ಬೆಂಗಳೂರು : ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು, ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಪ್ರಜ್ವಲ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿ, ಘಟನೆ ನಡೆದಿದ್ದರೂ ಅದು ಒಪ್ಪಿಗೆಯಿಂದ ಆಗಿರುವ ಘಟನೆಯಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಅದನ್ನೇ ಹೇಳಿದೆ. ಪ್ರಜ್ವಲ್ ಫೋನ್‌ನಲ್ಲಿ ಯಾವುದೇ ವಿಡಿಯೊ ದೊರೆತಿಲ್ಲ. ಮಾಜಿ ಡ್ರೈವರ್ ಕಾರ್ತಿಕ್ ಮೊಬೈಲ್ನಲ್ಲಿ ವಿಡಿಯೋ ಇತ್ತು. ಅದು ನನ್ನ ಮೊಬೈಲ್ ಎಂದು ಕಾರ್ತಿಕ್ ಹೇಳಿದ್ದಾನೆ. ಕೋರ್ಟ್ ವಿಧಿಸುವ ಯಾವುದೇ ಷರತ್ತಿಗೆ ತಲೆಬಾಗುತ್ತೇನೆ ಎಂದು ವಾದ ಮಂಡಿಸಿದ್ದಾರೆ.
ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಸರಕಾರಿ ವಕೀಲರಾದ ಪ್ರೊ.ರವಿವರ್ಮ ಕುಮಾರ್, ಪ್ರಜ್ವಲ್ ರೇವಣ್ಣ ಈವರೆಗೂ ತಮ್ಮ ಫೋನ್ ಪೊಲೀಸರ ವಶಕ್ಕೆ ನೀಡಿಲ್ಲ. ಫೋಟೋ, ವಿಡಿಯೋ ಸಂಬಂಧ FSL ವರದಿ ಬಂದಿದೆ. ಆರೋಪಿ ಪ್ರಭಾವಿಯಾಗಿರೋದ್ರಿಂದ ಸಾಕ್ಷಿ ನಾಶ ಮಾಡ್ತಾರೆ. ಹೀಗಾಗಿ ಬೇಲ್ ನೀಡಬೇಡಿ ಎಂದು ಹೈಕೋರ್ಟ್ ಪೀಠದ ಮುಂದೆ ಪ್ರತಿವಾದ ಮಂಡಿಸಿದರು. ಇದೀಗ ಎರಡು ಕಡೆಯ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಪ್ರಜ್ವಲ್ ಬೇಲ್ ಅರ್ಜಿ ಆದೇಶ ಕಾಯ್ದಿರಿಸಿ ವಿಚಾರಣೆ ಮುಂದೂಡಿದೆ.
ಇದನ್ನೂ ಓದಿ : ದೇವನಹಳ್ಳಿಯಲ್ಲಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕ್ಯಾಂಟರ್ – ಕೋಟ್ಯಂತರ ಮೌಲ್ಯದ ವಾಣಿಜ್ಯ ವಸ್ತುಗಳು ಭಸ್ಮ..!