ಇತ್ತೀಚಿನ ದಿನಗಳಲ್ಲಿ ಭಕ್ತಿ ಕೇಂದ್ರಗಳು, ಬಸ್, ರೈಲುಗಳು ಹೀಗೆ ಸಾರ್ವಜನಿಕ ಸ್ಥಳಗಳು ಎಂಬುದನ್ನು ಕೂಡ ಗಣನೆಗೆ ತೆಗೆದುಕೊಳ್ಳದೇ ರೀಲ್ಸ್ ಮಾಡಲು ಶುರು ಮಾಡಿಕೊಂಡಿದ್ದಾರೆ. ಅದರಲ್ಲೂ ಕೆಲವರು ಇನ್ಸ್ಟಾಗ್ರಾಮ್ಗಳಲ್ಲಿ ಲೈಕ್, ಕಾಮೆಂಟ್, ಫಾಲೋವರ್ಸ್ಗಳನ್ನು ಹೆಚ್ಚಿಸುವುದಕ್ಕಾಗಿ ಎಂತಹ ರಿಸ್ಕ್ ತೆಗೆದುಕೊಳ್ಳಲು ಕೂಡ ಸಿದ್ಧರಿರುತ್ತಾರೆ. ಅದೇ ರೀತಿ ಇಲ್ಲೊಬ್ಬಳು ಮಹಿಳೆ ಕೂಡಾ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದು, ತೆರೆದ ಬಾವಿಯ ಅಂಚಲ್ಲಿ ಮಗುವನ್ನು ಕೈಯಲ್ಲಿ ಹಿಡಿದು ಡೇಂಜರಸ್ ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೌದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ತೆರೆದ ಬಾವಿಯ ಅಂಚಲ್ಲಿ ಕುಳಿತ ಮಹಿಳೆಯೊಬ್ಬಳು ಪುಟಾಣಿ ಮಗುವನ್ನು ಬರೀ ಒಂದು ಕೈಯಲ್ಲಿ ಹಿಡಿದುಕೊಂಡು ಡೇಂಜರಸ್ ರೀಲ್ಸ್ ಮಾಡಿ ಹುಚ್ಚಾಟ ಮೆರೆಯುತ್ತಿದ್ದಾಳೆ.
ಇನ್ನು ವೈರಲ್ ಆಗುತ್ತಿರುವ ಈ ಪೋಸ್ಟ್ ಈಗಾಗಲೇ 71 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಲವಾರು ಕಾಮೆಂಟ್ಸ್ಗಳನ್ನು ಕೂಡ ಮಾಡಿದ್ದಾರೆ. ಒಬ್ಬ ಬಳಕೆದಾರರು ʼಆದಷ್ಟು ಬೇಗ ಈ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳಬೇಕುʼ ಎಂದು ಕಿಡಿ ಕಾರಿದರೇ, ಇನ್ನೊಬ್ಬ ʼಈಕೆಗೆ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಅಗತ್ಯವಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಮಗುವನ್ನು ಅಪಾಯಕ್ಕೆ ತಳ್ಳಿದ ಆ ಮಹಿಳೆಯ ಮೇಲೆ ಗರಂ ಆಗಿದ್ದಾರೆ.
ಇದನ್ನೂ ಓದಿ : ವಿಜಯನಗರದಲ್ಲಿ ಭೀಕರ ಸರಣಿ ಆ್ಯಕ್ಸಿಡೆಂಟ್ – ತಪ್ಪಿದ ಭಾರಿ ಅನಾಹುತ..!
Post Views: 145