Download Our App

Follow us

Home » ಅಪರಾಧ » ಮಾಜಿ ಮಂತ್ರಿ ಮುನಿರತ್ನ ಮನೆ, ಕಚೇರಿಗಳ ಮೇಲೆ SIT ರೇಡ್..!

ಮಾಜಿ ಮಂತ್ರಿ ಮುನಿರತ್ನ ಮನೆ, ಕಚೇರಿಗಳ ಮೇಲೆ SIT ರೇಡ್..!

ಬೆಂಗಳೂರು : ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ರೇಪ್​ ಕೇಸ್ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದ RR ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ಈಗ SIT ಕಸ್ಟಡಿಯಲ್ಲಿದ್ದು, ಕೋರ್ಟ್ ಆದೇಶದಂತೆ ಮುನಿರತ್ನರನ್ನ ವಶಕ್ಕೆ ಪಡೆದ ವಿಶೇಷ ತನಿಖಾ ದಳದ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಇಂದು ಮುಂಜಾನೆ SIT ಅಧಿಕಾರಿಗಳು ಬೆಂಗಳೂರಿನಲ್ಲಿರುವ ಮುನಿರತ್ನ ಮನೆ, ಕಚೇರಿಗಳಲ್ಲಿ ಮೇಲೆ ರೇಡ್​ ಮಾಡಿದ್ದಾರೆ. FSL ಟೀಂ ಸಮೇತ ರೇಡ್ ಮಾಡಿರುವ SIT ಅಧಿಕಾರಿಗಳು, ಮನೆ, ಕಚೇರಿಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

DySP ಕವಿತಾ ನೇತೃತ್ವದ ತಂಡ ರೇಡ್ ಮಾಡಿದ್ದು, ಅತ್ಯಾಚಾರ ಪ್ರಕರಣ, ಜಾತಿ ನಿಂದನೆ ಪ್ರಕರಣ, ಬೆದರಿಕೆ ಪ್ರಕರಣದಡಿ ವೈಯಾಲಿಕಾವಲ್​ನಲ್ಲಿರುವ ಮುನಿರತ್ನ ಮನೆ ಸೇರಿದಂತೆ ವಿವಿಧೆಡೆ SIT ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇನ್ನು ಪ್ರಕರಣಗಳ ಸಂಬಂಧ ದಾಖಲೆಗಳು, ಟೆಕ್ನಿಕಲ್ ಎವಿಡೆನ್ಸ್, ಮನೆಯ CCTV ಡಿವಿಆರ್​​​, ದಾಖಲೆಗಳನ್ನು SIT ವಶಕ್ಕೆ ಪಡೆಯಲಿದ್ದು, ಮುನಿರತ್ನ ಮನೆಯ ಸಿಬ್ಬಂದಿ-ಆಪ್ತರನ್ನೂ SIT ವಿಚಾರಣೆ ನಡೆಸಲಿದೆ. ಸದ್ಯ ಮುನಿರತ್ನ ಮನೆಯಲ್ಲಿ SIT ಟೀಂ ಬೀಡು ಬಿಟ್ಟಿದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಲಾರಿ-ಆಟೋ ನಡುವೆ ಭೀಕರ ಅಪಘಾತ.. ಯುವತಿ ಸಾವು, ಲಾರಿ ಚಾಲಕ ಎಸ್ಕೇಪ್..!

Leave a Comment

DG Ad

RELATED LATEST NEWS

Top Headlines

ಸಲ್ಮಾನ್ ಖಾನ್​ ರಕ್ಷಣೆಗೆ 70 ಜನರ ನೇಮಕ.. 4 ಲೇಯರ್​ ಭದ್ರತೆ, ಸರ್ಕಾರ ಖರ್ಚು ಮಾಡೋದೆಷ್ಟು ಗೊತ್ತಾ?

ಹೈದರಾಬಾದ್‌ : ಬಾಲಿವುಡ್ ಸೂಪರ್‌ಸ್ಟಾರ್, ಭಾಯಿಜಾನ್ ಸಲ್ಮಾನ್ ಖಾನ್ ಮುಂಬರುವ ಆಕ್ಷನ್ ಡ್ರಾಮಾ ಸಿನಿಮಾ ‘ಸಿಕಂದರ್‌’ನ ಸಿನಿಮಾದ ಚಿತ್ರೀಕರಣವನ್ನು ಹೆಚ್ಚಿನ ಭದ್ರತಾ ಕ್ರಮಗಳ ಮಧ್ಯೆ ಶುರು ಮಾಡಿಕೊಂಡಿದ್ದಾರೆ.

Live Cricket

Add Your Heading Text Here