Download Our App

Follow us

Home » ರಾಜಕೀಯ » ನಾನ್ಯಾಕೆ ರಾಜೀನಾಮೆ ಕೊಡ್ಬೇಕು, ಕುಮಾರಸ್ವಾಮಿ ರಾಜೀನಾಮೆ ಕೊಟ್ಟಿದ್ದಾರಾ? – ಸಿಎಂ ಸಿದ್ದು ಕಿಡಿ..!

ನಾನ್ಯಾಕೆ ರಾಜೀನಾಮೆ ಕೊಡ್ಬೇಕು, ಕುಮಾರಸ್ವಾಮಿ ರಾಜೀನಾಮೆ ಕೊಟ್ಟಿದ್ದಾರಾ? – ಸಿಎಂ ಸಿದ್ದು ಕಿಡಿ..!

ಬೆಂಗಳೂರು : ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೈಕೋರ್ಟ್​ನಲ್ಲಿ ಹಿನ್ನಡೆ ಆಗಿದೆ. ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್​​ಗೆ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಪ್ರಕರಣದ ಬಗ್ಗೆ ತನಿಖೆ ಆಗಬೇಕು ಎಂದು ಹೈಕೋರ್ಟ್​ ಹೇಳಿದೆ. ಇದೀಗ ಹೈಕೋರ್ಟ್ ತೀರ್ಪು ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.

ಪ್ರಾಸಿಕ್ಯೂಷನ್​​​ಗೆ ಅನುಮತಿ ಕೊಟ್ಟಿಲ್ಲ ಕೇವಲ ತನಿಖೆಗೆ ಅನುಮತಿ, ನಾನು ಯಾಕೆ ರಾಜೀನಾಮೆ ಕೊಡ್ಬೇಕು. ಕುಮಾರಸ್ವಾಮಿ ರಾಜೀನಾಮೆ ಕೊಟ್ಟಿದ್ದಾರಾ? ಬೇಲ್​ ಮೇಲೆ ಅವರು ಹೊರಗೆ ಇದ್ದಾರೆ. ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಪ್ರತಿಪಕ್ಷ ರಾಜೀನಾಮೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ರೆ ಮಾಡಲಿ, ಅವರಿಗೆ ಪ್ರತಿಭಟನೆ ಮಾಡೋ ಯಾವ ನೈತಿಕತೆಯೂ ಇಲ್ಲ. ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ ಮತ್ತು ಜೆಡಿಎಸ್​​​​​​​​​ ಇಬ್ಬರು ಸೇರಿಕೊಂಡು ಸಂಚು ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ನಾನು ಹಾಕಿದ್ದಂತಹ ರಿಟ್​​ ಪಿಟಿಷನ್​​ ಮೇಲೆ ಆದೇಶ ನೀಡಿದ್ದಾರೆ, 218 BNS ಮತ್ತು 19 PC ಮೇಲೆ ಅನುಮತಿ ಕೇಳಿದ್ದಾರೆ. 218 BNSS ಕಾಯ್ದೆ ಅಡಿಯಲ್ಲಿ ಪ್ರಾಸಿಕ್ಯೂಷನ್​ ಅನುಮತಿ ನೀಡಿಲ್ಲ, ಅದನ್ನ ಹೈಕೋರ್ಟ್​ ತಿರಸ್ಕಾರ ಮಾಡಿದೆ. 17A PC ಕಾಯ್ದೆ ಅನ್ವಯ ವಿಚಾರಣೆಗೆ ಹೈಕೋರ್ಟ್ ಅನುಮತಿ ನೀಡಿದೆ, ಇದರ ಬಗ್ಗೆ ಯಾವ ರೀತಿ ಹೋರಾಟ ಮಾಡ್ಬೇಕು ಮಾಡ್ತೀವಿ. ಕಾನೂನು ತಜ್ಞರ ಜೊತೆ ಇದರ ಬಗ್ಗೆ ಚರ್ಚಿಸಿ ನಿರ್ಧಾರ ಮಾಡ್ತೇವೆ ಎಂದಿದ್ದಾರೆ.

ಇದನ್ನೂ ಓದಿ : ಮುಡಾ ಮಹಾ ಸುಳಿಯಲ್ಲಿ ಸಿಎಂ ಸಿದ್ದು – ಹೈಕೋರ್ಟ್‌ ತೀರ್ಪಿನಲ್ಲಿ ಇರೋದೇನು ಗೊತ್ತಾ?

Leave a Comment

DG Ad

RELATED LATEST NEWS

Top Headlines

ಸಲ್ಮಾನ್ ಖಾನ್​ ರಕ್ಷಣೆಗೆ 70 ಜನರ ನೇಮಕ.. 4 ಲೇಯರ್​ ಭದ್ರತೆ, ಸರ್ಕಾರ ಖರ್ಚು ಮಾಡೋದೆಷ್ಟು ಗೊತ್ತಾ?

ಹೈದರಾಬಾದ್‌ : ಬಾಲಿವುಡ್ ಸೂಪರ್‌ಸ್ಟಾರ್, ಭಾಯಿಜಾನ್ ಸಲ್ಮಾನ್ ಖಾನ್ ಮುಂಬರುವ ಆಕ್ಷನ್ ಡ್ರಾಮಾ ಸಿನಿಮಾ ‘ಸಿಕಂದರ್‌’ನ ಸಿನಿಮಾದ ಚಿತ್ರೀಕರಣವನ್ನು ಹೆಚ್ಚಿನ ಭದ್ರತಾ ಕ್ರಮಗಳ ಮಧ್ಯೆ ಶುರು ಮಾಡಿಕೊಂಡಿದ್ದಾರೆ.

Live Cricket

Add Your Heading Text Here