ಕನ್ನಡತಿ ಸೀರಿಯಲ್ ಮೂಲಕ ನಾಡಿನ ಗಮನ ಸೆಳೆದಿದ್ದ ನಟ ಕಿರಣ್ ರಾಜ್, ಸೀರಿಯಲ್ ಮುಗಿದ ಬಳಿಕ ಸಿನಿಮಾ ಕಡೆಗೆ ವಾಲಿದ್ದಾರೆ. ಇದೀಗ ಕಿರಣ್ ರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ರಾನಿ’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.
ಗುರುತೇಜ್ ಶೆಟ್ಟಿ ನಿರ್ದೇಸಿರುವ “ರಾನಿ” ಚಿತ್ರದ ಟ್ರೇಲರ್ ಮಾಸ್ಗೆ ಮಾಸ್, ಕ್ಲಾಸ್ಗೆ ಕ್ಲಾಸ್ ಎನ್ನುವಂತಿದೆ. ಅದ್ದೂರಿ ಮೇಕಿಂಗ್ ಕಾಣುತ್ತಿರುವ ಈ ಸಿನಿಮಾ ಇದೇ ಸೆಪ್ಟೆಂಬರ್ 12 ಗುರುವಾರ ಬಿಡುಗಡೆಯಾಗಲಿದೆ. “ರಾನಿ”ಸಿನಿಮಾ, ಬಿಡುಗಡೆಗೂ ಮುನ್ನವೇ ಬಾರಿ ಸದ್ದು ಮಾಡುತ್ತಿದೆ.
ಸಿನಿಮಾದ ಕ್ವಾಲಿಟಿ ಟ್ರೇಲರ್ನಲ್ಲೇ ಕಾಣುತ್ತಿದ್ದು, ಕಿರಣ್ ರಾಜ್ ಆಕ್ಷನ್, ಲುಕ್, ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ, ಗುರುತೇಜ್ ಶೆಟ್ಟಿ ಸಂಭಾಷಣೆ, ಸಚಿನ್ ಬಸ್ರೂರು ಹಿನ್ನೆಲೆ ಸಂಗೀತ ಹಾಗೂ ರಾಘವೇಂದ್ರ ಬಿ ಕೋಲಾರ ಕ್ಯಾಮರಾ ವರ್ಕ್ ಎಲ್ಲವೂ ಪ್ರೇಕ್ಷಕನಲ್ಲಿ ಬಾರಿ ಕುತೂಹಲ ಮೂಡಿಸಿದೆ.
ಪ್ರತಿ ಸಾರಿಯು ಚಿತ್ರತಂಡ ನಮ್ಮದು ಫ್ಯಾಮಿಲಿ ಆಕ್ಷನ್ ಜಾನರ್ ಸಿನಿಮಾ ಎಂದು ಹೇಳಿಕೊಂಡು ಬಂದಿದೆ. ಟ್ರೇಲರ್ನಲ್ಲೂ ಆ ಅಂಶ ಕಾಣುತ್ತಿದ್ದು, ಟ್ರೇಲರ್ನಂತೆ ಸಿನಿಮಾದಲ್ಲೂ ಪ್ರೇಕ್ಷಕನ ಮನ ಗೆಲ್ಲುತ್ತಾನಾ “ರಾನಿ” ? ಎಂಬುದನ್ನು ಸೆಪ್ಟೆಂಬರ್ 12 ರ ವರೆಗೆ ಕಾದು ನೋಡಬೇಕಾಗಿದೆ.
ಇನ್ನು “ರಾನಿ” ಚಿತ್ರಕ್ಕೆ ಗುರುತೇಜ್ ಶೆಟ್ಟಿ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿದೇಶನ ಮಾಡಿದ್ದಾರೆ. ಸ್ಟಾರ್ ಕ್ರಿಯೇಷನ್ ಬ್ಯಾನರ್ನಲ್ಲಿ ಚಂದ್ರಕಾಂತ್ ಪೂಜಾರಿ ಉಮೇಶ್ ಹೆಗ್ಡೆ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ : ವಿಜಯನಗರ : ಕಡತ ವಿಲೇವಾರಿಗೆ ಲಂಚ ಪಡೆಯುತ್ತಿದ್ದ ಆರೋಪ – ಅಧಿಕಾರಿಗಳಿಗೆ ಚಳಿ ಬಿಡಿಸಿದ ಡಿಸಿ ಎಂ.ಎಸ್ ದಿವಾಕರ್..!