ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬೆಂಗಳೂರು ಪೊಲೀಸರು ತನಿಖೆ ಮುಕ್ತಾಯಗೊಳಿಸಿ ಬುಧವಾರ ಜಾರ್ಜ್ಶೀಟ್ನ್ನು ಯಶಸ್ವಿಯಾಗಿ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ನಟ ದರ್ಶನ್ ಭವಿಷ್ಯವೇ ಅಡಗಿದ್ದು, ಇದರ ಆಧಾರದಲ್ಲಿಯೇ ಕೋರ್ಟ್‌ನ ವಿಚಾರಣೆ ನಡೆಯಲಿದೆ. ಇದೀಗ ಸಿಟಿ ಸಿವಿಲ್ ಕೋರ್ಟ್ನಲ್ಲಿ ದರ್ಶನ್ ಬೇಲ್ ಅರ್ಜಿ ಸಲ್ಲಿಸಲು ತಯಾರಿ ನಡೆಯುತ್ತಿದೆ.
ಗಣೇಶ ಹಬ್ಬದ ನಂತ್ರ ದರ್ಶನ್ ಜಾಮೀನು ಅರ್ಜಿ ಸಲ್ಲಿಕೆ ಮಾಡಲಿದ್ದು, ಚಾರ್ಜ್ಶೀಟ್ ಸಲ್ಲಿಕೆಯಾಗ್ತಿದ್ದಂತೆ ಜಾಮೀನು ಆಟ ಶುರುವಾಗಿದೆ. ರೇಣುಕಸ್ವಾಮಿ ಕೇಸ್‌ನಲ್ಲಿ A-2 ಆಗಿರುವ ದರ್ಶನ್
ತಮ್ಮ ವಕೀಲರ ಮೂಲಕ ಅರ್ಜಿ ಸಲ್ಲಿಸಲು ತಯಾರಿ ನಡೆಸುತ್ತಿದ್ದರೆ. ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸುವ ಸಾಧ್ಯತೆಯಿದ್ದು, ಚಾರ್ಜ್ಶೀಟ್ ಪ್ರತಿ ಸಿಕ್ಕ ನಂತ್ರ ಜಾಮೀನು ಅರ್ಜಿ ಸಲ್ಲಿಕೆ ಮಾಡಲಿದ್ದಾರೆ. ಈಗಾಗಲೇ ಹಿರಿಯ ವಕೀಲ ಸಿ.ವಿ ನಾಗೇಶ್ ಜತೆ ವಿಜಯಲಕ್ಮೀ ಮಾತುಕತೆ ನಡೆಸಿದ್ದು, ವಿಜಯಲಕ್ಮೀ ಅವರು ದರ್ಶನ್ಗೆ ಮಾತ್ರ ವಕೀಲರನ್ನ ನೇಮಕ ಮಾಡಿದ್ದಾರೆ.
ಪತಿಯನ್ನ ಬಳ್ಳಾರಿ ಜೈಲಿನಿಂದ ಹೊರತರಲು ವಿಜಯಲಕ್ಷ್ಮಿಯವರು ರೆಡಿಯಾಗಿದ್ದು, ಸಿ.ವಿ.ನಾಗೇಶ್ ವಾದ ಮಂಡಿಸಲು ದರ್ಶನ್ ವಕಾಲತ್ ಕೂಡ ನೀಡಿದ್ದಾರೆ. ಪ್ರಕರಣದಲ್ಲಿ ದರ್ಶನ್ ಪಾತ್ರದ ಬಗ್ಗೆ ವಾದ ಮಂಡಿಸಲು ಸಿದ್ದತೆ ನಡೆಸಿದ್ದು, ಮುಂದಿನವಾರ ದರ್ಶನ್, ಪವಿತ್ರಾ ಸೇರಿ ಎಲ್ಲರೂ ಅರ್ಜಿ ಸಲ್ಲಿಸೋ ಸಾಧ್ಯತೆಯಿದೆ. ಪೊಲೀಸ್ ಇಲಾಖೆ ರೇಣುಕಾಸ್ವಾಮಿ ಕೊಲೆ ಕೇಸ್ನ್ನು ಗಂಭೀರವಾಗಿ ಪರಿಗಣಿಸಿದ್ದು, ಗಣೇಶ ಚತುರ್ಥಿ ನಂತ್ರ ಬೇಲ್ ಭವಿಷ್ಯ ನಿರ್ಧಾರವಾಗಲಿದೆ.
ಇದನ್ನೂ ಓದಿ : ಲೈಂಗಿಕ ದೌರ್ಜನ್ಯ ಆರೋಪ – ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ FIR..!