ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಯಶ್ ನಟನೆಯ ‘ಟಾಕ್ಸಿಕ್’ No.01

ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿರುವ ನಟ ಎಂದರೆ ರಾಕಿಂಗ್ ಸ್ಟಾರ್ ಯಶ್. ಕೆಜಿಎಫ್ ಎನ್ನುವ ಪ್ಯಾನ್ ಇಂಡಿಯಾ ಸಿನಿಮಾ ನೀಡಿದ್ದ ಯಶ್ ಇಡೀ ವಿಶ್ವವೇ ಕನ್ನಡ ಸಿನಿಮಾ ರಂಗವನ್ನು ತಿರುಗಿ ನೋಡುವಂತೆ ಮಾಡಿದ ವ್ಯಕ್ತಿ. ಕೆಜಿಎಫ್ ಚಾಪ್ಟರ್ 2 ಆದ ಬಳಿಕ ಯಾವ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಕುತೂಹಲ ಜನರಿಗಿತ್ತು. ಅದಕ್ಕೆ ಟಾಕ್ಸಿಕ್ ಎನ್ನುವ ಚಿತ್ರದ ಮೂಲಕ ಉತ್ತವನ್ನ ಕೊಟ್ಟಿದ್ರು.

ಇಡೀ ಭಾರತವೇ ಈ ಚಿತ್ರ ಬಿಡುಗಡೆಗೆ ಕಾಯುತ್ತಿದೆ. ಮಾರ್ಚ್ 19 ರಂದು ತೆರೆಯ ಮೇಲೆ ಅಪ್ಪಳಿಸಲು ಸಜ್ಜಾಗಿರುವ ಈ ಚಿತ್ರವನ್ನು ಗೀತು ಮೋಹನ್ ದಾಸ್ ಅವರು ನಿರ್ದೇಶಿಸುತ್ತಿದ್ದಾರೆ. ಇದೀಗ ಸಿನಿಮಾವು ಐಎಂಡಿಬಿ ಯಲ್ಲಿ ತೆರೆ ಕಾಣಲಿರುವ ಬಹುನಿರೀಕ್ಷಿತ ಸಿನಿಮಾ ಮತ್ತು ಶೋ ಪಟ್ಟಿಯಲ್ಲಿ ಬರೋಬ್ಬರಿ 28.6% ಇಂದ ಮೊದಲನೇ ಸ್ಥಾನದಲ್ಲಿದೆ.

ಈಗಾಗಲೇ ಚಿತ್ರತಂಡದಿಂದ ಸಿನಿಮಾದಲ್ಲಿರುವ ಮಹಿಳಾ ನಟಿಮಣಿಗಳ ಪಾತ್ರದ ಹೆಸರು ಹಾಗೂ ಲುಕ್ ಬಿಡುಗಡೆ ಹೊಂದಿದೆ. ಜೊತೆಗೆ ಯಶ್ ಅವರ ಪಾತ್ರದ ಪರಿಚಯವು ಆಗಿದೆ. ಇವಿಷ್ಟು ಅಪ್ಡೇಟ್ ಗಳು ಜನರಲ್ಲಿ ಇನ್ನಷ್ಟು ಕುತೂಹಲವನ್ನು ಹೆಚ್ಚಿಸಿದೆ.

Btv Kannada
Author: Btv Kannada