Download Our App

Follow us

Home » ಮೆಟ್ರೋ » ಭೋವಿ ನಿಗಮ ಅಕ್ರಮ ತನಿಖೆಯಲ್ಲೇ ಭ್ರಷ್ಟಾಚಾರ – ತನಿಖಾಧಿಕಾರಿ ಎ.ಡಿ ನಾಗರಾಜ್ ಸಸ್ಪೆಂಡ್..!

ಭೋವಿ ನಿಗಮ ಅಕ್ರಮ ತನಿಖೆಯಲ್ಲೇ ಭ್ರಷ್ಟಾಚಾರ – ತನಿಖಾಧಿಕಾರಿ ಎ.ಡಿ ನಾಗರಾಜ್ ಸಸ್ಪೆಂಡ್..!

ಬೆಂಗಳೂರು : ಭೋವಿ ನಿಗಮ ಅಕ್ರಮ ತನಿಖೆಯಲ್ಲೇ ಭ್ರಷ್ಟಾಚಾರ ನಡೆದಿದ್ದು, ಆರೋಪಿಗಳಿಂದ ಹಣ ಪಡೆದಿದ್ದ ತನಿಖಾಧಿಕಾರಿಯನ್ನು ಹಿರಿಯ ಅಧಿಕಾರಿಗಳು ಸಸ್ಪೆಂಡ್ ಮಾಡಿದ್ದಾರೆ. ತನಿಖಾಧಿಕಾರಿಯಾಗಿದ್ದ ಎ.ಡಿ ನಾಗರಾಜ್​​ನ್ನು ಸಸ್ಪೆಂಡ್ ಮಾಡಲಾಗಿದೆ.

ಭೋವಿ ನಿಗಮದಲ್ಲಿ ಕೋಟಿ-ಕೋಟಿ ಹಣ ಅಕ್ರಮ ನಡೆದಿತ್ತು, ಈ ಅಕ್ರಮ ಸಂಬಂಧ ಸಿಐಡಿ ತನಿಖೆ ನಡೆಸುವಂತೆ ಸರ್ಕಾರ ಆದೇಶ ನೀಡಿತ್ತು. ನಿಗಮದ MD ನಾಗರಾಜಪ್ಪ, ಲೀಲಾವತಿ ಸೇರಿ ಹಲವರ ಅರೆಸ್ಟ್ ಆಗಿತ್ತು. ಸಿಐಡಿ ಅಧಿಕಾರಿಗಳು ಆರೋಪಿಗಳನ್ನ ಬಂಧಿಸಿ ತನಿಖೆ ನಡೆಸಿದ್ದರು, ಈ ವೇಳೆ ತನಿಖಾಧಿಕಾರಿ ಎ.ಡಿ ನಾಗರಾಜ್ ಭ್ರಷ್ಟಾಚಾರ ಬಯಲಾಗಿದೆ. ತನಿಖಾಧಿಕಾರಿ ನಾಗರಾಜ್​​ನ್ನು ಸಸ್ಪೆಂಡ್ ಮಾಡಿ CID ಡಿಜಿ ಸಲೀಂ ಆದೇಶ ಹೊರಡಿಸಿದೆ.

2021-22ನೇ ಸಾಲಿನಲ್ಲಿ ಭೋವಿ ನಿಗಮದಿಂದ ಉದ್ಯಮಿಗಳಿಗೆ ಸಾಲ ನೀಡುವ ಯೋಜನೆಯಲ್ಲಿ ನಡೆದಿದ್ದ ಅವ್ಯವಹಾರ ಆರೋಪದ ಮೇಲೆ ದೂರು ದಾಖಲಾಗಿತ್ತು. ಅಕ್ರಮ ಸಂಬಂಧ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕಲಬುರಗಿ ಜಿಲ್ಲೆಯಲ್ಲಿ ದೂರು ದಾಖಲಾಗಿದ್ದವು. 10 ಕೋಟಿಗೂ ಹೆಚ್ಚು ಹಣ ಅಕ್ರಮ ವರ್ಗಾವಣೆ ಮಾಡಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : ಬಾಗಲಕೋಟೆಯಲ್ಲಿ ಕಾರು-ಲಾರಿ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ನಾಲ್ವರ ಸಾವು..!

Leave a Comment

DG Ad

RELATED LATEST NEWS

Top Headlines

ಸೆಟ್ಟೇರಿದ ಮಹೇಶ್ ಚಿನ್ಮಯಿ ನಿರ್ದೇಶನದ ‘ಗೌರಿಶಂಕರ’ ಸಿನಿಮಾ..!

ಮಹೇಶ್ ಚಿನ್ಮಯಿ ನಿರ್ದೇಶನದ ’ಗೌರಿಶಂಕರ’ ಚಿತ್ರದ ಮುಹೂರ್ತ ಸಮಾರಂಭವು ಶ್ರೀ ವಿನಾಯಕ ವೆಂಕಟೇಶ್ವರ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಹಿರಿಯ ನಿರ್ಮಾಪಕ ರಾಜಣ್ಣ ಕ್ಯಾಮಾರ ಆನ್ ಮಾಡಿದರೆ, ಶಿವಲಿಂಗ

Live Cricket

Add Your Heading Text Here