Download Our App

Follow us

Home » ಸಿನಿಮಾ » ರೀಲ್ಸ್ ಮಾಡೋಕೆ ವಿಚ್ಚೇದನ ಪಡೆದ್ರಾ ನಿವೇದಿತಾ ಗೌಡ – ನಟಿಯ ಬೋಲ್ಡ್​​ ಅವತಾರ ನೋಡಿ ನೆಟ್ಟಿಗರು ಏನಂದ್ರು ಗೊತ್ತಾ?

ರೀಲ್ಸ್ ಮಾಡೋಕೆ ವಿಚ್ಚೇದನ ಪಡೆದ್ರಾ ನಿವೇದಿತಾ ಗೌಡ – ನಟಿಯ ಬೋಲ್ಡ್​​ ಅವತಾರ ನೋಡಿ ನೆಟ್ಟಿಗರು ಏನಂದ್ರು ಗೊತ್ತಾ?

ರ‍್ಯಾಪರ್ ಚಂದನ್​ ಶೆಟ್ಟಿಗೆ ಡಿವೋರ್ಸ್ ನೀಡಿದ ಬಳಿಕ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಅದರಲ್ಲೂ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಹೊಸ ಫೋಟೋಸ್​ ಹಾಗೂ ರೀಲ್ಸ್‌ ಮಾಡುವ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಶೇರ್ ಮಾಡಿರುವ ರೀಲ್ಸ್‌ನಲ್ಲಿ ನಟಿಯ ಅವತಾರ ನೋಡಿ ನೆಟ್ಟಿಗರು ಕಾಲೆಳೆದಿದ್ದಾರೆ.

ಹೌದು, ದೇಶದಲ್ಲಿ ಟಿಕ್ ಟಾಕ್ ಇದ್ದ ಕಾಲದಲ್ಲಿ ರೀಲ್ಸ್ ಮಾಡುತ್ತಲೇ ಮುನ್ನೆಲೆಗೆ ಬಂದ ಹಲವು ಸೋಶಿಯಲ್ ಮೀಡಿಯಾ ರೀಲ್ಸ್ ಸ್ಟಾರ್‌ಗಳ ಪೈಕಿ ನಟಿ ನಿವೇದಿತಾ ಗೌಡ ಕೂಡ ಒಬ್ಬರು. ಕರ್ನಾಟಕದ ಬಾರ್ಬಿಡಾಲ್ ಖ್ಯಾತಿಯ ನಿವೇದಿತಾ ಗೌಡ ಕೂಡ ಟಿಕ್‌ಟಾಕ್ ಬ್ಯಾನ್ ಆದ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಬಂದು ತಮ್ಮ ರೀಲ್ಸ್ ಪೋಸ್ಟ್ ಮಾಡುತ್ತಾ ಲಕ್ಷಾಂತರ ಫಾಲೋವರ್ಸ್‌ಗಳನ್ನು ಗಳಿಸಿದರು.

ಅದರಲ್ಲೂ ಗಾಯಕ ಚಂದನ್ ಶೆಟ್ಟಿಗೆ ಡಿವೋರ್ಸ್‌ ಕೊಟ್ಟ ಬಳಿಕವಂತೂ ನಿವೇದಿತಾ ಗೌಡ ಅತಿಹೆಚ್ಚು ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಕೆಲವೊಂದು, ರೀಲ್ಸ್‌ಗಳಲ್ಲಿ ತುಂಡು ಬಟ್ಟೆಗಳನ್ನು ತೊಟ್ಟು ಪೋಸ್ಟ್ ಮಾಡಿಕೊಂಡು ಅಭಿಮಾನಿಗಳಿಗೆ ಮಾದಕತೆಯ ರಸದೌತಣವನ್ನೇ ನೀಡುತ್ತಿದ್ದಾರೆ. ಇದನ್ನು ನೋಡಿದ ಕೆಲ ನೆಟ್ಟಿಗರು ಲೈಕ್ ಮಾಡಿ ಸುಮ್ಮನಾದರೇ, ಬಹುತೇಕರು ರೀಲ್ಸ್‌ನಲ್ಲಿ ನಟಿಯ ಅವತಾರ ನೋಡಿ ಕಾಲೆಳೆದಿದ್ದಾರೆ.

ಅದರಲ್ಲೊಬ್ಬ, ನಿವೇದಿತಾ ಗೌಡ ಅವರು ಇತ್ತೀಚಿಗಷ್ಟೇ ಫೋಸ್ಟ್​​​ ಮಾಡಿದ ರೀಲ್ಸ್​​​ಗೆ  ಇಲ್ಲಿ ಸ್ಪಷ್ಟ ಏನು ಅನಿಸುತ್ತೆ ಅಂದ್ರೆ ಇವರು ರೀಲ್ಸ್ ಮಾಡೋಕೆ ವಿಚ್ಚೇದನ ಪಡೆದ ಮೊದಲ ನಟಿ ಎಂಬ ಪಾತ್ರಕ್ಕೆ ಹೆಗ್ಗಳಿಕೆ ಪಡೆಯುತ್ತಾರೆ’ ಎಂದು ಕಾಮೆಂಟ್ ಮಾಡಿದ್ದಾನೆ. ಇನ್ನು ಕೆಲವರು ಆ ರೂಮು… ಆ ಬಾಗಿಲು ಬಿಟ್ಟು ಆಚೆ ಬರಬೇಡ. ಅಲ್ಲೇ ಇರು ರೀಲ್ಸ್ ಮಾಡ್ಕೊಂಡು. ಅದ್ಯಾಕೆ ಇತ್ತೀಚೆಗೆ ಡಿವರ್ಸ್ ಆದಂತ ಕೆಲವು ಟಿವಿ ಸಿನಿಮಾದವರು ಗಂಡನ ಬಿಟ್ಟಮೇಲೆ ಈ ರೀತಿ ಆಡ್ತಾ ಇದ್ದಾರೆ. ಹಣೆಬೊಟ್ಟು ಇಟ್ಟಿರೋದನ್ನು ಎಷ್ಟು ಜನ ನೋಡಿದೀರಿ?’ಆಡೋ ಮಕ್ಕಳಿಗೆ ಮದುವೆ ಮಾಡಿದರೆ ಮಾಡೋ ಜಾಗದಲ್ಲಿ ಮಣ್ಣು ಹಾಕಿದರಂತೆ.. ಹಂಗಾಯ್ತು ಇವಳುದು.. ಎಂದು ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಇದನ್ನೂ ಓದಿ : ‘ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾದ ಟೀಸರ್ ರಿಲೀಸ್​​..!

Leave a Comment

DG Ad

RELATED LATEST NEWS

Top Headlines

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ – ದೇವರ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ..!

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಿತ್ತು. ಇದೀಗ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊರನಾಡು ಶ್ರೀ

Live Cricket

Add Your Heading Text Here