Download Our App

Follow us

Home » ಮೆಟ್ರೋ » ಬೆಂಗಳೂರು : ಪ್ರತಿಷ್ಠಿತ ಕಾಲೇಜಿನ ಲೇಡೀಸ್ ವಾಶ್ ರೂಂನಲ್ಲಿ ಕ್ಯಾಮರಾ ಅಳವಡಿಸಿದ್ದ ಪುಂಡ ವಿದ್ಯಾರ್ಥಿ ಅರೆಸ್ಟ್..!

ಬೆಂಗಳೂರು : ಪ್ರತಿಷ್ಠಿತ ಕಾಲೇಜಿನ ಲೇಡೀಸ್ ವಾಶ್ ರೂಂನಲ್ಲಿ ಕ್ಯಾಮರಾ ಅಳವಡಿಸಿದ್ದ ಪುಂಡ ವಿದ್ಯಾರ್ಥಿ ಅರೆಸ್ಟ್..!

ಬೆಂಗಳೂರು : ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಾಶ್​ರೂಂನಲ್ಲಿ ಕ್ಯಾಮರಾ ಅಳವಡಿಸಿದ್ದ ಪುಂಡ ವಿದ್ಯಾರ್ಥಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪೊರ್ಕಿಯೊಬ್ಬ ಸುಮಾರು 8 ಸಾವಿರ ವಿಡಿಯೋ ಮಾಡಿಕೊಂಡಿರುವ ಘಟನೆ ಕಗ್ಗಲಿಪುರದ ಬಳಿ ಇರುವ ಇಂಜಿನಿಯರಿಂಗ್​ ಕಾಲೇಜಿನಲ್ಲಿ ನಡೆದಿದೆ. ಪುಂಡ ವಿದ್ಯಾರ್ಥಿಯನ್ನು ವಿದ್ಯಾರ್ಥಿಗಳು ರೆಡ್​​ಹ್ಯಾಂಡ್ ಆಗಿ ಹಿಡಿದಿದ್ದಾರೆ.

ರೊಚ್ಚಿಗೆದ್ದ ವಿದ್ಯಾರ್ಥಿಗಳಿಂದ ಕಾಲೇಜಿನಲ್ಲಿ ಭಾರೀ ಪ್ರತಿಭಟನೆ ನಡೆದಿದ್ದು, ಗಲಾಟೆ ಹೆಚ್ಚಾಗುತ್ತಿದ್ದಂತೆ ಕಾಲೇಜಿಗೆ ಕುಂಬಳಗೋಡು ಪೊಲೀಸರು ದೌಡಾಯಿಸಿದ್ದಾರೆ. ಪೊಲೀಸರು ಪುಂಡ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿದ್ಯಾರ್ಥಿಯ ಮೊಬೈಲ್​ನಲ್ಲಿ ಸುಮಾರು 8 ಸಾವಿರ ಕ್ಲಿಪ್​ ಪತ್ತೆಯಾಗಿದೆ ಎನ್ನಲಾಗಿದೆ. ಈ ವಿಷಯ ತಿಳಿದು ನೂರಾರು ವಿದ್ಯಾರ್ಥಿನಿಯರು ಕಂಗಾಲಾಗಿದ್ದಾರೆ. ಘಟನೆ ನಡೆದಿರುವ ಪ್ರತಿಷ್ಠಿತ ಕಾಲೇಜಿಗೆ ರಾಮನಗರ ಎಸ್​ಪಿ ಕಾರ್ತಿಕ್ ರೆಡ್ಡಿ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ : ತಿರುಪತಿ ಲಡ್ಡುವಿನಲ್ಲಿ ಕೊಬ್ಬಿನಾಂಶ ಇದ್ದಿದ್ದು ನಿಜ – ತಪ್ಪೊಪ್ಪಿಕೊಂಡ ಟಿಟಿಡಿ..!

Leave a Comment

DG Ad

RELATED LATEST NEWS

Top Headlines

ಮಹಿಳೆಯ ಹೊಟ್ಟೆಯಲ್ಲಿ 18 ಮಕ್ಕಳು – ವಿಡಿಯೋ ನೋಡಿ ನೆಟ್ಟಿಗರು ಫುಲ್ ಶಾಕ್..!

ಮಹಿಳೆಯೊಬ್ಬರು ಏಕಕಾಲಕ್ಕೆ 18 ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯ ಹೊಟ್ಟೆ ಬಲೂನಿನಂತೆ ಊದಿಕೊಂಡಿರುವುದನ್ನು

Live Cricket

Add Your Heading Text Here