Download Our App

Follow us

Home » ಸಿನಿಮಾ » ‘ಜಾಂಟಿ ಸನ್ ಆಫ್ ಜಯರಾಜ್’ ಚಿತ್ರದ ಟೀಸರ್ ರಿಲೀಸ್​​..!

‘ಜಾಂಟಿ ಸನ್ ಆಫ್ ಜಯರಾಜ್’ ಚಿತ್ರದ ಟೀಸರ್ ರಿಲೀಸ್​​..!

‘ಜಾಂಟಿ ಸನ್ ಆಫ್ ಜಯರಾಜ್’ ಚಿತ್ರದ ಪಾತ್ರಗಳ ಪರಿಚಯದ ಟೀಸರ್ ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭವು ಇತ್ತೀಚೆಗೆ ನಡೆಯಿತು. ನಟಿ ವಿನೋಧ್ ಪ್ರಭಾಕರ್ ಮತ್ತು ಶ್ರೀನಗರ ಕಿಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಸುಗೂರುಕುಮಾರ್ ನಿರ್ಮಾಣದ ಚಿತ್ರಕ್ಕೆ ಆನಂದರಾಜ್ ಕತೆ ಬರೆದು ನಿರ್ದೇಶನ ಮಾಡಿದ್ದಾರೆ.

ಕತೆ ಬರೆದು ನಿರ್ದೇಶನ ಮಾಡಿರುವ ಆನಂದರಾಜ್ ಮಾತನಾಡಿ, ಜಯರಾಜ್ ನಂತರದ ದಿನಗಳ ಸಂದರ್ಭದಲ್ಲಿ ಹಣಕಾಸು ವ್ಯವಹಾರ, ಮಾರ್ಕೆಟ್ ದಂಧೆ ಎಲ್ಲವು ರಾರಾಜಿಸುತ್ತಿತ್ತು. ಇಂತಹ ವಿಷಯಗಳನ್ನು ಕೇಳಿದ್ದು, ನೋಡಿದ್ದು, ಓದಿದ್ದು ಎಲ್ಲವನ್ನು ಬಳಸಿಕೊಂಡು ಚಿತ್ರಕಥೆ ಬರೆಯಲಾಗಿದೆ. ಜಯರಾಜ್ ಮಗನೇ ಪಾತ್ರವಾಗಿ ಬರುತ್ತಾರೆ. ಆತನ ಸಾವಿಗೆ ಕಾರಣರಾದಂತ ಪಾತ್ರಗಳು ಬಂದು ಹೋಗುತ್ತವೆ. ಆಗಿನ ಕಾಲಘಟ್ಟದಲ್ಲಿ ಇದ್ದಂತ ರೋಲ್‌ಗಳನ್ನು ಕಾಲ್ಪನಿಕವಾಗಿ ತೋರಿಸಲಾಗಿದೆ. ಜತೆಗೆ ತಾಯಿ ಸೆಂಟಿಮೆಂಟ್, ನವಿರಾದ ಪ್ರೀತಿ ಸನ್ನಿವೇಶಗಳು ಅಲ್ಲದೆ ಗೆಳತನದ ಸಾರವನ್ನು ಹೇಳಲಾಗಿದೆ. ಹಳೇ ಬೆಂಗಳೂರು ಹೇಗಿತ್ತು ಅಂತ ನೋಡಬೇಕಾದರೆ, ನಮ್ಮ ಸಿನಿಮಾ ನೋಡಿ. 1989 ಅವಧಿ ಕಟ್ ಮಾಡಿದರೆ ಈಗಿನ ಜಮಾನದಲ್ಲಿ ಏನೇನು ನಡೆಯುತ್ತಿದೆ ಎಂಬುದು ತೋರಿಸಲಾಗಿದೆ ಎಂದರು.

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಾಯಕ ಅಜಿತ್‌ಜಯರಾಜ್ ಅವರು,  ಅಪ್ಪನ ಪಾತ್ರ ಮಾಡುವಾಗ ನರ್ವಸ್ ಆಗಿದ್ದೆ. ನಿರ್ದೇಶಕರು ಹೇಳಿದಾಗ ಓಕೆ ಅಂತ ಹೇಳಿದ್ದೆ. ಕ್ಯಾಮಾರ ಮುಂದೆ ನಿಂತಾಗ ನಡುಕ ಬಂತು. ಅಂತ ಪವರ್‌ಫುಲ್ ರೋಲ್‌ನ್ನು ಹೇಗೆ ಮಾಡುವುದು. ಕೊನೆ ಒಂದು ದೃಶ್ಯದಲ್ಲಿ ನಟಿಸಿದಾಗ ಧೈರ್ಯ ಬಂತು. ಅಪ್ಪನ ಕಾಲ, ಮಗನಾಗಿ ಹೀಗೆ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆಂದು ಎಂದು ತಿಳಿಸಿದರು.

ಇನ್ನು ನಾಯಕಿ ನಿವಿಷ್ಕ ಪಾಟೀಲ್ ಚಿತ್ರೀಕರಣ ಅನುಭವಗಳನ್ನು ಮೆಲುಕು ಹಾಕಿದರು. ಛಾಯಾಗ್ರಹಣ ಅರ್ಜುನ್ ಆಕೋಟ್, ಸಂಗೀತ ವಿಜೇತಮಂಜೇಹ, ಹಿನ್ನಲೆ ಶಬ್ದ ಅಲೆಕ್ಸ್ ಅವರದ್ದಾಗಿದೆ. ಚಿತ್ರದ ತಾರಾಬಳಗದಲ್ಲಿ ಕಲಾವಿದರುಗಳಾದ ರಾಜವರ್ಧನ್, ಶರತ್‌ಲೋಹಿತಾಶ್ವ, ಪಟ್ರೋಲ್‌ಪ್ರಸನ್ನ, ಕಿಶನ್, ಸೋನುಪಾಟೀಲ್, ಸಚ್ಚಿನ್‌ಪುರೋಹಿತ್, ಮೈಕೋ ನಾಗರಾಜ್ ಇವರೆಲ್ಲರೂ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದರು.

ಇದನ್ನೂ ಓದಿ : ಅಪ್ಪು, ಕಿಚ್ಚನಿಗೆ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದ ​​​ಜಾನಿ ಮಾಸ್ಟರ್ ಗೋವಾದಲ್ಲಿ ಅರೆಸ್ಟ್​​..!

Leave a Comment

DG Ad

RELATED LATEST NEWS

Top Headlines

ಮೋಷನ್ ಪೋಸ್ಟರ್​​ನಲ್ಲೇ ಮೋಡಿ ಮಾಡಿದ “ರಾಜು ಜೇಮ್ಸ್ ಬಾಂಡ್” – ಡಿ.27ಕ್ಕೆ ಸಿನಿಮಾ ತೆರೆಗೆ..!

ದೀಪಕ್ ಮಧುವನಹಳ್ಳಿ ನಿರ್ದೇಶನದ “ರಾಜು ಜೇಮ್ಸ್ ಬಾಂಡ್” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಕರ್ಮ ಬ್ರೋಸ್ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ “ಫಸ್ಟ್ ರ‍್ಯಾಂಕ್

Live Cricket

Add Your Heading Text Here