Download Our App

Follow us

Home » ರಾಜಕೀಯ » ರಾಜೀನಾಮೆ ಕೊಡ್ತಾರಾ ಸಿಎಂ ಸಿದ್ದರಾಮಯ್ಯ? ಹೈ ತೀರ್ಪಿನ ಬೆನ್ನಲ್ಲೇ ಹೈಕಮಾಂಡ್ ಬುಲಾವ್​​..!

ರಾಜೀನಾಮೆ ಕೊಡ್ತಾರಾ ಸಿಎಂ ಸಿದ್ದರಾಮಯ್ಯ? ಹೈ ತೀರ್ಪಿನ ಬೆನ್ನಲ್ಲೇ ಹೈಕಮಾಂಡ್ ಬುಲಾವ್​​..!

ಬೆಂಗಳೂರು : ಸಿಎಂ ಸಿದ್ದರಾಮ್ಯಯಗೆ ಮುಡಾ ಸಂಕಷ್ಟ ಶುರುವಾಗಿದೆ. ಸಿದ್ದರಾಮಯ್ಯ ಪ್ರಾಸಿಕ್ಯೂಷನ್‌ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಲಾಗಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್‌ ಇಂದು ಮಹತ್ವದ ಆದೇಶ ನೀಡಿದೆ. ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ಆರಂಭವಾಗಲಿದ್ದು, ಈ ಹಿನ್ನೆಲೆ ನಾಳೆಯೇ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಎಂಬ ಪ್ರಶ್ನೆ ಮೂಡಿದೆ.

ಇತ್ತ ಕೋರ್ಟ್ ಸಿಎಂ ಸಿದ್ದರಾಮಯ್ಯ ಅರ್ಜಿ ವಜಾ ಆಗುತ್ತಿದ್ದಂತೆ ಹೈಕಮಾಂಡ್ ಭೇಟಿಯಾಗೋದಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಹೈಕೋರ್ಟ್‌ನಿಂದ ತಮ್ಮ ವಿರುದ್ದ ತೀರ್ಪು ಬಂದ ಹಿನ್ನೆಲೆ, ನಾಳೆ ಕೆ‌.ಸಿ.ವೇಣುಗೋಪಾಲ್ ಭೇಟಿಗೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ನಾಳೆ‌ ಕೇರಳ ಮಲಪ್ಪುರಂನಲ್ಲಿ ನಡೆಯಲಿರುವ ಆರ್ಯಾಧನ್ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭೇಟಿಯಾಗಲಿದ್ದಾರೆ.

ರಾಜೀನಾಮೆ ಕೊಡ್ತಾರಾ ಸಿಎಂ ಸಿದ್ದು? ನಾಳೆ ಮದ್ಯಾಹ್ನ 2.30ಕ್ಕೆ ಸಿಎಂ ಸಿದ್ದರಾಮಯ್ಯ ಕೇರಳಕ್ಕೆ ತೆರಳಲಿದ್ದಾರೆ. ಈ ವೇಳೆ ಕೆ.ಸಿ.ವೇಣುಗೋಪಾಲ ಜೊತೆ ಮಾತುಕತೆ ನಡೆಸಲಿದ್ದಾರೆ. ಸಿಎಂ ಆಗಿ ಮುಂದುವರೆದು ಕಾನೂನು ಹೋರಾಟ ಮಾಡಬೇಕಾ? ಇಲ್ಲವೇ ರಾಜೀನಾಮೆ ನೀಡಬೇಕಾ? ಮುಂದಿನ ನಡೆ, ತಮ್ಮ ನಿರ್ಧಾರ ಕುರಿತು ಸಿಎಂ ನಾಳೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಸಿಎಂ ನಿರ್ಧಾರವನ್ನ ರಾಹುಲ್ ಗಾಂಧಿಗೆ ಕೆಸಿ ವೇಣುಗೋಪಾಲ್‌ ತಲುಪಿಸಲಿದ್ದಾರೆ. ಒಂದು ವೇಳೆ ಹೈಕಮಾಂಡ್‌ ಯಾವುದಾದರೂ ನಿರ್ಧಾರವನ್ನು ತೆಗೆದುಕೊಂಡಿದ್ದರೆ ಅದನ್ನೂ ಸಿಎಂ ಸಿದ್ದರಾಮಯ್ಯಗೆ ಕೆಸಿವಿ ತಿಳಿಸಲಿದ್ದಾರೆ.

ಇದನ್ನೂ ಓದಿ : ಸಿಎಂ ಸಿದ್ದುಗೆ ಪ್ರಾಸಿಕ್ಯೂಷನ್​ ಪಂಜರ – ಗವರ್ನರ್ ಆದೇಶ ಎತ್ತಿಹಿಡಿದ ಹೈಕೋರ್ಟ್.. ಮುಂದೇನು?

Leave a Comment

DG Ad

RELATED LATEST NEWS

Top Headlines

ಶೃಂಗೇರಿ ಮಠದ ಜ್ಞಾನೋದಯ ಕಾಲೇಜು​ ಡೆಮಾಲಿಷನ್​​ಗೆ ತಡೆ – ಯಥಾಸ್ಥಿತಿಗೆ BBMP ಆದೇಶ..!

ಬೆಂಗಳೂರು : ರಾಜ್ಯ ಸರ್ಕಾರ ಶೃಂಗೇರಿಯ ಶಾರದ ಮಠದ ಅಧೀನದಲ್ಲಿ ನಡೆಯುತ್ತಿರೋ ಜ್ಞಾನೋದಯ ಕಾಲೇಜಿನ ಕಟ್ಟಡಕ್ಕೆ ಡೆಮಾಲಿಷನ್ ಆದೇಶ ನೀಡಿತ್ತು. ಈ ವಿಚಾರ ಹೊರ ಬರುತ್ತಿದ್ದಂತೆ ಸರ್ಕಾರದ

Live Cricket

Add Your Heading Text Here