ಬೆಂಗಳೂರು : ಗೋಬಿ, ಕಬಾಬ್ ಮತ್ತು ಪಾನಿಪುರಿಗೆ ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (FSSAI) ಇತ್ತೀಚೆಗೆ ತಿಳಿಸಿತ್ತು. ಇದೀಗ, ಕೇಕ್ಗೆ ಬಳಸುವ ಪದಾರ್ಥಗಳಲ್ಲೂ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಿಳಿಸಿದೆ.
ಕೇಕ್ಗೆ ಬಳಸುವ ಪದಾರ್ಥಗಳು ಕಲಬರಿಕೆಯಿಂದ ಕೂಡಿವೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಕೇಕ್ ಮಾದರಿಗಳನ್ನು ಸಂಗ್ರಹಿಸಿದ್ದರು. ಬಳಿಕ ಅದನ್ನು ಪರಿಶೀಲನೆಗೆ ಒಳಪಡಿಸಿದಾಗ 12 ಮಾದರಿ ಕೇಕ್ಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ. ವಿಶೇಷವಾಗಿ ರೆಡ್ ವೆಲ್ವೆಟ್ ಹಾಗೂ ಬ್ಲಾಕ್ ಫಾರೆಸ್ಟ್ ಕೇಕ್ನಲ್ಲಿ ಹೆಚ್ಚು ಬಣ್ಣ ಬಳಕೆ ಮಾಡುವುದರಿಂದ, ಇದು ಮನುಷ್ಯನ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹೌದು.. ಕೇಕ್ ಪ್ರಿಯರು ಇನ್ಮುಂದೆ ರುಚಿ ಎನಿಸುವ ಕೇಕ್ ತಿನ್ನುವ ಮುನ್ನ ಎಚ್ಚರಿಕೆ ವಹಿಸಬೇಕು. 12 ಮಾದರಿಗಳಲ್ಲಿ ಅಲೂನಾ ರೆಡ್, ಸನ್ ಸೆಟ್ ಯೆಲ್ಲೋ, ಪೊನುಸೆಯಾ 4R , ಕಾರ್ಮಿಯೋಸೆನ್ ಎಂಬ ಅಂಶ ಪತ್ತೆಯಾಗಿದೆ. ಈ ಕೃತಕ ಬಣ್ಣಗಳಿಂದ ಆರೋಗ್ಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ ರೆಡ್ ವೆಲ್ವೆಟ್ ಹಾಗೂ ಬ್ಲಾಕ್ ಫಾರೆಸ್ಟ್ ಕೇಕ್ಗೆ ಬಣ್ಣ ಬಳಕೆಗೆ ನಿರ್ಬಂಧಿಸಲಾಗಿದೆ. ಆಹಾರ ಸುರಕ್ಷತಾ ಇಲಾಖೆಯ ಸೂಚನೆ ಪಾಲಿಸುವಂತೆ ಕೇಕ್ ತಯಾರಿಕಾ ಸಂಸ್ಥೆಗಳಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕೇಕ್ನಲ್ಲಿ ಏನೆಲ್ಲಾ ಸೈಡ್ ಎಫೆಕ್ಟ್?
- Allura Red – ಅಲರ್ಜಿ, ಅಸ್ತಮಾ, ಜೀರ್ಣಕ್ರಿಯೆಯಲ್ಲಿ ಸಮಸ್ಯೆ, ತಲೆನೋವು
- sunset yellow FCF – ಅಲರ್ಜಿ, ಮಕ್ಕಳಲ್ಲಿ ಹೈಪರ್ ಆಕ್ಟಿವಿಟಿ,
- sunset yellow FCF ಕ್ರೋಮೋಸೋಮ್ ಡ್ಯಾಮೇಜ್, ಥೈರಾಯ್ಡ್ , ಆನ್‌ಸೈಟಿ ಸಮಸ್ಯೆ
- ponceau 4R – ಮಕ್ಕಳ ವರ್ತನೆ ಬದಲಾವಣೆ, ಅಲರ್ಜಿ ಸಮಸ್ಯೆ, ಅಸ್ತಮಾ ಸಮಸ್ಯೆ
- Tartrazine – ಸ್ಕಿನ್ ರಾಶಸ್, ಶ್ವಾಸಕೋಶ ಸಮಸ್ಯೆ, ಮೈಗ್ರೇನ್, ಡಿಪ್ರೆಶನ್,
- Tartrazine – ದೃಷ್ಟಿ ದೋಷ, ನಿದ್ರಾಹೀನತೆ , ಗ್ಯಾಸ್ಟ್ರಿಕ್ ಸಮಸ್ಯೆ
- Carmoisine – ಹೈಪರ್ ಸೆನ್ಸಿಟಿವಿಟಿ, ಚರ್ಮದ ಊತ, ಉಸಿರಾಟದ ಸಮಸ್ಯೆ
ಇದನ್ನೂ ಓದಿ : ದಸರಾ ಹೊತ್ತಲ್ಲೇ ಮೈಸೂರಲ್ಲಿ ನಶೆಯ ಆಟಾಟೋಪ – ರೇವ್ ಪಾರ್ಟಿ ಮಾಡ್ತಿದ್ದ 50ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ..!