ಹೇಮಾ ಸಮಿತಿ ವರದಿ ಬಳಿಕ ಕೇರಳ ರಾಜ್ಯದ ಮಲಯಾಳಂ ಚಿತ್ರರಂಗ ಶೇಕ್ ಆಗಿದೆ. ವರದಿ ಬಹಿರಂಗವಾದ ಬೆನ್ನಲ್ಲೇ ಅನೇಕ ನಟಿಯರು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷತೆ ಇಲ್ಲ ಅನ್ನೋದನ್ನು ಈ ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಈ ವರದಿಯನ್ನು ಸಮಂತಾ ಮೆಚ್ಚಿಕೊಂಡು ತೆಲುಗು ಚಿತ್ರರಂಗದಲ್ಲೂ ವಾಯ್ಸ್ ಆಫ್ ವುಮೆನ್ಸ್ ವರದಿ ರಚಿಸುವಂತೆ ತೆಲಂಗಾಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಾವು ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರು ಹೇಮಾ ಕಮಿಟಿ ವರದಿಯನ್ನು ಸ್ವಾಗತ ಮಾಡುತ್ತೇವೆ. ಹಾಗೆಯೇ ವುಮನ್ಸ್ ಕಲೆಕ್ಟಿವ್ ಕೇರಳ ಹಾಕಿದ ಪ್ರಯತ್ನಗಳ ಬಗ್ಗೆ ಮೆಚ್ಚುಗೆಯನ್ನು ಸೂಚಿಸುತ್ತೇವೆ. ಕೇರಳದಲ್ಲಿ ವುಮೆನ್ ಇನ್ ಸಿನಿಮಾ ಕಲೆಕ್ಟಿವ್ (WCC)ಯಿಂದ ಪ್ರೇರಿತವಾಗಿ ಟಾಲಿವುಡ್ 2019ರಲ್ಲಿ ಸ್ಥಾಪಿತವಾಗಿರುವ ವಾಯ್ಸ್ ಆಫ್ ವುಮೆನ್ (VOW) ಮೂಲಕ ಇದೇ ರೀತಿಯ ವರದಿ ಹೊರಬರಬೇಕಿದೆ ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಮಂತಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ತೆಲುಗು ಚಲನಚಿತ್ರೋದ್ಯಮದಲ್ಲಿ ಮಹಿಳೆಯರಿಗೆ ಸುರಕ್ಷಿತ ಕೆಲಸದ ವಾತಾವರಣ ಕಲ್ಪಿಸಿಕೊಡಲು ಹಾಗೂ ಉದ್ಯಮ ನೀತಿಯನ್ನು ರೂಪಿಸಲು ಸಹಾಯ ಮಾಡುವ, ಲೈಂಗಿಕ ಕಿರುಕುಳದ ಕುರಿತು ಸಲ್ಲಿಸಿದ ಉಪ ಸಮಿತಿಯ ವರದಿಯನ್ನು ಪ್ರಕಟಿಸಬೇಕೆಂದು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನಾವು ತೆಲಂಗಾಣ ಸರ್ಕಾರವನ್ನು ಈಗಾಗಲೇ ಸಲ್ಲಿಸಿರುವ ಸಬ್ ಕಮಿಟಿ ವರದಿಯನ್ನು ಬಹಿರಂಗಗೊಳಿಸುವಂತೆ ಒತ್ತಾಯಿಸುತ್ತೇವೆ. ಈ ಮೂಲಕ ಚಿತ್ರರಂಗದಲ್ಲಿ ಮಹಿಳೆಯರು ಸೇಫ್ ಆಗಿ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಲು ನಿಯಮಾವಳಿಗಳನ್ನು ರೂಪಿಸಲು ಸರ್ಕಾರಕ್ಕೆ ಸಹಾಯವಾಗುತ್ತೆದೆ ಎಂದು ಸಮಂತಾ ಹೇಳಿದ್ದಾರೆ.
ವರದಿ ಬಿಡುಗಡೆಯಾದ ಬೆನ್ನಲ್ಲೇ ಮಲಯಾಳಂ ಸಿನಿಮಾ ರಂಗದಲ್ಲಿ ಸಹ ಕಲಾವಿದೆಯಾಗಿ ಗುರುತಿಸಿಕೊಂಡಿರೋ ನಟಿ ಸೋನಿಯಾ ಮಲಹಾರ್ ಸೇರಿದಂತೆ ಅನೇಕ ನಟಿಯರು ಮುಂದೆ ಬಂದು, ದೂರುಗಳನ್ನು ದಾಖಲಿಸುತ್ತಿದ್ದಾರೆ. ಇನ್ನೂ ಹಲವರು ದೂರು ನೀಡಲು ಚಿಂತನೆ ಕೂಡ ನಡೆಸಿದ್ದಾರಂತೆ. ಹಾಗಾಗಿ ನಟಿಯರು ಒತ್ತಡದಲ್ಲಿದ್ದಾರೆ ಅನ್ನುವ ಮಾಹಿತಿಯೂ ಇದೆ. ಈವರೆಗೆ ಒಟ್ಟು 17 ದೂರುಗಳು ದಾಖಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಇದನ್ನೂ ಓದಿ : ಬಿಜೆಪಿ ನಾಯಕರಿಗೆ ಬಿಗ್ ಶಾಕ್ - ಸಿಎಂ ಸಿದ್ದರಾಮಯ್ಯ ಕೈ ಸೇರಿದ ಕೊರೋನಾ ಅಕ್ರಮದ ರಿಪೋರ್ಟ್..!