Download Our App

Follow us

Home » ರಾಷ್ಟ್ರೀಯ » ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಬಿಗ್​ ರಿಲೀಫ್ ​​​- ಸುಪ್ರೀಂ ಕೋರ್ಟ್​ನಿಂದ ಬೇಲ್​ ಮಂಜೂರು..!

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಬಿಗ್​ ರಿಲೀಫ್ ​​​- ಸುಪ್ರೀಂ ಕೋರ್ಟ್​ನಿಂದ ಬೇಲ್​ ಮಂಜೂರು..!

ನವದೆಹಲಿ : ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಕೊನೆಗೂ ಜಾಮೀನು ಸಿಕ್ಕಿದೆ. ಅಬಕಾರಿ ನೀತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಶುಕ್ರವಾರ ಅವರಿಗೆ ಬೇಲ್‌ ಮಂಜೂರು ಮಾಡಿದೆ. ಇದರಿಂದ ಅವರು ಸುಮಾರು 5 ತಿಂಗಳ ನಂತರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

10 ಲಕ್ಷ ರೂಪಾಯಿ ಮೊತ್ತದ ಬಾಂಡ್‌ ನೀಡಿ ಜಾಮೀನಿನ ಮೇಲೆ ಬಿಡುಗಡೆಯಾಗುವಂತೆ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಹಾಗೆಯೇ ಈ ಪ್ರಕರಣದ ಬಗ್ಗೆ ಯಾವುದೇ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಬಾರದು, ಯಾವುದೇ ಕಾರಣಕ್ಕೂ ಸಿಎಂ ಕರ್ತವ್ಯ ನಿರ್ವಹಿಸಬಾರದು, ಯಾವುದೇ ಸರ್ಕಾರಿ ಫೈಲ್​ಗಳಿಗೆ ಸಹಿ ಮಾಡುವಂತಿಲ್ಲ ಮತ್ತು ವಿಚಾರಣಾ ನ್ಯಾಯಾಲಯದ ಮುಂದೆ ಎಲ್ಲಾ ವಿಚಾರಣೆಗಳಿಗೆ ಹಾಜರಾಗಬೇಕು, ವಿದೇಶ ಪ್ರವಾಸ ಮಾಡದಂತೆ ಷರತ್ತಿನಲ್ಲಿ ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ.
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೂನ್‌ನಲ್ಲಿ ಸಿಬಿಐ ಅವರನ್ನು ಬಂಧಿಸಿತ್ತು. ಈಗಾಗಲೇ ಜಾರಿ ನಿರ್ದೇಶನಾಲಯವು ಸಲ್ಲಿಸಿದ ಪ್ರಕರಣದಲ್ಲಿ ಜಾಮೀನು ಪಡೆದಿರುವ ಅರವಿಂದ್ ಕೇಜ್ರಿವಾಲ್ ಅವರು ಈಗ ಜೈಲಿನಿಂದ ಹೊರಬರಲಿದ್ದಾರೆ. ಆಮ್ ಆದ್ಮಿ ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಸಂಬ್ರಮ ಮನೆ ಮಾಡಿದೆ.

Leave a Comment

DG Ad

RELATED LATEST NEWS

Top Headlines

ಸೆಟ್ಟೇರಿದ ಮಹೇಶ್ ಚಿನ್ಮಯಿ ನಿರ್ದೇಶನದ ‘ಗೌರಿಶಂಕರ’ ಸಿನಿಮಾ..!

ಮಹೇಶ್ ಚಿನ್ಮಯಿ ನಿರ್ದೇಶನದ ’ಗೌರಿಶಂಕರ’ ಚಿತ್ರದ ಮುಹೂರ್ತ ಸಮಾರಂಭವು ಶ್ರೀ ವಿನಾಯಕ ವೆಂಕಟೇಶ್ವರ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಹಿರಿಯ ನಿರ್ಮಾಪಕ ರಾಜಣ್ಣ ಕ್ಯಾಮಾರ ಆನ್ ಮಾಡಿದರೆ, ಶಿವಲಿಂಗ

Live Cricket

Add Your Heading Text Here