ಬೆಂಗಳೂರು : ರೈತರಿಗೆ ಸುಳ್ಳು ಭರವಸೆ ನೀಡಿ ಸರ್ಕಾರದಿಂದ ಜಮೀನು ಪಡೆದಿದ್ದ ಮಾತಾ ಅಮೃತಾನಂದಮಯಿ ಮಠದ ಮೇಲೆ ತನಿಖೆಗೆ ಆದೇಶ ನೀಡಿದ್ದಾರೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೂಕ್ತ ಕ್ರಮ ಕೈಗೊಂಡು ಪ್ರಸ್ತಾವನೆ ಸಲ್ಲಿಸಲು ಡಿಸಿಗೆ ಆದೇಶಿಸಿದ್ದಾರೆ.
ಅಮೃತಾನಂದಮಯಿ ಮಠದ ಸುಳ್ಳು ಭರವಸೆಯಿಂದ ಸುಮಾರು 25 ಬಡ ರೈತ ಕುಟುಂಬಗಳು ಬೀದಿಗೆ ಬಂದಿದ್ದವು. ಸುಳ್ಳು ಆಶ್ವಾಸನೆ ನೀಡಿ ಸರ್ಕಾರಿ ಜಾಗ ಪಡೆದಿದ್ದ ಮಠದ ಮೇಲೆ ರಾಜ್ಯಪಾಲರು ತನಿಖೆಗೆ ಆದೇಶ ನೀಡಿದ್ದರು. ಮಹಾದೇವಪುರದ ಕಸವನಹಳ್ಳಿಯಲ್ಲಿರೋ ಅಮೃತಾನಂದಮಯಿ ಮಠ 2000ನೇ ಇಸವಿಯಲ್ಲಿ 22 ಎಕರೆ ಜಮೀನು ಪಡೆದಿತ್ತು. 2000 ವಿಧವೆಯರಿಗೆ ಮನೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಅನಾಥಾಶ್ರಮ, ಬ್ರಹ್ಮಾಸ್ತ್ರ ದೇವಸ್ಥಾನ, ಉಚಿತ ಶಿಕ್ಷಣ, ವೈದ್ಯಕೀಯ ಸೌಲಭ್ಯ ನೀಡೊದಾಗಿ ಮಠ ಭರವಸೆ ನೀಡಿತ್ತು.
ಆದರೆ ಮಠ ತಮ್ಮ ಸ್ವಂತಕ್ಕೆ ಬಳಸಿಕೊಂಡು ವಂಚನೆ ಮಾಡಿದೆ. ಊರಿನ ವಿದ್ಯಾರ್ಥಿಗಳನ್ನು ಬಿಟ್ಟು ಹೊರಗಿನ ವಿದ್ಯಾರ್ಥಿಗಳಿಂದ ಲಕ್ಷ ಲಕ್ಷ ಫೀಸ್ ಪಡೆದು ಶಿಕ್ಷಣ ಕೊಡ್ತಿರೋ ಆರೋಪ ಕೇಳಿಬಂದಿದೆ. ಅಮೃತಾನಂದಮಯಿ ಮಠ ಸರ್ಕಾರಕ್ಕೆ ಸಲ್ಲಿಸಿದ್ದ ಯಾವ ಭರವಸೆ ಈಡೇರಿಸಲಿಲ್ಲ. ಈ ಕುರಿತು ಗ್ರಾಮಸ್ಥರು ರಾಜ್ಯಪಾಲರಿಗೆ ದೂರು ನೀಡಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೇರಿ ಸಂಬಂಧಿಸಿದ ಅಧಿಕಾರಿಗಳಿಗೆ ತನಿಖೆಗೆ ಆದೇಶ ನೀಡಿದ್ದಾರೆ.
ಇದನ್ನೂ ಓದಿ : ವಿಕ್ಕಿ ವರುಣ್-ಧನ್ಯಾ ರಾಮ್ಕುಮಾರ್ ನಟನೆಯ ‘ಕಾಲಾಪತ್ಥರ್’ ಚಿತ್ರದ ‘ಬಾಂಡ್ಲಿ ಸ್ಟವ್’ ಹಾಡು ರಿಲೀಸ್..!