ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಇಲಾಖಾವಾರು ಬಜೆಟ್ ಪೂರ್ವಭಾವಿ ಸಭೆಯನ್ನು ಇಂದು (ಜ.20) ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ರಾಜ್ಯ ವಿದ್ಯುತ್ ನಿಗಮದ ಸಭಾಂಗಣದಲ್ಲಿ ನಡೆಸಲಿದ್ದಾರೆ. ಫೆಬ್ರವರಿ 16ರಂದು 2024-25ನೇ ಸಾಲಿನ ದಾಖಲೆಯ ರಾಜ್ಯ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಮಂಡಿಸಲಿದ್ದಾರೆ.
ಇಂದು ಪ್ರತಿ ಇಲಾಖೆಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆ 30 ನಿಮಿಷಗಳ ಸಭೆ ನಡೆಸಲಿದ್ದು, ತೆರಿಗೆ ವಿನಾಯಿತಿ – ಹೆಚ್ಚಳ, ಅನುದಾನ ಹಂಚಿಕೆ, ಇಲಾಖಾವಾರು ಪ್ರಗತಿ ಹಾಗೂ ಮುಂದಿನ ಯೋಜನೆಗಳ ದೃಷ್ಟಿಕೋನ ಕುರಿತು ಸಿಎಂ ಚರ್ಚೆನಡೆಸಲಿದ್ದಾರೆ. ಗ್ಯಾರಂಟಿಗೆ ಹಣ ಹೊಂದಾಣಿಕೆ, ಆದಾಯ ಹೆಚ್ಚಳ, ಜಿಲ್ಲಾವಾರು ಹಣ ಹಂಚಿಕೆ ಕುರಿತು ಚರ್ಚೆ ನಡೆಸಲಿದ್ದಾರೆ.
ಮಧ್ಯಾಹ್ನ 12 ರಿಂದ 12.30ರ ವರೆಗೆ ಆರೋಗ್ಯ ಇಲಾಖೆ, 12.30ರಿಂದ 1 ಗಂಟೆಯ ವರೆಗೆ ತೋಟಗಾರಿಕೆ ಇಲಾಖೆ, 1 ಗಂಟೆಯಿಂದ 1.30ರ ವರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, 1.30 ರಿಂದ 2 ಗಂಟೆಯ ವರೆಗೆ ರೇಷ್ಮೆ ಮತ್ತು ಪಶುಸಂಗೋಪನೆ ಇಲಾಖೆ, 2 ಗಂಟೆಯಿಂದ 2.30ರವರೆಗೆ ಯೋಜನೆ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಪೂರ್ವಭಾವಿ ಚರ್ಚೆ ನಡೆಸಲಿದ್ದಾರೆ.
ಸಂಜೆ 4 ರಿಂದ 4.30ರವರೆಗೆ ಉನ್ನತ ಶಿಕ್ಷಣ, 4.30 ರಿಂದ 5ರವರೆಗೆ ಬೆಂಗಳೂರು ಅಭಿವೃದ್ಧಿ, ಸಂಜೆ 5 ರಿಂದ 5.30ರವರೆಗೆ ಜಲಸಂಪನ್ಮೂಲ ಇಲಾಖೆ, 5.30 ರಿಂದ 6 ಗಂಟೆಯವರೆಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ, 6 ಗಂಟೆಯಿಂದ 6.20ರವರೆಗೆ ಅರಣ್ಯ ಇಲಾಖೆ, 6.20 ರಿಂದ 6.50ರವರೆಗೆ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಿದ್ದರಾಮಯ್ಯ ಚರ್ಚೆ ನಡೆಸಲಿದ್ದಾರೆ.
ಸಂಜೆ 6.50 ರಿಂದ 7.20ರವರೆಗೆ ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು, ರಾತ್ರಿ 7.20 ರಿಂದ 7.50ರವರೆಗೆ ಸಹಕಾರ(ಕೃಷಿ ಮಾರುಕಟ್ಟೆ ಸೇರಿದಂತೆ) ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಪೂರ್ವಭಾವಿ ಚರ್ಚೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ : ಪಿಎಸ್ಐ – ಸಿಐಟಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ – ಸಬ್ಇನ್ಸ್ಪೆಕ್ಟರ್ ಸಿಸಿಬಿ ವಶಕ್ಕೆ..!