ಮಂತ್ರಾಲಯ ರಾಯರ ಮಠದಲ್ಲಿ ಹುಂಡಿ ಎಣಿಕೆ – 20 ದಿನಗಳಲ್ಲಿ ಬರೋಬ್ಬರಿ 3.73 ಕೋಟಿ ರೂ. ಕಾಣಿಕೆ ಸಂಗ್ರಹ!

ಮಂತ್ರಾಲಯ : ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದ್ದು, ಕೇವಲ 20 ದಿನಗಳಲ್ಲಿ 3.73 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಲಕ್ಷಾಂತರ ಭಕ್ತರು ಮಠಕ್ಕೆ ಭೇಟಿ ನೀಡಿದ್ದು, ಹುಂಡಿ ಎಣಿಕೆಯ ವೇಳೆ ಒಟ್ಟು 3,73,66,587 ರೂಪಾಯಿ ಸಂಗ್ರಹವಾಗಿರುವುದು ತಿಳಿದುಬಂದಿದೆ.

ಮಠದ ಸಿಬ್ಬಂದಿಗಳು ನಡೆಸಿದ ಹುಂಡಿ ಎಣಿಕೆಯ ಸಂಪೂರ್ಣ ವಿವರ ಇಲ್ಲಿದೆ.

  • ಒಟ್ಟು ನಗದು: 3,73,66,587 ರೂ.

  • ಕರೆನ್ಸಿ ನೋಟುಗಳು: 3,62,69,247 ರೂ.

  • ನಾಣ್ಯಗಳು: 10,97,340 ರೂ.

  • ಚಿನ್ನ: 87 ಗ್ರಾಂ

  • ಬೆಳ್ಳಿ: 910 ಗ್ರಾಂ

ಡಿಸೆಂಬರ್ ರಜೆ ಹಿನ್ನೆಲೆ ಮಂತ್ರಾಲಯಕ್ಕೆ ಭಕ್ತರ ಹರಿವು ಹೆಚ್ಚಾಗಿದ್ದು, ರಾಯರ ಸನ್ನಿಧಿಯಲ್ಲಿ ಚಿನ್ನ, ಬೆಳ್ಳಿ ಹಾಗೂ ನಗದು ರೂಪದ ಕಾಣಿಕೆ ಭಾರಿ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಮಠದ ನೂರಾರು ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು. ಭಕ್ತರು ಸಮರ್ಪಿಸಿರುವ ಈ ಬೃಹತ್ ಕಾಣಿಕೆಯು ರಾಯರ ಮೇಲಿನ ಅಚಲ ಭಕ್ತಿಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ : ಎರಡು ಬೈಕ್‌ಗಳ ನಡುವೆ ಭೀಕರ ಅಪಘಾತ!

Btv Kannada
Author: Btv Kannada