ತುಮಕೂರು : ತುಮಕೂರಿನಲ್ಲಿ ಮತ್ತೊಂದು ಭೀಕರ ಆ್ಯಕ್ಸಿಡೆಂಟ್ ಸಂಭವಿಸಿದ್ದು, ಖಾಸಗಿ ಬಸ್ ಡಿಕ್ಕಿ ಹೊಡೆದು ಅಮ್ಮ ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ರಾಮಶೆಟ್ಡಿಹಳ್ಳಿ ಗ್ರಾಮದ ಬಳಿ ನಡೆದಿದೆ.
TVS ಎಕ್ಸೆಲ್ನಲ್ಲಿ ಹೋಗ್ತಿದ್ದ ತಾಯಿ, ಮಗಳಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು, ಮಗಳನ್ನು ಶಾಲೆಗೆ ಕರೆದೊಯ್ಯುವಾಗ ದುರಂತ ನಡೆದಿದೆ. ಗೀತಾಂಜನೇಯ ಖಾಸಗಿ ಬಸ್ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ್ದು, ತಾಯಿ ಕಮಲಮ್ಮ, ಮಗಳನ್ನು ವೀಣಾ ಎಂದು ಗುರುತಿಸಲಾಗಿದೆ. ಮೃತ ವೀಣಾ 10ನೇ ತರಗತಿ ಓದುತ್ತಿದ್ದಳು. ಇನ್ನು ಇದೇ ಅಪಘಾತದಲ್ಲಿ ಪಾದಚಾರಿ ಮುದ್ದಪ್ಪ ಎಂಬವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವ ಮೇಲೆತ್ತಲು ಬಿಡದೇ ಸ್ಥಳೀಯರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಅಂಡರ್ ಪಾಸ್ ನಿರ್ಮಾಣ ಮಾಡುವಂತೆ ಸ್ಥಳೀಯರ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಸೊಸೆಗೆ ತಿಳಿದಿರೋ ಸಂಪ್ರದಾಯ ಅತ್ತೆಗೆ ಗೊತ್ತಿಲ್ವಾ? – ನೆಟ್ಟಿಗರ ಕೋಪಕ್ಕೆ ಗುರಿಯಾದ ನೀತಾ ಅಂಬಾನಿ, ಅಂಥದ್ದೇನಾಯ್ತು?