ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ ಅವರು ಜಾತಿನಿಂದನೆ ಹಾಗೂ ವಂಚನೆ ಆರೋಪದ ಪ್ರಕರಣದಲ್ಲಿ ಜಾಮಿನು ಪಡೆದುಕೊಂಡಿದ್ದರು. ಆದ್ರೆ ಅದಾದ ಬಳಿಕ ಅವರ ಮೇಲೆ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ದೂರು ಆಧರಿಸಿದ ಪೊಲೀಸರು ಅವರನ್ನು ಜೈಲಿನಲ್ಲಿರುವಾಗಲೇ ವಶಕ್ಕೆ ಪಡೆದಿದ್ದರು. ಸದ್ಯ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಕೇಸ್ನ್ನು ಎಸ್‌ಐಟಿಗೆ ವಹಿಸಿದ ಹಿನ್ನೆಲೆ ಮುನಿರತ್ನ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ SIT ತಂಡ ವಶಕ್ಕೆ ಪಡೆದುಕೊಂಡಿದೆ.
ಮುನಿರತ್ನ ಶಾಸಕತ್ವ ಅಮಾನತಿಗೆ ಆಗ್ರಹ ಹೆಚ್ಚುತ್ತಿದ್ದು, ಇದೀಗ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷರಾಗಿರುವ ಡಾ.ಪಿ ಮೂರ್ತಿ ಅವರು ಮುನಿರತ್ನರನ್ನು MLA ಸ್ಥಾನದಿಂದ ಉಚ್ಛಾಟನೆ ಮಾಡಿ ಎಂದು ಆಗ್ರಹಿಸಿದ್ದಾರೆ.
ಪರಿಶಿಷ್ಟರ ಬಗ್ಗೆ ಅಪಮಾನಕಾರಿಯಾಗಿ ಮುನಿರತ್ನ ಮಾತ್ನಾಡಿದ್ದಾರೆ, ಜಾತಿನಿಂದನೆ ಮಾಡಿರುವ ಮುನಿರತ್ನ ಜನಪ್ರತಿನಿಧಿಯಾಗಿರಲು ಅರ್ಹರಲ್ಲ. ಶಾಸಕ ಮುನಿರತ್ನ ನಮ್ಮ ಸಮುದಾಯವನ್ನು ಅಪಮಾನ ಮಾಡಿದ್ದಾರೆ. ಶಾಸಕ ಮುನಿರತ್ನ ವಿರುದ್ಧ ಇಡೀ ಸಮುದಾಯ ಆಕ್ರೋಶಗೊಂಡಿದೆ, ಸಂವಿಧಾನ ವಿರೋಧಿ ಮುನಿರತ್ನ ಶಾಸಕರಾಗಿರಲು ಅರ್ಹರಲ್ಲ. ಕೂಡಲೇ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಿ ಎಂದು ಪಿ.ಮೂರ್ತಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಒಟಿಟಿಗೆ ಬರ್ತಿದೆ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಕೃಷ್ಣಂ ಪ್ರಣಯ ಸಖಿ’ – ಯಾವಾಗ?