ಬೆಂಗಳೂರು : ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಸಿಟ್ಟಾದ ಆಟೋ ಚಾಲಕ ಯುವತಿಗೆ ಅವಾಚ್ಯ ಶಬ್ದಗಳಿಂದ ಬೈದು ಅತಿರೇಕದ ವರ್ತನೆ ತೋರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಟೋ ಚಾಲಕನ ಗುಂಡಾವರ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವತಿ ಫೀಕ್ ಹವರ್ ಅಂತ ಆ್ಯಪ್ನಲ್ಲಿ ಆಟೋ ಬುಕ್ ಮಾಡಿದ್ದಳು. ಒಂದು ಆಟೋ ಬೇಗ ಬಂತು ಅಂತ ಇನ್ನೊಂದು ಆಟೋನಾ ಕ್ಯಾನ್ಸಲ್ ಮಾಡಿದ್ದಾರೆ. ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಆಕ್ರೋಶಗೊಂಡ ಆಟೋ ಚಾಲಕ ಇನ್ನೊಂದು ಆಟೋದಲ್ಲಿ ಹೋಗ್ತಿದ್ದ ಯುವತಿಯನ್ನ ಫಾಲೋ ಮಾಡ್ಕೊಂಡು ಹೋಗಿದ್ದಾನೆ.
ಇನ್ನು ಯುವತಿಯನ್ನ ಫಾಲೋ ಮಾಡ್ಕೊಂಡು ಹೋದ ಆಟೋ ಚಾಲಕ, ಆಟೋ ನಿಲ್ಲಿಸಿ ಯುವತಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಇನ್ನು ಆಟೋ ಚಾಲಕನ ಅತಿರೇಕದ ವರ್ತನೆಯನ್ನು ಯುವತಿ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಬಳಿಕ ವಿಡಿಯೋ ತನ್ನ ಎಕ್ಸ್ನಲ್ಲಿ ಶೇರ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾಳೆ. ಇನ್ನು ವಿಡಿಯೋ ಎಕ್ಸ್ನಲ್ಲಿ ಅಪ್ಲೋಡ್ ಮಾಡಿದ್ದ ಹಾಗೆ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಟೋ ಚಾಲಕನ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಇದನ್ನೂ ಓದಿ : ರಾಯಚೂರು ಶಾಲಾ ಬಸ್ ದುರಂತಕ್ಕೆ ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ ..!