ಬೆಂಗಳೂರು : ಚನ್ನಪಟ್ಟಣ ಚುನಾವಣಾ ಅಖಾಡ ರಂಗೇರಿದ್ದು, ಮೈತ್ರಿ ಪಕ್ಷದಲ್ಲೀಗ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಉಪಚುನಾವಣೆಯ ಟಿಕೆಟ್ ಬಿಜೆಪಿಗೋ ಅಥವಾ ಜೆಡಿಎಸ್ಗೋ ಎನ್ನುವ ಗೊಂದಲ ಬಿಜೆಪಿ ಹೈಕಮಾಂಡ್ಗೆ ಕಗ್ಗಂಟಾಗಿ ಪರಿಣಮಿಸಿದೆ.
ಮೈತ್ರಿ ಅಭ್ಯರ್ಥಿಯಾಗಿ ತನಗೇ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿರೋ ಸಿಪಿವೈ, ಟಿಕೆಟ್ ನೀಡದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಇದೀಗ ಸಿ.ಪಿ.ಯೋಗೆಶ್ವರ್ ನಡೆಯಿಂದ ಮೈತ್ರಿ ನಾಯಕರಿಗೆ ಟೆನ್ಷನ್ ಹೆಚ್ಚಾಗಿದೆ. ಇತ್ತ ಚನ್ನಪಟ್ಟಣದಲ್ಲಿ ಹಿಡಿತ ಉಳಿಸಿಕೊಳ್ಳಲು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ರಣತಂತ್ರ ಹೂಡುತ್ತಿದ್ದಾರೆ. ತಮ್ಮ ಪುತ್ರ ಅಥವಾ ಜೆಡಿಎಸ್ಗೆ ಉಪಚುನಾವಣೆಯಲ್ಲಿ ಟಿಕೆಟ್ ಕೊಡಿಸುವ ತೀರ್ಮಾನ ಮಾಡಿದ್ದಾರೆ.
ಇನ್ನು ನಿನ್ನೆ ರಾತ್ರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಭೆ ನಡೆಸಿದರು. ಈ ಸಭೆಯಲ್ಲಿ ಹೆಚ್ಡಿ ಕುಮಾರಸ್ವಾಮಿ ಕೂಡ ಭಾಗಿಯಾಗಿದರು. ಮೀಟಿಂಗ್ನಲ್ಲಿ ಸಿಪಿವೈ ಪರ ಬ್ಯಾಟಿಂಗ್ ಮಾಡಿದ ಬಿಜೆಪಿ ನಾಯಕರು, ಸಿಪಿವೈಗೆ ಟಿಕೆಟ್ ನೀಡುವಂತೆ HDK ಮನವೊಲಿಸಲು ಯತ್ನಿಸಿದ್ದು, ಚನ್ನಪಟ್ಟಣ ಉಪಚುನಾವಣೆ ಟಿಕೆಟ್ ವಿಚಾರವಾಗಿ ಸುದೀರ್ಘ ಚರ್ಚೆ ನಡೆದಿದೆ.
ಈ ವೇಳೆ ಸಿಪಿವೈ ಬಹಿರಂಗ ಹೇಳಿಕೆಗೆ ಅಸಮಾಧಾನ ಹೊರಹಾಕಿದ ಹೆಚ್ಡಿಕೆ ಅವರು, ಕ್ಷೇತ್ರದದಲ್ಲಿ JDSರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಟಿಕೆಟ್ ಬೇಕು ಅಂದ್ರೆ ಹೇಗೆ? ಮೊದಲಿಗೆ JDS ಕಾರ್ಯಕರ್ತರನ್ನ ಮನವೊಲಿಸುವ ಪ್ರಯತ್ನ ಮಾಡಲಿ. ನಮಗೆ ಟಿಕೆಟ್ ಕೊಡಲು ಸಮಸ್ಯೆ ಇಲ್ಲ, ಗೆಲುವು ಒಂದೇ ನಮ್ಮ ಗುರಿ. ಕಾರ್ಯಕರ್ತರು, ಹೆಚ್ಡಿಡಿ ಜೊತೆ ಚರ್ಚಿಸಿ ನಿರ್ಧಾರ ಹೇಳುತ್ತೇನೆ.
ನಂತ್ರ ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಚರ್ಚಿಸೋಣ ಎಂದಿದ್ದಾರೆ.
ಇದನ್ನೂ ಓದಿ : ವಿಕ್ಕಿ ವರುಣ್-ಧನ್ಯಾ ರಾಮ್ಕುಮಾರ್ ನಟನೆಯ ‘ಕಾಲಾಪತ್ಥರ್’ ಚಿತ್ರದ ‘ಬಾಂಡ್ಲಿ ಸ್ಟವ್’ ಹಾಡು ರಿಲೀಸ್..!