Download Our App

Follow us

Home » ರಾಷ್ಟ್ರೀಯ » ಇಸ್ರೇಲ್​​ ಸೇನೆ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್​​ ನಸ್ರುಲ್ಲಾ ಸಾವು..!

ಇಸ್ರೇಲ್​​ ಸೇನೆ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್​​ ನಸ್ರುಲ್ಲಾ ಸಾವು..!

ಲೆಬೆನಾನ್ : ಇಸ್ರೇಲ್ ನಡೆಸಿದ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್​​ ನಸ್ರುಲ್ಲಾ ಮೃತಪಟ್ಟಿದ್ದಾರೆ. ನಸ್ರುಲ್ಲಾ ಸಾವಿನ ಬಗ್ಗೆ ಇಸ್ರೇಲ್​​​​ ಡಿಫೆನ್ಸ್​ ಫೋರ್ಸ್​( IDF) ಘೋಷಿಸಿದೆ.

ಕಳೆದ ಒಂದು ವಾರದಿಂದ ಲೆಬೆನಾನ್​ ಮೇಲೆ ದಾಳಿ ನಡೆಯುತ್ತಿದ್ದು, ನಿನ್ನೆ ಬೈರುತ್​​ ಮೇಲೆ ಬೃಹತ್​​​ ಜೆಟ್ ದಾಳಿ ನಡೆದಿದೆ. ಹೆಜ್ಬುಲ್ಲಾ ಉಗ್ರ ನೆಲೆಯನ್ನೇ ಟಾರ್ಗೆಟ್ ಮಾಡಿದ್ದ ಇಸ್ರೇಲ್​ ಸೇನೆ ಬೈರುತ್​ ಮೇಲೆ ಏರ್​​ಸ್ಟ್ರೈಕ್ ನಡೆಸಿದೆ.

ಇಸ್ರೇಲಿ ಜೆಟ್‌ಗಳು ರಾತ್ರಿಯಿಡೀ ದಕ್ಷಿಣ ಬೈರುತ್‌ನಲ್ಲಿ ಹೆಜ್ಬುಲ್ಲಾ ಭದ್ರಕೋಟೆಗಳ ಮೇಲೆ ಬಾಂಬ್ ದಾಳಿ ಮಾಡಿ ಹಲವಾರು ವಸತಿ ಕಟ್ಟಡಗಳನ್ನು ನೆಲಸಮಗೊಳಿಸಿದವು. ಇನ್ನು ಲೆಬೆನಾನ್​​ ಮೇಲೆ ರಾಕೆಟ್​, ಕ್ಷಿಪಣಿ ದಾಳಿ ನಡೆಸಿದ ಪರಿಣಾಮ ಹೆಜ್ಬುಲ್ಲಾ ದಕ್ಷಿಣ ಪ್ರಾಂತ್ಯ ಕಮಾಂಡರ್​​​​ ಅಲಿ ಕರ್ಕಿ ಕೂಡಾ ಮೃತಪಟ್ಟಿದ್ದಾರೆ.

ಇದನ್ನೂ ಓದಿ : ಚಿತ್ರದುರ್ಗ : ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ದರ್ಶನ್​​​ ಭಾವಚಿತ್ರದ ಫ್ಲಾಗ್ ಸೀಜ್ ಮಾಡಿದ ಪೊಲೀಸರು..!

Leave a Comment

DG Ad

RELATED LATEST NEWS

Top Headlines

ಮಂಡ್ಯದಲ್ಲಿ ಲಾರಿ-ಕಾರು ನಡುವೆ ಭೀಕರ ಅಪಘಾತ – ಸ್ಥಳದಲ್ಲೇ ಮೂವರು ವಿದ್ಯಾರ್ಥಿಗಳ ದುರ್ಮರಣ..!

ಮಂಡ್ಯ : ಲಾರಿ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯದ ಮಳವಳ್ಳಿ ಚೆನ್ನಗೌಡನ ದೊಡ್ಡಿ ಬಳಿ ನಡೆದಿದೆ.

Live Cricket

Add Your Heading Text Here