ಬೆಂಗಳೂರು : ತಿರುಪತಿ ಲಡ್ಡು ಪ್ರಕರಣ ಇದೀಗ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ. ಇದೀಗ ತಿರುಪತಿ ಲಡ್ಡು ವಿವಾದ ಬೆನ್ನಲ್ಲೇ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಿದ್ದು, ಮತ್ತಷ್ಟು ನಂದಿನಿ ತುಪ್ಪ ಪೂರೈಸುವಂತೆ KMFಗೆ ಟಿಟಿಡಿ ಮನವಿ ಮಾಡಿದೆ.
ಬೇರೆ ಭಾಗದಿಂದ ಬರುವ ತುಪ್ಪವನ್ನು ಟಿಟಿಡಿ ಸ್ಟಾಪ್ ಮಾಡಿದೆ. ವಾರಕ್ಕೆ 3 ದಿನ ಮಾತ್ರ ನಂದಿನಿ ತುಪ್ಪ ತೆಗೆದುಕೊಳ್ಳುತ್ತಿದ್ದ ಟಿಟಿಡಿ, ಲಡ್ಡು ವಿವಾದದ ಬೆನ್ನಲ್ಲೇ ಪ್ರತಿನಿತ್ಯ ಒಂದೊಂದು ಟ್ಯಾಂಕರ್ ತುಪ್ಪ ಕಳಿಸುವಂತೆ ಬೇಡಿಕೆಯಿಟ್ಟಿದೆ.
ಬಿಟಿವಿಗೆ ಕೆಎಂಎಫ್ ಉನ್ನತ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಈ ಹಿಂದೆ 3 ತಿಂಗಳ ಅವಧಿಗೆ 350 ಟನ್ ತುಪ್ಪ ನೀಡುವಂತೆ ಒಪ್ಪಂದವಾಗಿತ್ತು. ಆದರೆ ಈ ಒಪ್ಪಂದ ಒಂದುವರೆ ತಿಂಗಳಿಗೆ ಮುಗಿಯಲಿದೆ. ನಂತರ 6 ತಿಂಗಳಿಗೆ ತುಪ್ಪ ಪೂರೈಕೆ ಮಾಡಿಕೊಳ್ಳುವ ಚಿಂತನೆ ನಡೆಯುತ್ತಿದೆ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ : ಆಂಟಿ ಜೊತೆ ಲವ್ವಿಡವ್ವಿ – ಯುವಕನ ಮರ್ಮಾಂಗವನ್ನೇ ಕತ್ತರಿಸಿದ ಮಹಿಳೆಯ ಕುಟುಂಬಸ್ಥರು..!