Download Our App

Follow us

Home » ರಾಜಕೀಯ » ಮುಡಾ ಕೇಸ್ : ಸಿಎಂ ಸಿದ್ದುಗೆ ಸಾಲು ಸಾಲು ಸಂಕಷ್ಟ.. ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲಿಂದು ವಿಚಾರಣೆ..!

ಮುಡಾ ಕೇಸ್ : ಸಿಎಂ ಸಿದ್ದುಗೆ ಸಾಲು ಸಾಲು ಸಂಕಷ್ಟ.. ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲಿಂದು ವಿಚಾರಣೆ..!

ಬೆಂಗಳೂರು : ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ನಿನ್ನೆ ಹೈಕೋರ್ಟ್ ಸಿಎಂಗೆ ಬಿಗ್ ಶಾಕ್ ನೀಡಿದ್ರೆ, ಇಂದು ಸಿಎಂ ಸಿದ್ದುಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿದೆ.

ಹೈಕೋರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅರ್ಜಿ ವಜಾಗೊಳ್ಳುತ್ತಿದ್ದಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್​​ನಲ್ಲಿ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಖಾಸಗಿ ದೂರಿಗೆ ಮತ್ತೆ ಜೀವ ಬಂದಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲಿಂದು ಮುಡಾ ಬಗ್ಗೆ ವಿಚಾರಣೆ ನಡೆಯಲಿದೆ. ಮುಡಾ ಹಗರಣದಲ್ಲಿ ಸಿಎಂ ಪಾತ್ರದ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿರುವುದರಿಂದ, ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಕೂಡಾ ತನಿಖೆಗೆ ಆದೇಶಿಸುವ ಸಾಧ್ಯತೆ ಹೆಚ್ಚಿದೆ.

ಇಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್​ನಲ್ಲಿ ಖಾಸಗಿ ದೂರಿನ ವಿಚಾರಣೆ ನಡೆಯಲಿದೆ. ಹೈಕೋರ್ಟ್ ಆದೇಶದ ಪ್ರತಿ ಸಲ್ಲಿಸಲಿರುವ ದೂರುದಾರರು ಪ್ರಕರಣವನ್ನ ತನಿಖೆಗೆ ವಹಿಸುವಂತೆ ವಾದಿಸಲಿದ್ದಾರೆ. ತನಿಖೆ ಬಗ್ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಮಾನಿಸಲಿದೆ. ಯಾವ ಸಂಸ್ಥೆ ತನಿಖೆ ನಡೆಸಬೇಕೆಂದು ಕೋರ್ಟ್ ನಿರ್ಧರಿಸಲಿದ್ದು, ಕೋರ್ಟ್ ತನಿಖೆಗೆ ಆದೇಶ ನೀಡಿದರೆ ಸಿಎಂಗೆ ಸಂಕಷ್ಟ ಶುರುವಾಗಲಿದೆ. ಸಿಎಂ ವಿರುದ್ಧ ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದ್ದು, ಒಂದು ವೇಳೆ ಎಫ್‌ಐಆರ್ ದಾಖಲಾದರೆ ರಾಜೀನಾಮೆ ಒತ್ತಡ ಹೆಚ್ಚಲಿದೆ. ಇಂದು ಬೆಳಗ್ಗೆ 10:30ಕ್ಕೆ ಖಾಸಗಿ ದೂರಿನ ವಿಚಾರಣೆ ಆರಂಭವಾಗಲಿದೆ.

ಮೇಲ್ಮನವಿ ಸಲ್ಲಿಸಲು ಸಿಎಂ ಸಿದ್ದರಾಮಯ್ಯ ಸಹ ಸಿದ್ಧತೆ : ಎಫ್​ಐಆರ್ ಭೀತಿಯಲ್ಲಿರುವ ಸಿಎಂ ಸಿದ್ದರಾಮಯ್ಯ ಸಹ, ಮುಂದಿನ ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಪರ ವಕೀಲರ ತಂಡ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದೆ.

ಇದನ್ನೂ ಓದಿ : ರೇಪ್ ಕೇಸ್ : ಪರಪ್ಪನ ಅಗ್ರಹಾರದಿಂದ MLA ಮುನಿರತ್ನರನ್ನ ವಶಕ್ಕೆ ಪಡೆದ ಎಸ್ಐಟಿ..!

Leave a Comment

DG Ad

RELATED LATEST NEWS

Top Headlines

ತಾಯಿಗೆ ಮರು ಪ್ರೀತಿ, ಹೊಸ ಜೀವನ.. ಹೆತ್ತಮ್ಮನಿಗೇ 2ನೇ ಮದುವೆ ಮಾಡಿಸಿದ ಪುತ್ರ..!

ಪತಿಯನ್ನು ಕಳೆದುಕೊಂಡು ಒಂಟಿಯಾಗಿದ್ದ ತಾಯಿಗೆ ಮಗನೇ ಮುಂದೆ ನಿಂತು ಮದುವೆ ಮಾಡಿಸಿದ ಅಚ್ಚರಿಯ ಘಟನೆಯೊಂದು ನಡೆದಿದೆ. 18 ವರ್ಷ ತಾಯಿ ಜೊತೆಗಿದ್ದ ಮಗ ಅಬ್ದುಲ್ ಅಹಾದ್ ಬಹಳ

Live Cricket

Add Your Heading Text Here