ಐತಿಹಾಸಿಕ ಕ್ಷಣಕ್ಕೆ ಇನ್ನು ಎರಡು ದಿನ ಮಾತ್ರ ಬಾಕಿ ಉಳಿದಿದ್ದು, ಅಯೋಧ್ಯೆಯಲ್ಲಿ ಅಂತಿಮ ಹಂತದ ಸಿದ್ಧತೆಗಳು ಬಲು ಜೋರಾಗಿಯೇ ನಡೆಯುತ್ತಿದೆ. ರಾಮ ಮಂದಿರದ ಉದ್ಘಾಟನೆ ಹಿನ್ನೆಲೆಯಲ್ಲಿ ಭಕ್ತರು ರಾಮಲಲ್ಲಾಗಾಗಿ ವಿಶೇಷ ಉಡುಗೊರೆಗಳನ್ನು ನೀಡ್ತಿದ್ದಾರೆ. ಇದೀಗ ಹೈದ್ರಾಬಾದ್ನ ವ್ಯಕ್ತಿಯೊಬ್ಬರು ಅಯೋಧ್ಯೆಗಾಗಿ 1,265 ಕೆಜಿ ತೂಕದ ವಿಶೇಷ ಲಡ್ಡುವನ್ನು ತಯಾರಿಸಿ ರಾಮ ಸನ್ನಿಧಾನಕ್ಕೆ ಅರ್ಪಿಸಿದ್ದಾರೆ.
ಹೈದ್ರಾಬಾದ್ ಕಂಟೋನ್ಮಂಟ್ ಪಿಕೆಟ್ ಪ್ರದೇಶದ ಶ್ರೀ ರಾಮ್ ಕ್ಯಾಟರಿಂಗ್ ಸರ್ವಿಸಸ್ ಮಾಲೀಕ ನಾಗಭೂಷಣ ರೆಡ್ಡಿ ಈ ಲಡ್ಡು ತಯಾರಿಸಿದ್ದಾರೆ. ಈ ಲಡ್ಡು ಸುಮಾರು 1,265 ಕೆಜಿ ತೂಕವಿದ್ದು, ಜೈ ಶ್ರೀ ರಾಮ್ ಎಂದು ಚಿತ್ರಿಸಲಾಗಿದೆ. ಈ ಲಡ್ಡು ವಾಹನದ ಮೂಲಕ ಅಯೋಧ್ಯೆ ತಲುಪಿದೆ.
ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯು ಜನವರಿ 22 ರಂದು ನಡೆಯಲಿದೆ. 1265 ಕೆಜೆ ತೂಕದ ಲಡ್ಡು ಯಾಕೆ ಮಾಡಲಾಗಿದೆ ಅಂದರೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ಮಾಡಿದ ದಿನದಿಂದ ಉದ್ಘಾಟನೆ ಆಗುವವರೆಗೆ ಎಷ್ಟು ದಿನಗಳು ಆಗುತ್ತದೆ ಎಂದು ಲೆಕ್ಕ ಹಾಕಿ ಮಾಡಿದ್ದಾರೆ.
ಲಡ್ಡುವನ್ನು ರೆಫ್ರಿಜರೇಟೆಡ್ ಗಾಜಿನ ಪೆಟ್ಟಿಗೆಯಲ್ಲಿ ತೆಗೆದುಕೊಂಡು ಹೋಗಲಾಗುತ್ತದೆ. ಈ ಲಾಡನ್ನು ಸುಮಾರು 25 ಜನರು ತಯಾರಿಸಿದ್ದು, 24 ಗಂಟೆಗಳಲ್ಲಿ 1,265 ಕೆ.ಜಿ ತೂಕದ ಲಾಡನ್ನು ತಯಾರಿಸಿದ್ದಾರೆ.
ನಾಗಭೂಷಣ ರೆಡ್ಡಿ ಈ ಬಗ್ಗೆ ಮಾತನಾಡಿದ್ದು, ‘ನಾನು 2000 ರಿಂದ ಶ್ರೀ ರಾಮ್ ಕ್ಯಾಟರಿಂಗ್ ಎಂಬ ಕೇಟರಿಂಗ್ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ರಾಮ ಜನ್ಮಭೂಮಿ ದೇವಸ್ಥಾನದ ಭೂಮಿ ಪೂಜೆ ನಡೆಯುತ್ತಿರುವಾಗ, ಶ್ರೀರಾಮನಿಗೆ ಯಾವ ನೈವೇದ್ಯವನ್ನು ನೀಡಬಹುದು ಎಂದು ಯೋಚಿಸಿದ್ದೆವು. ನಂತರ, ಭೂಮಿ ಪೂಜೆಯ ದಿನದಿಂದ ದೇವಾಲಯ ತೆರೆಯುವ ದಿನದವರೆಗೆ ನಾವು ಪ್ರತಿ ದಿನ 1 ಕೆಜಿ ಲಡ್ಡುವನ್ನು ನೀಡುತ್ತೇವೆ ಎಂಬ ಯೋಚನೆಗೆ ಬಂದೆವು’ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಪಿಎಸ್ಐ – ಸಿಐಟಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ – ಸಬ್ಇನ್ಸ್ಪೆಕ್ಟರ್ ಸಿಸಿಬಿ ವಶಕ್ಕೆ..!