ಸ್ಯಾಂಡಲ್ವುಡ್ ನಟಿ ಚೈತ್ರಾ ಜೆ. ಆಚಾರ್ ಅವರು ಒಂದಲ್ಲಾ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಬೋಲ್ಡ್ ಆ್ಯಾಂಡ್ ಗ್ಲಾಮರಸ್ ಲುಕ್ನಲ್ಲೇ ಕಾಣಿಸೋ ಮೂಲಕ ಹಾಟ್ ಟಾಪಿಕ್ನಲ್ಲಿ ಇರುತ್ತಾರೆ. ಈ ಮೊದಲು ಚೈತ್ರಾ ಆಚಾರ್ ಬ್ಯಾಕ್ ಲೆಸ್ ಫೋಟೊ , ಸ್ವಿಮ್ಮಿಂಗ್ ಸೂಟ್, ಟ್ರಾನ್ಸ್ಪ್ರೆಂಟ್ ಡ್ರೆಸಲ್ಲೂ ಫೋಟೊ ಶೂಟ್ ಮಾಡಿಸಿ, ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದರು.
ಇದೀಗ ಮತ್ತೊಮ್ಮೆ ತಮ್ಮ ಬೋಲ್ಡ್ ಫೋಟೊ ಶೂಟ್ ಮೂಲಕ ಚೈತ್ರಾ ಸದ್ದು ಮಾಡ್ತಿದ್ದಾರೆ. ಈ ಬಾರಿ ಬ್ಲೌಸ್ ಧರಿಸದೇ ಸೀರೆಯುಟ್ಟು, ಬ್ಯಾಕ್ ಸೈಡ್ನಿಂದ ಫೋಟೊ ಶೂಟ್ ಮಾಡಿಸಿದ್ದು, ತಿಯೊಂದು ಫೋಟೊಗಳು ನೆಟ್ಟಿಗರ ಹುಬ್ಬೇರಿಸುವಂತಿದೆ.
ಇದೇ ಸೆಪ್ಟೆಂಬರ್ 15 ರಂದು ಕೇರಳದಲ್ಲಿ ಓಣಂ ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ಕೇರಳದವರು ಸಾಂಪ್ರದಾಯಿಕ ವಸ್ತ್ರ ತೊಟ್ಟು ಹಬ್ಬ ಆಚರಿಸುತ್ತಾರೆ. ಮಹಿಳೆಯರು ಕೇರಳದ ಸಾಂಪ್ರದಾಯಿಕ ಸೀರೆ ಉಡುತ್ತಾರೆ. ಅದೇ ರೀತಿ ನಟಿ ಚೈತ್ರ ಜೆ ಆಚಾರ್ ಕೂಡ ಕೇರಳ ಸೀರೆ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಆದರೆ ಬ್ಲೌಸ್ ಧರಿಸಿಲ್ಲ. ಬ್ಲೌಸ್ ತೊಡದೆ ಬೆನ್ನು ತೋರಿಸಿ ವಿಭಿನ್ನ ಶೈಲಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಚೈತ್ರಾ ಫೋಟೋಗೆ ಹಲವರು ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇವೆಲ್ಲಾ ಬೇಕಾ ಎಂದು ಕೆಟ್ಟದಾಗಿ ಪ್ರಶ್ನಿಸಿದ್ದಾರೆ. ಆದರೆ ನಟಿ ಚೈತ್ರಾ ಜೆ. ಆಚಾರ್ ಇಂಥಾ ನೆಗೆಟಿವ್ ಕಾಮೆಂಟ್ಗಳ ಕಡೆ ಗಮನ ನೀಡುವುದಿಲ್ಲ. ಇತ್ತೀಚೆಗೆ ತಮ್ಮ ಫೋಟೋ ನೋಡಿ ನೆಗೆಟಿವ್ ಕಾಮೆಂಟ್ ಮಾಡಿದವರಿಗೆ ಚೈತ್ರಾ ಪ್ರತಿಕ್ರಿಯಿಸಿ ಬಾಯಿ ಮುಚ್ಚಿಸಿದ್ದರು.
‘
ಚೈತ್ರಾ ಆಚಾರ್ ನಟಿಯಾಗಿ ಮಾತ್ರವಲ್ಲದೆ ಗಾಯಕಿಯಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ವೆಬ್ ಸೀರೀಸ್ವೊಂದರ ಮೂಲಕ ಆಕ್ಟಿಂಗ್ ಕರಿಯರ್ ಆರಂಭಿಸಿದ ಚೈತ್ರಾ, ಮಹಿರಾ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದರು. ಈ ಸಿನಿಮಾ ನಂತರ ಆ ದೃಶ್ಯ, ಗಿಲ್ಕಿ, ತಲೆದಂಡ, ಟೋಬಿ, ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ, ಬ್ಲಿಂಕ್, ಹ್ಯಾಪಿ ಬರ್ತ್ಡೇ ಟೂ ಮಿ ಸಿನಿಮಾಗಳಲ್ಲಿ ಚೈತ್ರಾ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಸ್ಟ್ರಾಬೆರಿ, ಉತ್ತರಾಕಾಂಡ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಸಿದ್ದಾರ್ಥ್ ಅಭಿನಯದ ತಮಿಳು ಸಿನಿಮಾದಲ್ಲಿ ಕೂಡಾ ಚೈತ್ರಾ ನಟಿಸುತ್ತಿದ್ದಾರೆ.
ಇದನ್ನೂ ಓದಿ : ಬ್ಯಾಡ್ ಕಾಮೆಂಟ್ ಮಾಡೋರ ‘ಅಸಲಿ ಬಣ್ಣ’ ಕಳಚಿದ ಬಿಗ್ ಬಾಸ್ ಖ್ಯಾತಿಯ ಇಶಾನಿ..