ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಬೆಂಗಳೂರು ನಗರದ ಅಬಕಾರಿ ಇಲಾಖೆಯ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ನಿನ್ನೆ ದಾಳಿ ನಡೆಸಿದೆ.
ಬೆಂಗಳೂರಿನ ಅಬಕಾರಿ ಕಚೇರಿಗಳ ಪರಿಶೀಲನೆಗೆ ವಾರೆಂಟ್ ಜಾರಿ ಬೆನ್ನಲ್ಲೇ ನಿನ್ನೆ ಲೋಕಾಯುಕ್ತ ದಾಳಿ ಮಾಡಿದ್ದು, ಒಂದೇ ಸಮಯಕ್ಕೆ 62 ಕಡೆ ರೇಡ್ ಮಾಡಿದೆ. ಈ ವೇಳೆ ಯಶವಂತಪುರ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಗಾಂಜಾ, ಲಿಕ್ಕರ್ ಬಾಟಲ್ಗಳು ಪತ್ತೆಯಾಗಿವೆ. ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ 134 ದೂರುಗಳು ಬಂದಿದ್ದವು. ಅಧಿಕಾರಿಗಳ ತಂಡ ರಚಿಸಿಕೊಂಡು ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ನಿನ್ನೆ ದಾಳಿ ನಡೆಸಲಾಗಿದ್ದು, ಈ ವೇಳೆ ಗಾಂಜಾ, ಅರ್ಧಂಬರ್ಧ ಕುಡಿದು ಇಟ್ಟಿರುವ 16 ಲಿಕ್ಕರ್ ಬಾಟಲ್ ಹಾಗೂ ಸಿಗರೇಟ್, ಲಕ್ಷ-ಲಕ್ಷ ಹಣಗಳು ಪತ್ತೆಯಾಗಿವೆ. ಲೋಕಾಯುಕ್ತ ಅಧಿಕಾರಿಗಳು ಕಾಲಿಡುತ್ತಿದ್ದಂತೆ ಕೆಲ ಸಿಬ್ಬಂದಿ ಎಸ್ಕೇಪ್ ಆಗಿದ್ದಾರೆ.
3 ಜನ ಅಧಿಕಾರಿಗಳ ಚೇಂಬರ್ನಲ್ಲಿ ಗಾಂಜಾ ಹಾಗೂ ಲಿಕ್ಕರ್ ಪತ್ತೆಯಾಗಿದ್ದು, ಅನುಮಾನಾಸ್ಪದ ಕೋಡ್ ವರ್ಡ್ ನಂಬರ್ ಬರೆದಿಟ್ಟಿರುವ ಪೇಪರ್ ಕೂಡ ಪತ್ತೆಯಾಗಿದೆ. ಲೋಕಾಯುಕ್ತ ಕಾಲಿಡ್ತಿದ್ದಂತೆ ಪೇಪರ್ಗಳನ್ನ ಅಧಿಕಾರಿಗಳು ನೀರಿಗೆ ಹಾಕಿದ್ದಾರೆ. ಅಬಕಾರಿ ಅಧಿಕಾರಿಗಳು ಶೌಚಾಲಯದಲ್ಲಿ ಪೇಪರ್ ಹಾಕಿ ಫ್ಲಶ್ ಮಾಡಿದ್ದು, ಸಿಕ್ಕಷ್ಟು ಪೇಪರ್ ಪಡೆದು ಒಣಗಿಸಿ ಲೋಕಾ ಮಾಹಿತಿ ಸಂಗ್ರಹಿಸಿದೆ.
ಇದನ್ನೂ ಓದಿ : ಮುಡಾ ಟೆನ್ಷನ್ ಮಧ್ಯೆ ಇಂದು ಕೇರಳಕ್ಕೆ ಸಿಎಂ ಸಿದ್ದು..!