಿರ ರೂ. ಪಡೆದು ನಿವೇಶನವನ್ನು ವಾಪಸ್ ಪಡೆಯಲಾಗಿದೆ.
ಸಿಎಂ ಸಿದ್ದರಾಮಯ್ಯರ ಪತ್ನಿಯೇ ಮುಡಾ ಕಚೇರಿಗೆ ಬಂದು ಸೈಟ್ ವಾಪಸ್ ಕೊಡೋದಾಗಿ ಮೊನ್ನೆ ಹೇಳಿದ್ದರು. ನಂತರ ತಕ್ಷಣವೇ ಸಿಎಂ ಪತ್ನಿಯ ಹೆಸರಿನಲ್ಲಿದ್ದ ಸೈಟ್ಗಳು ಮುಡಾ ಪಾಲಾಗಿವೆ. ಇಂದು ಮುಡಾಗೆ 14 ನಿವೇಶನ ಹಿಂದಿರುಗಿಸುವ ಪ್ರಕ್ರಿಯೆ ಪೂರ್ಣವಾಗಿದೆ. ಪಾವರ್ತಿ ಹೆಸರಲ್ಲಿದ್ದ ಸೈಟ್ ಮುಡಾ ಕಾರ್ಯದರ್ಶಿ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದಾರೆ.
ಪಾರ್ವತಿಯವರಿಂದ ಪ್ರತಿ ಸೈಟ್ಗೆ 1,000 ರೂ. ಅಂದರೆ 14 ನಿವೇಶನಕ್ಕೆ ಒಟ್ಟು 14 ಸಾವಿರ ರೂ. ಪಡೆದು ನಿವೇಶನವನ್ನು ವಾಪಸ್ ಪಡೆಯಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹೆಸರಿಗೆ ಸೈಟ್ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ : ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಅಂದಂತೆ – ಸಿದ್ದು ಪರ ಬ್ಯಾಟಿಂಗ್ ಮಾಡಿದ ಜಿಟಿ ದೇವೇಗೌಡಗೆ HDK ಟಾಂಗ್..!
Post Views: 68