ಚಿಕ್ಕೋಡಿ : ನಮ್ಮ ಜಿಲ್ಲೆಯವರು ಯಾರೇ ಸಿಎಂ ಆದ್ರೂ ಸ್ವಾಗತ ಮಾಡ್ತೇನೆ. ಅದರಲ್ಲೂ ಸಚಿವ ಸತೀಶ ಜಾರಕಿಹೋಳಿ ಅವರು ಸಿಎಂ ಆಗುತ್ತಾರೆ ಎಂದಾದರೆ ನನ್ನ ಬೆಂಬಲವಿದೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ಸತೀಶ್ ಜಾರಕಿಹೊಳಿ ಸಿಎಂ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಣ ಸವದಿ ಅವರು, ಬೆಳಗಾವಿಯವರು ಸಿಎಂ ಆದ್ರೆ ಖುಷಿ. ಎಲ್ಲರಿಗೂ ಅಧಿಕಾರ ಬೇಕು, ಯಾರೂ ಸನ್ಯಾಸಿಗಳಲ್ಲ.ಇವತ್ತು ಸನ್ಯಾಸಿಗಳೂ ರಾಜಕಾರಣಕ್ಕೆ ಬರ್ತಿದ್ದಾರೆ ಎಂದಿದ್ದಾರೆ.
ಇನ್ನು ನಾನು ಅನೇಕ ಇಲಾಖೆ ನಿರ್ವಹಿಸಿದ್ದೇನೆ. ಮುಂದೆ ಒಳ್ಳೆ ದಿನಗಳು ಬಂದರೂ ಬರಬಹುದು ಎಂದು ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಇದನ್ನೂ ಓದಿ : ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಕೆ – ಕಮಿಷನರ್ ಬಿ.ದಯಾನಂದ್..!
Post Views: 11