ಯಾದಗಿರಿ : ರಾಮ ಮಂದಿರದಿಂದ ಬಡವರಿಗೆ, ನಮಗ್ಯಾರಿಗೂ ಹೊಟ್ಟೆ ತುಂಬಲ್ಲ, ರಾಮ ಮಂದಿರದಿಂದ ಯಾರಿಗೂ ಏನೂ ಆಗಲ್ಲ ಎಂದು ಸಚಿವ ಶರಣಬಸಪ್ಪ ದರ್ಶನನಾಪುರ ಯಾದಗಿರಿಯಲ್ಲಿ ವಿವಾದಿತ ಹೇಳಿಕೆ ನೀಡಿದ್ದಾರೆ.
ಹಲವರು ಸುದೀರ್ಘ ಆಡಳಿತ ಮಾಡಿದ ಕಾಂಗ್ರೆಸ್ ಎನು ಮಾಡಿದೆ ಎಂದು ಕೇಳುತ್ತಾರೆ. ಕಾಂಗ್ರೆಸ್ ಬಡವರಿಗೆ ಬೇಕಾದ ಸೌಲಭ್ಯ ಕಲ್ಪಿಸಿದೆ. ಆಸ್ಪತ್ರೆ, ಶಾಲೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಿದೆ ಎಂದು ದರ್ಶನಾಪುರ್ ಹೇಳಿದ್ದಾರೆ. ಆದ್ರೆ ನಾವು ರಾಮ ಮಂದಿರವನ್ನು ವಿರೋಧ ಮಾಡಲ್ಲ ಎಂದೂ ಹೇಳಿಕೆ ನೀಡಿದ್ದಾರೆ.
ಆದರೆ ದರ್ಶನಾಪುರ ಅವರು ನೀಡಿರುವ ಹೇಳಿಕೆಗೆ ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ರಾಮ ಮಂದಿರ ನಿರ್ಮಾಣವಾಗಿರುವುದು ಭಕ್ತರ ದೇಣಿಗೆಯಲ್ಲಿ, ಸರ್ಕಾರದ ಹಣದಲಲ್ಲಿ ಅಲ್ಲ ಎಂದು ಕೆಲವರು ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ಹೋಟೆಲ್ವೊಂದರಲ್ಲಿ ಯುವತಿಯನ್ನು ಟಚ್ ಮಾಡಿ ಕಾಮುಕರ ವಿಕೃತಿ..!
Post Views: 292