Download Our App

Follow us

Home » ಸಿನಿಮಾ » 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ನಟ ಜಯಂ ರವಿ – ಕೊನೆಗೂ ನಿಜವಾಯ್ತು ವದಂತಿ..!

15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ನಟ ಜಯಂ ರವಿ – ಕೊನೆಗೂ ನಿಜವಾಯ್ತು ವದಂತಿ..!

ಕಾಲಿವುಡ್ ನಟ ಜಯಂ ರವಿ ಅವರ ವೈವಾಹಿಕ ಬದುಕಿನಲ್ಲಿ ಬಿರುಕಾಗಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಚರ್ಚೆ ಗ್ರಾಸವಾಗಿತ್ತು. ಇದೀಗ 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿರೋದಾಗಿ ಸ್ವತಃ ನಟ ಜಯಂ ರವಿ ಸೋಶಿಯಲ್‌ ಮೀಡಿಯಾದಲ್ಲಿ ಮೂಲಕ ತಿಳಿಸಿದ್ದಾರೆ.

ಬಹಳ ಯೋಚನೆ ಮತ್ತು ಚರ್ಚೆಗಳ ನಂತರ ಆರತಿ ಜೊತೆಗಿನ ನನ್ನ ವಿವಾಹ ಸಂಬಂಧಕ್ಕೆ ಡಿವೋರ್ಸ್ ನೀಡುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ನಿರ್ಧಾರವನ್ನು ತರಾತುರಿಯಿಂದ ಮಾಡಿಲ್ಲ ಎಂದು ನಟ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಸಮಯದಲ್ಲಿ ನಮ್ಮ ಮತ್ತು ಕುಟುಂಬದ ಗೌಪ್ಯತೆಯನ್ನು ಗೌರವಿಸಲು ನಾನು ನಿಮ್ಮೆಲ್ಲರನ್ನು ಕೇಳಿಕೊಳ್ಳುತ್ತೇನೆ. ಈ ನಿಟ್ಟಿನಲ್ಲಿ ಯಾವುದೇ ಊಹೆಗಳು, ವದಂತಿಗಳು, ಅಥವಾ ಆರೋಪಗಳನ್ನು ಮಾಡದಂತೆ ನಿಮ್ಮೆಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಜೊತೆಗೆ ಈ ವಿಷಯವು ಖಾಸಗಿಯಾಗಿ ಉಳಿಯಲಿ ಎಂದು ನಟ ತಿಳಿಸಿದ್ದಾರೆ.

ಇನ್ನು ಕೆಲ ತಿಂಗಳ ಹಿಂದಷ್ಟೇ ಆರತಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘ಜಯಂ’ ರವಿ ಜೊತೆಗಿದ್ದ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಆಗಲೇ ಇವರಿಬ್ಬರು ದೂರುವಾಗುತ್ತಾರಾ ಎಂಬ ಮಾತುಗಳು ಚರ್ಚೆಗಳು ನಡೆದಿದ್ದವು. ಅದೀಗ ನಿಜವಾಗಿದೆ.

ರವಿ ಮತ್ತು ಆರತಿ ದಾಂಪತ್ಯ ಮುರಿದುಬೀಳುತ್ತಿದ್ದಂತೆಯೇ, ದಾಂಪತ್ಯದ ಬಗ್ಗೆ ಅವರಿಬ್ಬರು ಮಾತನಾಡಿದ್ದ ಹಳೆಯ ವಿಡಿಯೋ ವೈರಲ್ ಆಗಿದೆ. ಅದನ್ನು ನೋಡಿದವರು, ‘ಇಷ್ಟೊಂದು ಚೆನ್ನಾಗಿದ್ದ ದಾಂಪತ್ಯಕ್ಕೆ ಏನಾಯಿತು’ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ‘ಇಷ್ಟೊಂದು ಅನ್ನೋನ್ಯತೆಯಿಂದ ಇದ ಜೋಡಿ ಇದೇಕೆ ದೂರವಾಯ್ತು’ ಎಂದು ಹಲವರು ಸಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ವೈರಲ್​ ಆದ ವಿಡಿಯೋದಲ್ಲಿ ಆರತಿ ಅವರು ಮಾತನಾಡುತ್ತಾ ‘ಒಬ್ಬ ಪತಿಯಾಗಿ ರವಿಗೆ ನಾನು 100ಕ್ಕಿಂತ ಜಾಸ್ತಿ ಮಾರ್ಕ್ಸ್ ಅನ್ನೇ ನೀಡುತ್ತೇನೆ. ಎಲ್ಲರೂ ರವಿಯಂತೆಯೇ ಇರಬೇಕು ಎಂದು ನಾನು ಆಸೆ ಪಡುತ್ತೇನೆ’ ಎಂದಿದ್ದರು. ‘ನಾನು ಗರ್ಭಿಣಿ ಆಗಿರುವಾಗ ನನಗೆ ಹುಷಾರಿರುತ್ತಿರಲಿಲ್ಲ. ನನಗೆ ವಾಂತಿಯಾದಾಗ, ಅದನ್ನು ಕೈಯಲ್ಲಿ ಬಾಚಿದ್ದಾರೆ. ನನಗಾಗಿ ರವಿ ಇಂತಹದ್ದು ಬಹಳ ಮಾಡಿದ್ದಾರೆ’ ಎಂದು ಪತಿ ಬಗ್ಗೆ ಆರತಿ ಹೊಗಳಿದ್ದರು.

ಶೂಟಿಂಗ್ ಸಮಯದಲ್ಲೂ ‘ರವಿ ನನ್ನ ಪಕ್ಕವೇ ಇರುತ್ತಿದ್ದರು. ಮಧ್ಯರಾತ್ರಿಯಾದರೂ ನನಗೆ ಬೇಕಾಗಿದ್ದನ್ನು ತಂದುಕೊಡುತ್ತಿದ್ದರು. ಬೆಳಗ್ಗೆ ಶೂಟಿಂಗ್ ಇದ್ದರೂ, ಅವರು ತಲೆ ಕೆಡಿಸಿಕೊಳ್ಳದೇ ನನ್ನನ್ನು ಕೇರ್ ಮಾಡುತ್ತಿದ್ದರು. ಬೆಳಗ್ಗೆ 5 ಗಂಟೆಗೆ ಮಲಗಿ, ನಂತರ ಶೂಟಿಂಗ್‌ಗೆ ಹೋಗುತ್ತಿದ್ದರು ಎಂದು ಹೇಳಿದ್ದರು. ‘ನನ್ನ ಮಗ ಹುಟ್ಟಿದ ಸಂದರ್ಭದಲ್ಲಿ, ಡೆಲಿವರಿ ಆಯ್ತು ಎಂದು ನನಗೆ ತಿಳಿಸಿದರು. ಆಗ ನಾನು ಮಗು ಯಾವುದು ಎಂದು ಕೇಳಲಿಲ್ಲ. ಆರತಿ ಹೇಗಿದ್ದಾಳೆ ಎಂದು ಕೇಳಿದ್ದೆ’ ಎಂದು ‘ಜಯಂ’ ರವಿ ಹೇಳಿಕೊಂಡಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್​ ಆಗುತ್ತಿದ್ದು, ಇಷ್ಟೊಂದು ಅನ್ನೋನ್ಯತೆಯಿಂದ ಇದ್ದ ಜೋಡಿ ಇದೇಕೆ ದೂರವಾಯ್ತು ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : 60ರಲ್ಲೂ 27ರ ಚಾರ್ಮ್… ಸಖತ್ ಸ್ಟೈಲಿಷ್ ಲುಕ್​​ನಲ್ಲಿ ನಟ ರಮೇಶ್ ಅರವಿಂದ್ ಮಿಂಚಿಂಗ್​..!

 

 

 

 

 

Leave a Comment

DG Ad

RELATED LATEST NEWS

Top Headlines

ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರದ ರಿಲೀಸ್​ ಡೇಟ್​​ ಅನೌನ್ಸ್..!

ಕಮಲ್ ಹಾಸನ್ ಅಭಿನಯದ ಮತ್ತು ಮಣಿರತ್ನಂ ನಿರ್ದೇಶನದ ‘ಥಗ್ ಲೈಫ್’ ಚಿತ್ರ ವಿಶ್ವದಾದ್ಯಂತ 2025ರ ಜೂನ್ 5ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಇಂದು ಕಮಲ್ ಹಾಸನ್ ಅವರ ಹುಟ್ಟುಹಬ್ಬದ

Live Cricket

Add Your Heading Text Here